ಬೆಂಗಳೂರು, ಜುಲೈ 17: ಗ್ಯಾಲರಿ ಜಿ, ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಸಹಯೋಗದೊಂದಿಗೆ  'ಮೊಸಾಯಿಕ್ ಆಫ್ ಮಾಡರ್ನಿಟಿ: ಎಕ್ಸ್ಪ್ಲೋರಿಂಗ್  ಡೈವರ್ಸಿಟಿ ಇನ್ ಆರ್ಟ್' ಎಂಬ ಕಲಾಪ್ರದರ್ಶನವನ್ನು ಆಯೋಜಿಸಿದೆ.ಪ್ರದರ್ಶನವು ಜುಲೈ 17 ರಂದು ಆರಂಭಗೊಂಡಿದ್ದು  ಆಗಸ್ಟ್ 15, 2024 ರವರೆಗೆ ನಡೆಯಲಿದೆ.ವಿಶಿಷ್ಟ ಗುಂಪು ಕಲಾ ಪ್ರದರ್ಶನದಲ್ಲಿ ಭಾರತದಾದ್ಯಂತದ ಎಂಟು  ಪ್ರತಿಭಾವಂತ ಕಲಾವಿದರ ಕೃತಿಗಳನ್ನು ಪ್ರದರ್ಶನಗೊಳ್ಳುತ್ತಿವೆ. ಪ್ರತಿಯೊಬ್ಬರೂ ತಮ್ಮ ವಿಶಿಷ್ಟ ಪ್ರಕಾರ ಮತ್ತು ಕಲಾ ಮಾಧ್ಯಮವನ್ನು ಗ್ಯಾಲರಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಪ್ರದರ್ಶನ ವಿವರಗಳು:
ದಿನಾಂಕ: ಜುಲೈ 17 ರಿಂದ ಆಗಸ್ಟ್ 15, 2024
ಸಮಯ: ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ
ಸ್ಥಳ: ಗ್ಯಾಲರಿ ಜಿ (ಏಟ್ರಿಯಮ್, ಮೇನ್ & ಮೆಜ್ಜನೈನ್ ಲೆವೆಲ್)


ಪುರಾಣದಿಂದ ಅಮೂರ್ತದವರೆಗೆ, ತೈಲಗಳಿಂದ ಅಕ್ರಿಲಿಕ್ ಗಳವರೆಗೆ, ಮತ್ತು ಶಾಂತತೆಯಿಂದ ಬಣ್ಣಗಳ ರೋಮಾಂಚಕ ಸಮ್ಮಿಲನದೊಂದಿಗೆ ಈ ಪ್ರದರ್ಶನವು ವೀಕ್ಷಕ್ಷರಿಗೆ ಸ್ಪೂರ್ತಿದಾಯಕ ಮತ್ತು ಸೃಜನಶೀಲ ಜಾಗೃತಿಯ ಭರವಸೆ ಕೊಡುತ್ತದೆ. ಈ ಪ್ರದರ್ಶನದಲ್ಲಿ ಕಾಣಿಸಿಕೊಂಡ ಕಲಾವಿದರ ವಿವರ ಇಲ್ಲಿದೆ.


ಜೈ ಖನ್ನಾ - ಬಣ್ಣ ಮತ್ತು ಸಂಕೀರ್ಣ ವಿವರಗಳ ರೋಮಾಂಚಕ ಬಳಕೆಗೆ ಹೆಸರುವಾಸಿಯಾದ ಜೈ ಖನ್ನಾ ಅವರ ಕೆಲಸವು ಹೆಚ್ಚಾಗಿ ಪುರಾಣ ಮತ್ತು ಆಧ್ಯಾತ್ಮಿಕತೆಯ ವಿಷಯಗಳಿಗೆ ಸಂಬಂಧಿಸಿದ್ದು. ಅವರ ವರ್ಣಚಿತ್ರಗಳು ದೃಶ್ಯ ಕಾವ್ಯದಂತೆ ಇದ್ದು. ಸಾಂಪ್ರದಾಯಿಕ ಭಾರತೀಯ ಕಲಾಪ್ರಕಾರಗಳಲ್ಲದೆ ಸಮಕಾಲೀನ ಸೌಂದರ್ಯಶಾಸ್ತ್ರದೊಂದಿಗೆ ಸಮ್ಮಿಲನಗೊಂಡಿದೆ.


ದಿನೇಶ್ ಮಗರ್ - ದಿನೇಶ್ ಮಗರ್ ಅವರ ಕಲಾಕೃತಿಗಳು ಅವುಗಳ ದಿಟ್ಟ ಸಂಯೋಜನೆಗಳು ಮತ್ತು ಕ್ರಿಯಾತ್ಮಕ ಶಕ್ತಿಗಾಗಿ ಖ್ಯಾತಿ ಪಡೆದಿದೆ. ಅವರ ಕೆಲಸವು ಹೆಚ್ಚಾಗಿ ದೈವಾಂಶ   ಮತ್ತು ಪ್ರಕೃತಿಯೊಂದಿಗಿನ ಅವರ ಆಳವಾದ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ, ಶಾಂತಿ ಮತ್ತು ಆಧ್ಯಾತ್ಮಿಕತೆಯ ಪ್ರಜ್ಞೆಯನ್ನು ಪ್ರಚೋದಿಸಲು ರೂಪಗಳು ಮತ್ತು ವಿನ್ಯಾಸಗಳನ್ನು ಬಳಸಲಾಗಿದೆ.


