ಚಿಕ್ಕೋಡಿ: ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಕಳೆಗುಂದಿದ್ದ ತ್ರಿಕಾಲ ಜ್ಞಾನಿ ಅಪ್ಪಯ್ಯ ಸ್ವಾಮಿ ಹಾಗೂ ಚಂದ್ರಯ್ಯ ಸ್ವಾಮಿ ಜಾತ್ರೆಯನ್ನ ಈ ಬಾರಿ ಅದ್ದೂರಿಯಾಗಿ ಆಚರಿಸಲಾಯಿತು. ಪವಾಡ ಪುರುಷ ಅಂತಾನೇ ಹೆಸರುವಾಸಿಯಾಗಿರುವ ಅಪ್ಪಯ್ಯ ಸ್ವಾಮಿ ರಥೋತ್ಸವದ ವೇಳೆ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಮಕ್ಕಳನ್ನ ರಥದ ಮೇಲಿಂದ ಎಸೆಯೋದು ಕೂಡ ಭಾರೀ ಗಮನ ಸೆಳೆಯುತ್ತದೆ. ಅಷ್ಟಕ್ಕೂ ಯಾರು ಆ ಪವಾಡ ಪುರುಷ ಅಂತೀರಾ? ಮುಂದೆ ಓದಿ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಖ್ಯಾತ ನಿರೂಪಕಿಗೆ ಸಂಕಷ್ಟ ತಂದ ʼಗಡ್ಡʼ: ಅಪಹಾಸ್ಯ ಮಾಡಿದಕ್ಕೆ ದಾಖಲಾಯ್ತು FIR!
 
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಈ ಜಾತ್ರೆ ಪ್ರತೀ ವರ್ಷ ನಡೆಯುತ್ತೆ. ಪ್ರತೀ ವರ್ಷ ಬುದ್ದ ಪೌರ್ಣಿಮೆಯಂದು ಗ್ರಾಮದಲ್ಲಿ ಜಾತ್ರೆ ಆಚರಿಸಲಾಗುತ್ತದೆ. ಮಹಾತಪಸ್ವಿ ತ್ರಿಕಾಲ ಜ್ಞಾನಿಗಳಾದ ಅಪ್ಪಯ್ಯ ಹಾಗೂ ಚಂದ್ರಯ್ಯ ಸ್ವಾಮೀಜಿಗಳ ಜಾತ್ರಾ ಮಹೋತ್ಸವ ಅತೀ ವಿಜೃಂಭಣೆಯಿಂದ ಜರುಗುತ್ತದೆ. ಮೂರು ದಿನಗಳ ಕಾಲ ನಡೆಯುವ ಅದ್ದೂರಿ ಜಾತ್ರೆಗೆ ರಾಜ್ಯವಲ್ಲದೆ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವ ಈ ಜಾತ್ರೆಯಲ್ಲಿ ಮಠದ ಪೀಠಾಧಿಪತಿಗಳಿಗೆ ಪಾವಿತ್ರ್ಯತೆಯ ಗೌರವ ಸಲ್ಲಿಸಲಾಗುತ್ತದೆ. ಇನ್ನು ರಥೋತ್ಸವದ ವೇಳೆ ಮಠದ ಪೀಠಾಧಿಪತಿಗಳನ್ನು ನೆಲದ ಮೇಲೆ ನಡೆಸದೆ, ಭಕ್ತರು ತಮ್ಮ ಹೆಗಲ ಮೇಲೆ ಹೊತ್ತು ರಥದವರೆಗೂ ಸಾಗುತ್ತಾರೆ. 


ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ರಥೋತ್ಸವದ ವೇಳೆ ಪುಟ್ಟ ಪುಟ್ಟ ಮಕ್ಕಳಿಗೆ ವಿಶೇಷ ಆಶೀರ್ವಾದ ನೀಡಲಾಗುತ್ತದೆ. ರಥದ ಮೇಲಿರುವ ವ್ಯಕ್ತಿಗಳ ಕೈಯಲ್ಲಿ ಮಗುವನ್ನ ಕೊಟ್ಟರೆ, ಅವರು ಮೇಲಿಂದ ಕೆಳಗೆ ಎಸೆಯುತ್ತಾರೆ. ಇದರಿಂದ ಮಕ್ಕಳಿಗೆ ಮುಂದೆ ಸಕಲ ಅಷ್ಟ ಐಶ್ವರ್ಯಗಳು ಸಿಗುತ್ತವೆ ಎನ್ನುವ ಪ್ರತೀತಿ ಇದೆ. ಇನ್ನು ರಥೋತ್ಸವದ ಮುನ್ನಾ ದಿನ ಕೃಷ್ಣಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ಗ್ರಾಮದ ಪ್ರತಿಯೊಬ್ಬರೂ ಸಹ ಮಡಿಯಲ್ಲಿಯೇ ದೀರ್ಘ ದಂಡ ನಮಸ್ಕಾರ ಹಾಕಿ, ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. 


ಇದನ್ನು ಓದಿ: Actress Death: ಸೊಂಟ ದಪ್ಪವೆಂದು ಮನನೊಂದಿದ್ದ ಚೇತನಾ: ಫ್ಯಾಟ್‌ ಸರ್ಜರಿ ವೇಳೆ ಸಾವು


ಅಲ್ಲದೇ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರೂ ಸಮಾನರಾಗಿ ಶ್ರೀ ಮಠಕ್ಕೆ ಬರುತ್ತಾರೆ. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ರಥೋತ್ಸವದ ನಂತರ ಗ್ರಾಮಸ್ಥರೆಲ್ಲರಿಗೂ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಯಾರೊಬ್ಬರೂ ಮಹಾ ಪ್ರಸಾದ ಪಡೆಯದೆ ತೆರಳಬಾರದೆಂಬುದು ಇಲ್ಲಿನ ಕಟ್ಟಪ್ಪಣೆಯಾಗಿದೆ ಎಂಬುದು ಗಮನಾರ್ಹ. ಎಲ್ಲಿಯವರೆಗೆ ಸಮಾಜದಲ್ಲಿ ಒಳ್ಳೆಯತನ ಮೆರೆದಾಡುತ್ತದೆಯೋ ಅಲ್ಲಿಯವರೆಗೆ ಕೋವಿಡ್ 4ನೇ ಅಲೆ ಅಲ್ಲ, 400ನೇ ಅಲೆ ಬಂದರೂ ಏನು ಮಾಡಲಾಗಲ್ಲ ಅಂತಾರೆ ಶ್ರೀಗಳು. ಒಟ್ನಲ್ಲಿ ಶ್ರೀಗಳ ಆಶೀರ್ವಾದದ ನುಡಿಗಳು ನಿಜಕ್ಕೂ ಭಕ್ತಗಣಕ್ಕೆ ಸಾರ್ಥಕತೆಯ ಭಾವ ಮೂಡಿಸಿದ್ದಂತು ಸುಳ್ಳಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