Bengaluru police : ಮನೆ ಮಾರಲು ಅಡ್ಡಿಯಾದ ಮರಕ್ಕೆ ವಿಷ ಹಾಕಿದ ಮನೆ ಮಾಲೀಕ!
30 ವರ್ಷದ ಹಳೆಯ ಟಿಬಿಬಿಯಾ ಮರಕ್ಕೆ 11 ಕಡೆ ಕೊರೆದು ವಿಷ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ವಿಷ ಹಾಕಿದಕ್ಕೆ ಸದ್ಯ ಮರ ಶೇ.45 ರಷ್ಟು ಒಣಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು : ಮನೆ ಮಾರಲು ಅಡ್ಡಿಯಾದ ಮರ ಮನೆಮಾಲೀಕ ವಿಷ ಹಾಕಿದ್ದಾನೆಂದು ಸ್ಥಳೀಯರು ಆರೋಪಿಸಿರುವ ಘಟನೆ ನಗರದ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.
30 ವರ್ಷದ ಹಳೆಯ ಟಿಬಿಬಿ(TBB)ಯಾ ಮರಕ್ಕೆ 11 ಕಡೆ ಕೊರೆದು ವಿಷ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ವಿಷ ಹಾಕಿದಕ್ಕೆ ಸದ್ಯ ಮರ ಶೇ.45 ರಷ್ಟು ಒಣಗಿದೆ ಎಂದು ಆರೋಪಿಸಲಾಗಿದೆ. ಬಿಬಿಎಂಪಿ ಅರಣ್ಯ ಸಿಬ್ಬಂದಿಗಳು ಸ್ಥಳೀಯರಿಂದ ವಿಷಯ ತಿಳಿದು ಸ್ಥಳಕ್ಕೆ ಬಂದು, ಈಗ ಆರೈಕೆಗೆ ಮುಂದಾಗಿದ್ದಾರೆ. ಮರ ತಜ್ಞ ವಿಜಯ್ ನಿಶಾಂತ್ ಅವರು ಮರದಲ್ಲಿದ್ದ ರಂದ್ರಗಳಿಂದ ವಿಷ ಹೊರಗೆ ತೆಗೆದಿದ್ದಾರೆ. ಮರ ಪುನಶ್ಚೇತನಕ್ಕೆ ಬೇಕಾದ ಔಷಧಿ ತುಂಬಲಾಗಿದೆ.
ಇದನ್ನೂ ಓದಿ : ಕಾಲೇಜು ಆವರಣದಲ್ಲಿ ಹಿಜಾಬು ಮತ್ತು ಕೇಸರಿ ಶಾಲು ಧಾರಿಗಳು ಎದುರು ಬದುರಾದಾಗ...!
ಅಲ್ಲದೆ, ಸಧ್ಯ ಮನೆ ಮಾಲೀಕನ ವಿರುದ್ಧ ಎಫ್ ಐಆರ್(FIR) ದಾಖಲಾಗಿದೆ. ಮನೆಯಲ್ಲಿ ಮಾಲೀಕ ಇರಲಿಲ್ಲ, ಬಾಡಿಗೆದಾರರು ಮಾತ್ರ ಇದ್ದಾರೆ. ಮಾಲೀಕನಿಗಾಗಿ ಮಾಹಿತಿ ಕಲೆಹಾಕಲಾಗುತ್ತಿದೆ. ಕಾರಣ ತಿಳಿದರೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಲಯ ಉಪ ವಲಯ ಅರಣ್ಯಾಧಿಕಾರಿ ಗೋವಿಂದರಾಜು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.