ಆರೋಹಿ ಸಿಂಗ್ - ಆರೋಹಿ ಸಿಂಗ್ ಒಬ್ಬ ಬಹುಮುಖ ಪ್ರತಿಭೆಯ ಕಲಾವಿದೆಯಾಗಿದ್ದು, ಅವರ ಸಂಗ್ರಹಗಳು ಜಾನಪದ ಕಲೆಯಿಂದ ಹಿಡಇದು ಆಧುನಿಕ ಶೈಲಿ ಸೇರಿದಂತೆ ಎಲ್ಲವನ್ನೂ ಒಳಗೊಂಡಿದೆ. ಅವರ ಕೃತಿಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯಿಂದ ಪಡೆಯಲಾದ ಶ್ರೀಮಂತ ನಿರೂಪಣೆಗಳು ಮತ್ತು ರೋಮಾಂಚಕ ಸಂಗತಿಗಳಿಂದ ನಿರೂಪಿಸಲ್ಪಟ್ಟಿದೆ.


ದಾಮೋದರ್ ಅವಾರೆ - ಅಬ್ಸ್ಟ್ರಾಕ್  ಕಲೆಯಲ್ಲಿ ನೈಪುಣ್ಯ ಹೊಂದಿರುವ ದಾಮೋದರ್ ಅವಾರೆ ಅವರ ವರ್ಣಚಿತ್ರಗಳು ಅವುಗಳ ಪ್ರಶಾಂತ ಮತ್ತು ಚಿಂತನಶೀಲ ಗುಣಗಳಿಂದ ಕೂಡಿದ್ದು ಭಿನ್ನವೆನಿಸುತ್ತದೆ. ಅವರ ಕೃತಿಗಳು ಆಗಾಗ್ಗೆ ಲ್ಯಾಂಡ್ಸ್ಕೇಪ್ ಮತ್ತು ಪಾಕೃತಿಕ ವಿಷಯಗಳನ್ನು ಆಧರಿಸಿದೆ. ಅವುಗಳ ಚಿಂತನಶೀಲ ಸೌಂದರ್ಯವನ್ನು ತನ್ನ ಕ್ಯಾನ್ವಾಸ್ನಲ್ಲಿ ಮೂಡಿಸುತ್ತಾರೆ.


ಇದನ್ನೂ ಓದಿ: "ಮುಡಾ ಬಜಾರ್‌ ವಿದ್ಯೆಯನ್ನು ಜನಸಾಮಾನ್ಯರಿಗೂ ಹೇಳಿಕೊಟ್ಟು ಕೋಟ್ಯಾಧಿಪತಿಗಳನ್ನಾಗಿ ಮಾಡಿ"


ತುಷಾರ್ ಶಿಂಧೆ - ತುಷಾರ್ ಶಿಂಧೆ ಅವರ ಕಲೆಯು ಬಣ್ಣ ಮತ್ತು ರೂಪಗಳ ಆಚರಣೆಯಾಗಿದೆ. ಅವರ ವರ್ಣಚಿತ್ರಗಳು ತಮ್ಮ ಅಭಿವ್ಯಕ್ತಿಶೀಲ ಗೆರೆಗಳು ಮತ್ತು ದಿಟ್ಟ ಮಾದರಿಗಳಿಗೆ ಹೆಸರುವಾಸಿಯಾಗಿವೆ, ಹೆಚ್ಚಾಗಿ ನಗರ ಜೀವನ ಮತ್ತು ನಗರ ಪ್ರದೇಶಗಳ ಗದ್ದಲದ ಕುರಿತ ಪ್ರತಿಬಿಂಬವಾಗಿದೆ. ಅವರ ಕೃತಿಗಳು ಆಯಾಮ ಮತ್ತು ರೂಪದ ದಿಟ್ಟ ಪ್ರಯೋಗಗಳಾಗಿವೆ.


ರೂನಾ ಬಿಸ್ವಾಸ್ - ರೂನಾ ಬಿಸ್ವಾಸ್ ಅವರ ಕೆಲಸವು ಹೆಗ್ಗುರುತು ಮತ್ತು ಸ್ಮರಣೆಯ ವಿಷಯಗಳನ್ನು ಒಳಗೊಂಡಿವೆ.ಅವರ ಮಿಶ್ರ ಮಾಧ್ಯಮ ರಚನೆಗಳು ಆಳ ಮತ್ತು ವೈಯಕ್ತಿಕ, ಪದರಗಳು, ಆತ್ಮಾವಲೋಕನದ ತುಣುಕುಗಳನ್ನು ರಚಿಸಲು ಕೊಲಾಜ್ ಮತ್ತು ಪಠ್ಯಗಳನ್ನು ಅವರು ಉತ್ತಮವಾಗಿ ಬಳಸಿಕೊಂಡಿದ್ದಾರೆ.


