ದಂಡ ವಸೂಲಿಗೆ ಮನೆ ಬಾಗಿಲಿಗೆ ಬರಲಿದೆ ವಸೂಲಿ ವಾಹನ: ಪಾಲಿಕೆ ಮತ್ತೊಂದು ನಿರ್ಧಾರ...!

ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಲ್ಲಿ ಗಸ್ತು ವಾಹನಗಳನ್ನು ಬಳಕೆ ಮಾಡುವುದು ಗೊತ್ತೇ ಇದೆ. ಅದೇ ರೀತಿಯಲ್ಲಿ ಸಾರ್ವಜನಿಕರಿಂದ ದಂಡ ವಸೂಲಿ ಮಾಡಲು ನಾಲ್ಕು ವಾಹನಗಳನ್ನು ಬಳಕೆ ಮಾಡಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ  ಮುಂದಾಗಿದೆ.

Written by - Yashaswini V | Last Updated : Jan 18, 2023, 11:48 AM IST
  • ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ದಂಡ ವಸೂಲಿಗೂ ವಾಹನಗಳನ್ನು ಬಿಡುವ ಯೋಜನೆಗೆ ಮುಂದಾಗಿದೆ.
  • ನಗರ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ಸ್ವರೂಪದ ದಂಡ ವಸೂಲಿಗಾಗಿಯೇ 4 ವಾಹನಗಳನ್ನು ಖರೀದಿಸಲು ನಿರ್ಧಾರ
  • ಈ ವಾಹನವು ಅತ್ಯಾಧುನಿಕ ಕ್ಯಾಮರಾ, ಜಿಪಿಎಸ್‌ ಸೌಲಭ್ಯ ಹೊಂದಿರಲಿದ್ದು, ಪಾಲಿಕೆಯ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿರಲಿದೆ.
ದಂಡ ವಸೂಲಿಗೆ ಮನೆ ಬಾಗಿಲಿಗೆ ಬರಲಿದೆ ವಸೂಲಿ ವಾಹನ: ಪಾಲಿಕೆ ಮತ್ತೊಂದು ನಿರ್ಧಾರ...!
Hubli-Dharwad Municipal Corporation

ಹುಬ್ಬಳ್ಳಿ-ಧಾರವಾಡ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ದಂಡ ವಸೂಲಿಗೆ ನೋಟಿಸ್ ಕಳಿಸುತ್ತಿದ್ದ ಪಾಲಿಕೆ ಈಗ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಲ್ಲಿ ಗಸ್ತು ವಾಹನಗಳನ್ನು ಬಳಸುವ ರೀತಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ದಂಡ ವಸೂಲಾತಿಗೆ ವಾಹನಗಳನ್ನು ಬಳಕೆ ಮಾಡಲು ಮುಂದಾಗಿದೆ. 

ಹೌದು.. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆಯಲ್ಲಿ ಗಸ್ತು ವಾಹನಗಳನ್ನು ಬಳಕೆ ಮಾಡುವುದು ಗೊತ್ತೇ ಇದೆ. ಅದೇ ರೀತಿಯಲ್ಲಿ ಸಾರ್ವಜನಿಕರಿಂದ ದಂಡ ವಸೂಲಿ ಮಾಡಲು ನಾಲ್ಕು ವಾಹನಗಳನ್ನು ಬಳಕೆ ಮಾಡಿಕೊಳ್ಳಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ  ಮುಂದಾಗಿದೆ.

ಇದನ್ನೂ ಓದಿ- ಅಯ್ಯೋ ಪಾಪಿ… ಹಿಡಿಯಲು ಯತ್ನಿಸಿದ ವೃದ್ಧನನ್ನು ಒಂದು ಕಿ.ಮೀ ಎಳೆದೊಯ್ದ ಬೈಕ್ ಸವಾರ: ಭಯಾನಕ ವಿಡಿಯೋ ನೋಡಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಈಗಾಗಲೇ ತ್ಯಾಜ್ಯ ನಿರ್ವಹಣೆಗಾಗಿ ಆಟೋ ಟಿಪ್ಪರ್ ಹಾಗೂ ಧೂಳು ಮುಕ್ತ ಮಾಡಲು ವ್ಯಾಕ್ಯೂಮ್ ಕ್ಲೀನರ್ ಸೌಲಭ್ಯವನ್ನು ತರಲಾಗಿದೆ. ಅದೇ ರೀತಿಯಲ್ಲಿ, ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ದಂಡ ವಸೂಲಿಗೂ ವಾಹನಗಳನ್ನು ಬಿಡುವ ಯೋಜನೆಗೆ ಮುಂದಾಗಿದೆ. ವಾಹನಗಳ ಖರೀದಿಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಹಂತದಲ್ಲಿದ್ದು, ಸರ್ಕಾರದಿಂದ ಒಪ್ಪಿಗೆ ದೊರೆತ ಮೇಲೆ ಪಾಲಿಕೆಯು ಟೆಂಡರ್‌ ಕರೆಯಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- Suttur Jatra Mahotsav: ಇಂದಿನಿಂದ 6 ದಿನಗಳ ಕಾಲ ಅದ್ದೂರಿ ಸುತ್ತೂರು ಜಾತ್ರಾ ಮಹೋತ್ಸವ

ನಗರ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ಸ್ವರೂಪದ ದಂಡ ವಸೂಲಿಗಾಗಿಯೇ 4 ವಾಹನಗಳನ್ನು ಖರೀದಿಸಲು ನಿರ್ಧರಿಸಲಾಗಿದ್ದು, ಈ ಕುರಿತಂತೆ ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. 3 ವಾಹನಗಳು ಹುಬ್ಬಳ್ಳಿ ಹಾಗೂ 1 ವಾಹನ ಧಾರವಾಡದಲ್ಲಿ ಕಾರ್ಯಾಚರಿಸಲಿದೆ. ಕೆಲವೊಂದಿಷ್ಟು ವಿಶೇಷ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲು ಅವಕಾಶವಿದೆ. ಈ ವಾಹನವು ಅತ್ಯಾಧುನಿಕ ಕ್ಯಾಮರಾ, ಜಿಪಿಎಸ್‌ ಸೌಲಭ್ಯ ಹೊಂದಿರಲಿದ್ದು, ಪಾಲಿಕೆಯ ನಿಯಂತ್ರಣ ಕೊಠಡಿಗೆ ಸಂಪರ್ಕ ಹೊಂದಿರಲಿದೆ. ಘನತ್ಯಾಜ್ಯ ನಿರ್ವಹಣೆ-ಬೈಲಾ ಉಲ್ಲಂಘನೆಯಡಿ ದಂಡ ವಸೂಲಿ ಮಾಡಲು ಈ ವಾಹನ ಬಳಕೆಯಾಗಲಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News