ವಿಜಯನಗರ : ಹೊಸಪೇಟೆಯ ಉದ್ಯಮಿಯ  ಪುತ್ರಿ  19 ವರ್ಷದ ಯುವತಿ ಸನ್ಯಾಸತ್ವ ಸ್ವೀಕಾರ  ಮಾಡಿದ್ದಾರೆ. ಹೊಸಪೇಟೆಯ ಮಲ್ಲಿಗೆ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವತಿ ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ.  19 ವರ್ಷದ ಮುಮುಕ್ಷು ವಿಧಿ ಕುಮಾರಿ ಜೈನ ದೀಕ್ಷೆ ಪಡೆದವರು .  


COMMERCIAL BREAK
SCROLL TO CONTINUE READING

ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ಯುವತಿ ಮುಮುಕ್ಷು ವಿಧಿ ಕುಮಾರಿ ಇದೀಗ ಆಧ್ಯಾತ್ಮದೆಡೆಗೆ ವಾಲಿದ್ದಾರೆ. ಇವರು ಎಸ್ಸೆಸ್ಸೆಲ್ಸಿಯಲ್ಲಿ   ಶೇ.94, ಮತ್ತು ಪಿಯುಸಿಯಲ್ಲಿ  ಶೇ. 99 ರಷ್ಟು ಅಂಕ ಗಳಿಸಿ ತೇರ್ಗಡೆಯಾಗಿದ್ದರು. 
ಇದೀಗ ಆದಿನಾಥ ಜೈನ ಶ್ವೇತಾಂಬರ ಮುನಿಗಳ ನೇತೃತ್ವದಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ನರರತ್ನ ಸೂರಿಶ್ವರಜೀ ಅವರ ಸಾನಿಧ್ಯದಲ್ಲಿ ಯುವತಿ ಜೈನ ದೀಕ್ಷೆ ಸ್ವೀಕಾರ ಮಾಡಿದ್ದಾರೆ.  


ಇದನ್ನೂ ಓದಿ : ತೇಜಸ್ವಿ ಸೂರ್ಯನಿಗೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವ ತುರ್ತು ಏನಿತ್ತು? ಕಾಂಗ್ರೆಸ್


ದೀಕ್ಷೆ ಅಂಗವಾಗಿ ನಗರದಲ್ಲಿ ಅದ್ದೂರಿ ಶೋಭಾಯಾತ್ರೆ ನಡೆಸಲಾಗಿತ್ತು. ಈ ಶೋಭಾಯಾತ್ರೆಯಲ್ಲಿ ಯುವತಿ ಕುಣಿದು ಕುಪ್ಪಳಿಸಿದ್ದು ಕೂಡಾ ವಿಶೇಷವಾಗಿತ್ತು. ಜೈನ ಸಮುದಾಯದ ಬಾಬುಲಾಲ್ ಜೈನ್  ಮತ್ತು ಅನೇಕ ಗಣ್ಯರ ಸಮ್ಮುಖದಲ್ಲಿ ಜೈನದೀಕ್ಷಾ ಸ್ವೀಕಾರ ಕಾರ್ಯಕ್ರಮ ನೆರವೇರಿತು. 


ಸಾವಿರಾರು ಜನರ ಸಮ್ಮುಖದಲ್ಲಿ ಜೈನ ದೀಕ್ಷೆ ಸ್ವೀಕಾರ ಮಾಡಿದ 19 ವರ್ಷದ ಯುವತಿ  ಮುಮುಕ್ಷು ವಿಧಿ ಕುಮಾರಿ ರೇಖಾ ದೇವಿ, ದಿ.ಕಾಂತಿಲಾಲ್ ಅವರ ಮೂರನೇ  ಪುತ್ರಿ. 


ಇದನ್ನೂ ಓದಿ : ದಂಡ ವಸೂಲಿಗೆ ಮನೆ ಬಾಗಿಲಿಗೆ ಬರಲಿದೆ ವಸೂಲಿ ವಾಹನ: ಪಾಲಿಕೆ ಮತ್ತೊಂದು ನಿರ್ಧಾರ...!


ಜೈನದೀಕ್ಷಾ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಶಾಸಕ ಎಚ್. ಆರ್. ಗವಿಯಪ್ಪ, ಕಾಂಗ್ರೆಸ್ ಮುಖಂಡ ಇಮಾಜ್ ನಿಯಾಜಿ, ಬಿಜೆಪಿಯ ಸಿದ್ದಾರ್ಥ್ ಸಿಂಗ್ ಭಾಗಿಯಾಗಿದ್ದರು.


  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.