Kannada Rajyotsava: ಆತ ಅಪ್ಪಟ ಕನ್ನಡಾಭಿಮಾನಿ.  ಆತನ ಕನ್ನಡಾಭಿಮಾನಿಕ್ಕೆ ಆತ‌ ಕಟ್ಟಿರುವ ಈ ಮನೆಯೇ ಸಾಕ್ಷಿ. ಈ‌ ಮನೆಯಲ್ಲಿ ನಿತ್ಯ ಕನ್ನಡಮ್ಮನಿಗೆ ಪೂ ಜೆ ಸಲ್ಲಿಸುತ್ತಾ ಸದ್ದಿಲ್ಲದೆ ಕನ್ನಡಮ್ಮನ ಸೇವೆ ಮಾಡ್ತಾ, ಮನೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಸೇವೆಗೈದ ಮಹನೀಯರ ಭಾವಚಿತ್ರ ಹಾಕಿಸಿಕೊಂಡು ತನ್ನ ಮನೆಗೆ ಕನ್ನಡ ಬಾವುಟದ ಕೆಂಪು, ಹಳದಿ ಬಣ್ಣ ಬಳಸಿ ಮನೆಯನ್ನು ಕನ್ನಡದ ಬಣ್ಣದ ಮನೆಯಾಗಿಸಿಕೊಂಡು ಬಣ್ಣದ ಮನೆ ಶಿವನಂಜು ಎಂತಲೇ ಪ್ರಸಿದ್ದಿ ಪಡೆದಿದ್ದಾರೆ ಈತ.


COMMERCIAL BREAK
SCROLL TO CONTINUE READING

ಹೌದು! ಹೀಗೆ ಮನೆಯಲ್ಲಿ ಕನ್ನಡಾಂಭೆಗೆ ಪೂಜೆ ಸಲ್ಲಿಸುತ್ತಿರುವ ಈ ಕನ್ನಡಾಭಿಮಾನಿಯ ಹೆಸರು ಶಿವನಂಜು. ಈತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ನಿವಾಸಿ. ಈ ಕನ್ನಡಾಭಿಮಾನಿಯನ್ನು ಸುತ್ತಮುತ್ತಲ ಜನರು ಬಣ್ಣದ ಮನೆ ಶಿವನಂಜು ಅಂತಲೇ ಕರೆಯುತ್ತಾರೆ. ಯಾಕೆಂದ್ರೆ ಇವರ ಕನ್ನಡಪ್ರೇಮ ಅವರ ಮನೆಯನ್ನು ನೋಡಿದ್ರೆ ಗೊತ್ತಾಗುತ್ತೆ‌. ಇವರು ತಮ್ಮ ಕನ್ನಡಾಭಿಮಾನಕ್ಕೆ ಮನೆಯೊಂದನ್ನ ಕಟ್ಟಿ ಆ ಮನೆಗೆ ಕೆಂಪು ಹಳದಿ ಬಣ್ಣದಿಂದ ಸಿಂಗರಿಸಿದ್ದಾರೆ. ಅಷ್ಟೇ ಅಲ್ಲದೆ ಆ ಮನೆಯಲ್ಲಿ ಕನ್ನಡಾಂಭೆಗೆ ಗರ್ಭಗುಡಿ ನಿರ್ಮಿಸಿಗೆ ಅಲ್ಲಿ ಪ್ರತಿನಿತ್ಯ ಕನ್ನಡತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ.


ಇದನ್ನೂ ಓದಿ- ಬೆಳಗಾವಿಯಲ್ಲಿ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್ ತೆಂಡೂಲ್ಕರ್‌


ಈ ಬಣ್ಣದ ಮನೆಯಲ್ಲಿದೆ ಕನ್ನಡ ಸಾಹಿತ್ಯದ ಕಂಪು ಹರಡಿದ ಕನ್ನಡದ ಕವಿಗಳ ಭಾವಚಿತ್ರ:
ಇನ್ನು ಇವರು ಕನ್ನಡಾಂಭೆಗಾಗಿ ನಿರ್ಮಿಸಿರುವ ಈ ಮನೆಯಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಗೈದ ಕುವೆಂಪು, ಮಾಸ್ತಿ ಅಯ್ಯಂಗಾರ್, ದ.ರಾ. ಬೇಂದ್ರೆ ಸೇರಿದಂತೆ ಹಲವು ಕನ್ನಡದ ಮಹಾನ್  ಕವಿಗಳು ಮತ್ತು ಸಾಧಕರ ಫೋಟೋಗಳನ್ನು ಹಾಕಲಾಗಿದ್ದು, ಈ ಮಹಾನ್ ಸಾಧಕರ ಗ್ರಂಥಗಳನ್ನು ಕೂಡ ಇವರ ಮನೆಯಲ್ಲಿ ಇಡಲಾಗಿದೆ‌.


[[{"fid":"264028","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಈ ಬಣ್ಣದ ಮನೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿ ಸ್ನೇಹಿ ತರ ಜೊತೆ ಸಂಭ್ರಮಿಸೋ ಕನ್ನಡಾಭಿಮಾನಿ:
ಈ ಕನ್ನಡಾಭಿಮಾನಿ ತನ್ನ ಮನೆಯಲ್ಲಿರಿಸಿರುವ ಈ ಕನ್ನಡಾಂಭೆಗೆ ನಿತ್ಯ ಪೂಜೆ ಸಲ್ಲಿಸುತ್ತಾ ಬರ್ತಿದ್ದಾರೆ. ಮಾತ್ರವಲ್ಲ ಪ್ರತಿ ವರ್ಷ ನವೆಂಬರ್ 1 ರಂದು ಮನೆಯ ಮುಂದೆ ಸ್ನೇಹಿತರೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರ್ತಿದ್ದಾರೆ. ಇವರ ಈ ಕನ್ನಡ ಪ್ರೇಮವನ್ನು ಕಂಡು ಸ್ಥಳೀಯರು ಕೂಡ ಇವರ ಈ ಕನ್ನಡ ಸೇವೆಯನ್ನು‌ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.


ಇದನ್ನೂ ಓದಿ- ಈ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್ ಹೊರೆ ಇಲ್ಲ!


ಒಟ್ಟಾರೆ  ಈ ಅಪ್ಪಟ ಕನ್ನಡಾಭಿಮಾನಿಯ ಈ‌ ಕನ್ನಡ ಸೇವೆಗೆ  ಹೀಗಾಗಲೇ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿದ್ರೆ, ತಾಲೂಕು ಮತ್ತು ಜಿಲ್ಲಾಡಳಿತ ಇವರಿಗೆ ಕನ್ನಡ ಕೈಂಕರ್ಯದ ಸೇವೆಗೆ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿವೆ. ಈ ಕನ್ನಡಾಭಿಮಾನಿಯ ಈ ನಿಸ್ವಾರ್ಥ ಕನ್ನಡದ ಸೇವೆಗೆ ನಾವು ಕೂಡ ಕೈ ಮುಗಿಯಲೇಬೇಕು. ಕನ್ನಡಾಭಿಮಾನ ಎಂಬುದು ಕೇವಲ ನವೆಂಬರ್ ತಿಂಗಳಿಗಷ್ಟೇ ಸೀಮಿತವಾಗದೆ, ಕನ್ನಡ ರಾಜ್ಯೋತ್ಸವವನ್ನು ಈ ಕನ್ನಡ ಅಭಿಮಾನಿಯಂತೆ ನಿತ್ಯೋತ್ಸವವಾಗಿ ಆಚರಿಸಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