Mandya: ಕುರಿ ತಿನ್ನಲು ಬಂದು ಕೊಟ್ಟಿಗೆಯಲ್ಲಿ ಸಿಲುಕಿದ ಚಿರತೆ..!
ಮದ್ದೂರು ತಾಲೂಕಿನ ಕುಂದನಕುಪ್ಪೆ ಗ್ರಾಮದಲ್ಲಿ ಬೆಳಗ್ಗಿನ ಜಾವ ಕುರಿ ತಿನ್ನಲು ಕಬ್ಬಿಣದ ಕೊಟ್ಟಿಗೆಯೊಳಗೆ ಹೋಗಿದ್ದ ಚಿರತೆ ಹೊರಬರಲಾರದೆ ಪರದಾಡಿದೆ.
ಮಂಡ್ಯ: ಕುರಿ ತಿನ್ನಲು ಬಂದಿದ್ದ ಚಿರತೆಯೊಂದು ಕುರಿ ಕೊಟ್ಟಿಗೆಯಲ್ಲಿಯೇ ಸಿಲುಕಿಕೊಂಡಿದೆ. ಮಂಡ್ಯದ ಮದ್ದೂರು ತಾಲೂಕಿನ ಕುಂದನಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕುರಿ-ಮೇಕೆ ಕಟ್ಟಿದ ಕೊಟ್ಟಿಗೆಯೊಳಗೆ ನುಗ್ಗಿ ಚಿರತೆ ಸಿಲುಕಿಕೊಂಡಿದೆ. ಬೆಳಗ್ಗಿನ ಜಾವ ಕುರಿ ತಿನ್ನಲು ಕೊಟ್ಟಿಗೆ ಒಳಗೆ ಹೋಗಿದ್ದ ಚಿರತೆ ಕಬ್ಬಿಣದ ಕೊಟ್ಟಿಗೆಯೊಳಗೆ ಸಿಲುಕಿಕೊಂಡು ಪರದಾಡಿದೆ.
ಇದನ್ನೂ ಓದಿ: ವಕೀಲರಿಗೆ ಬಿಡಿಎ ಫ್ಲಾಟ್ ಗಳನ್ನು ಖರೀದಿಸಲು ಶೇ.10ರಷ್ಟು ರಿಯಾಯಿತಿ!
ಚಿರತೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಮೂಡಿದೆ. ಗ್ರಾಮದಲ್ಲಿ ಹಲವು ದಿನಗಳಿಂದ ಚಿರತೆ ಜನರ ನಿದ್ದೆ ಗೆಡಿಸಿತ್ತು. ಚಿರತೆ ಕೊಟ್ಟಿಗೆಯೊಳಗೆ ಹೋಗುತ್ತಿರುವ ವಿಡಿಯೋವನ್ನು ಗ್ರಾಮಸ್ಥರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ದನದ ಕೊಟ್ಟಿಗೆಯೊಳಗೆ ಚಿರತೆ ಸಿಲುಕಿರುವ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ಭೇಟಿ ನೀಡಿದ್ದಾರೆ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಸತತ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ: ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್ನಲ್ಲಿ ಕೇಂದ್ರ ಇಂಟಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಕೊಲೆ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.