KSP Recruitment 2022 | ಕಾನ್ಸ್‌ಟೇಬಲ್‌ ಸ್ಪರ್ಧಾರ್ಥಿಗಳಿಗೆ ಸಿಹಿ ಸುದ್ದಿ.. ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ..!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3484 ಪೊಲೀಸ್ ಕಾನ್ಸ್​​ಟೇಬಲ್(CAR/DAR) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ನವೆಂಬರ್ 30, 2022ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಆಸ್ತಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನುಕೂಲಕರವಾಗಿದೆ.

Written by - Krishna N K | Last Updated : Oct 30, 2022, 02:18 PM IST
  • ಕಾನ್ಸ್‌ಟೇಬಲ್‌ ಸ್ಪರ್ಧಾರ್ಥಿಗಳಿಗೆ ಸಿಹಿ ಸುದ್ದಿ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
  • ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ನವೆಂಬರ್ 30, 2022ರವರೆಗೆ ವಿಸ್ತರಿಸಲಾಗಿದೆ
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 02/12/2022
KSP Recruitment 2022 | ಕಾನ್ಸ್‌ಟೇಬಲ್‌ ಸ್ಪರ್ಧಾರ್ಥಿಗಳಿಗೆ ಸಿಹಿ ಸುದ್ದಿ.. ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ..! title=

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 3484 ಪೊಲೀಸ್ ಕಾನ್ಸ್​​ಟೇಬಲ್(CAR/DAR) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ್ದ ಕೊನೆಯ ದಿನಾಂಕವನ್ನು ನವೆಂಬರ್ 30, 2022ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಆಸ್ತಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅನುಕೂಲಕರವಾಗಿದೆ.

ಈ ಮೊದಲು ಅಕ್ಟೋಬರ್ 31, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಈಗ ಅರ್ಜಿ ಸಲ್ಲಿಕೆ ದಿನಾಂಕವನ್ನು ನವೆಂಬರ್ 30, 2022ರವರೆಗೆ ಕರ್ನಾಟಕ ರಾಜ್ಯ ಪೊಲೀಸ್ ವಿಸ್ತರಿಸಿದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ ಇಲ್ಲಿವೆ ನೋಡಿ.

ಇದನ್ನೂ ಓದಿ: ಪೂನಂ ಕೈ ಹಿಡಿದು ನಡೆದ ರಾಹುಲ್‌ : ತಾತನ ಪರಂಪರೆ ಮುದುವರಿಕೆ ಎಂದ ಬಿಜೆಪಿ..!

ಹುದ್ದೆಯ ಮಾಹಿತಿ: ಸಶಸ್ತ್ರ ಪೊಲೀಸ್ ಕಾನ್ಸ್​ಟೇಬಲ್​(CAR/DAR)-ಕರ್ನಾಟಕ ರಾಜ್ಯ- 3064 / ಸಶಸ್ತ್ರ ಪೊಲೀಸ್ ಕಾನ್ಸ್​ಟೇಬಲ್​ (CAR/DAR)- ಕಲ್ಯಾಣ ಕರ್ನಾಟಕ- 420, ಮಾಸಿಕ ವೇತನ 23500-47650. ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, 12ನೇ ತರಗತಿ ಉತ್ತೀರ್ಣರಾಗಿರಬೇಕು. ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ಇರಬೇಕು. ಇನ್ನು ವಯೋಮಿತಿ ಸಡಿಲಿಕೆ ಮಾಡಲಾಗಿದ್ದು, ಪ್ರವರ್ಗ-2ಎ/ಎಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ, ಎಸ್​​ಸಿ/ಎಸ್​ಟಿ ಅಭ್ಯರ್ಥಿಗಳು- 5 ವರ್ಷ ಎಂದು ನಿಗದಿಪಡಿಸಲಾಗಿದೆ.

ಎಸ್​ಸಿ/ಎಸ್​ಟಿ/ ಪ್ರವರ್ಗ-1 ಅಭ್ಯರ್ಥಿಗಳು- 200 ರೂ., ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ & 3ಬಿ ಅಭ್ಯರ್ಥಿಗಳು- 400 ರೂ., ಶುಲ್ಕ ನಿಗದಿ ಪಡಿಸಿಲಾಗಿದೆ. ಲಿಖಿತ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/11/2022, ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 02/12/2022.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News