ಅನಾಮಿಕ ಕುಚ್ಚನ್ - ಅನಾಮಿಕ ಕುಚ್ಚನ್ ಅವರ ಕಲಾ ಪ್ರಕಾರವು ಸಾಂಪ್ರದಾಯಿಕ  ಮತ್ತು ಆಧುನಿಕತೆಯ ಮಿಶ್ರಣವಾಗಿದೆ. ಅವರ ಕೃತಿಗಳು ಅತಿ ಸೂಕ್ಷ್ಮ ಕುಂಚ  ಮತ್ತು ಸೂಕ್ಷ್ಮ ಬಣ್ಣಗಳನ್ನು ಒಳಗೊಂಡಿವೆ, ಪ್ರಕೃತಿ ಮತ್ತು ಜೀವನದ ವಿಷಯಗಳನ್ನು ಅದರಲ್ಲಿ ಚಿತ್ರಿಸಲಾಗಿದೆ.


ತ್ರಿದಿಬ್ ಬೇರಾ - ತ್ರಿದಿಬ್ ಬೆರಾ ಅವರ ವಿಶಿಷ್ಟ ಶೈಲಿಯು ಗಾಢವಾದ ಗೆರೆಗಳು ಮತ್ತು ವಿಶೇಷ ಕಾಂಟ್ರಾಸ್ಟ್ಗಳಿಂದ ತುಂಬಿದೆ.ಅವರ ಕಲೆಗಳು ಆಗಾಗ್ಗೆ ಮಾನವ ಭಾವನೆಗಳು ಮತ್ತು ಸಾಮಾಜಿಕ ಸಮಸ್ಯೆಗಳನ್ನು ಬೊಟ್ಟು ಮಾಡುತ್ತವೆ, ಆಲೋಚನೆ ಮತ್ತು ಸಂವಾದ ಪ್ರಕ್ರಿಯೆಯನ್ನು ಪ್ರಚೋದಿಸಲು ಶಕ್ತಿಯುತ ದೃಶ್ಯ ಭಾಷೆಯನ್ನು ಬಳಸುತ್ತಾರೆ.


ಇದನ್ನೂ ಓದಿ: HD Revanna: ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ!


ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಕಲಾವಿದ ವಿಶಿಷ್ಟ ದೃಷ್ಟಿಕೋನ ಮತ್ತು ವಿಷಯಾಧಾರಿತ ಸಿದ್ಧಾಂತವನ್ನು ಹೊಂದಿದ್ದಾರೆ. ಎಲ್ಲಾ ಕಲಾ ಉತ್ಸಾಹಿಗಳಿಗೆ ವೈವಿಧ್ಯಮಯ ಮತ್ತು ಸಮೃದ್ಧ ಅನುಭವವನ್ನು ಸೃಷ್ಟಿಸಿ ಕೊಟ್ಟಿದ್ದಾರೆ. ಈ ಪ್ರದರ್ಶನವು ವೈವಿಧ್ಯಮಯ ಕಲಾತ್ಮಕ ಅಭಿವ್ಯಕ್ತಿಗಳನ್ನು ಬೆರೆಸುವ ಗುರಿ ಹೊಂದಿದೆ, ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಚಿತ್ರಣವನ್ನು ಬಿಂಬಿಸಲಿದೆ.


ಗ್ಯಾಲರಿ ಜಿ ಬಗ್ಗೆ: 
ಗ್ಯಾಲರಿ ಜಿ ಬೆಂಗಳೂರಿನಲ್ಲಿರುವ ಪ್ರಮುಖ ಕಲಾ ಗ್ಯಾಲರಿಯಾಗಿದ್ದು, ಸಮಕಾಲೀನ ಮತ್ತು ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರಕಟಿಸಲೆಂದೇ ಸಮರ್ಪಿತವಾಗಿದೆ. ತನ್ನ ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳ ಮೂಲಕ, ಗ್ಯಾಲರಿ ಜಿ ಕಲಾವಿದರಿಗೆ ತಮ್ಮ ಕೆಲಸವನ್ನು ಪ್ರದರ್ಶಿಸಲು ಮತ್ತು ವಿಶಾಲ ಕಲಾತ್ಮಕ ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಲು ಪ್ರಯತ್ನಿಸುತ್ತದೆ.
ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಬಗ್ಗೆ: ಸಂದೀಪ್ & ಗೀತಾಂಜಲಿ ಮೈನಿ ಫೌಂಡೇಶನ್  ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕಲಾತ್ಮಕ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡುತ್ತದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸಲು, ಕಲೆಗಳಲ್ಲಿ ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಪ್ರತಿಷ್ಠಾನ ಬದ್ಧವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.