ಕಾಲೇಜು ಆವರಣದಲ್ಲಿ ಹಿಜಾಬು ಮತ್ತು ಕೇಸರಿ ಶಾಲು ಧಾರಿಗಳು ಎದುರು ಬದುರಾದಾಗ...!

ಹಿಜಾಬ್ ವಿವಾದಕ್ಕೆ  ಸಂಬಂಧಿಸಿದಂತೆ, ಉಡುಪಿಯಲ್ಲಿ  ನಡೆಯುತ್ತಿರುವ  ವಿದ್ಯಾರ್ಥಿಗಳ ಪ್ರತಿಭಟನೆ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ.

Written by - Ranjitha R K | Last Updated : Feb 8, 2022, 11:59 AM IST
  • ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ, ಉಡುಪಿಯಲ್ಲಿ ಪ್ರತಿಭಟನೆ
  • ಕಾಲೇಜು ಆವರಣದಲ್ಲಿ ಪರಸ್ಪರರ ವಿರುದ್ಧ ಘೋಷಣೆ
  • ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನ
ಕಾಲೇಜು ಆವರಣದಲ್ಲಿ ಹಿಜಾಬು ಮತ್ತು ಕೇಸರಿ ಶಾಲು ಧಾರಿಗಳು ಎದುರು ಬದುರಾದಾಗ...!  title=
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ, ಉಡುಪಿಯಲ್ಲಿ ಪ್ರತಿಭಟನೆ (photo zee news)

ಉಡುಪಿ : ಹಿಜಾಬ್ ವಿವಾದಕ್ಕೆ  (Hijab Controversy) ಸಂಬಂಧಿಸಿದಂತೆ, ಉಡುಪಿಯಲ್ಲಿ  ನಡೆಯುತ್ತಿರುವ  ವಿದ್ಯಾರ್ಥಿಗಳ ಪ್ರತಿಭಟನೆ (Student protest)ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಉಡುಪಿಯ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಿದ ಬಾಲಕಿಯರು ಮತ್ತು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಹಿಜಾಬ್  (Hijab) ಧರಿಸಿದ್ದ ವಿದ್ಯಾರ್ಥಿಗಳು ಮತ್ತು  ಕೇಸರಿ ಬಣ್ಣದ ಶಾಲು ಹಾಕಿಕೊಂಡು ಬಂದಿದ್ದ  ವಿದ್ಯಾರ್ಥಿಗಳು,  ಕಾಲೇಜು ಆವರಣದಲ್ಲಿ ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ನಡುವೆ, ಪೊಲೀಸರು (Police) ಮತ್ತು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸುತ್ತಿದೆ. ತರಗತಿಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗುತ್ತಿದೆ. 

ಇದನ್ನೂ ಓದಿ : Basavaraj Bommai: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,030 ಕೋಟಿ ರೂ. ಅನುದಾನಕ್ಕೆ ಮನವಿ

ಹಿಜಾಬ್ ವಿವಾದದ ವಿಷಯವು ಸದ್ಯಕ್ಕೆ ಹೈಕೋರ್ಟ್‌ ಅಂಗಳದಲ್ಲಿದೆ.  ಈ ಪ್ರಕರಣದ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ (Karnataka high court) ನಡೆಯಲಿದೆ.  

ಒಂದು ಕಡೆ ಮುಸ್ಲಿಂ ಹುಡುಗಿಯರು ಹಿಜಾಬ್ (Hijab contraversy) ತಮ್ಮ ಧಾರ್ಮಿಕ ಉಡುಗೆಯ ಭಾಗ ಎಂದು ಹೇಳುತ್ತಿದ್ದಾರೆ. ಹಿಜಾಬ್ ಧರಿಸಿಯೇ ಮನೆಯಿಂದ ಹೊರಡುವುದು ವಾಡಿಕೆ. ಹಿಜಾಬ್ ಧರಿಸುವುದನ್ನು ತಡೆಯುವುದು ತಪ್ಪು ಎನ್ನುವುದು ಈ ವಿದ್ಯಾರ್ಥಿಗಳ ವಾದ. ಮತ್ತೊಂದೆಡೆ ಮುಸ್ಲಿಂ ವಿದ್ಯಾರ್ಥಿಗಳು  ಧಾರ್ಮಿಕ ವಸ್ತ್ರ ಧರಿಸಿ ಕಾಲೇಜಿಗೆ ಬಂದರೆ, ನಾವು ಕೂಡಾ ಕೇಸರಿ ಶಾಲು ಹಾಕಿಕೊಂಡೇ ಕಾಲೇಜಿಗೆ ಬರುತ್ತೇವೆ ಎನ್ನುವುದು ಹಿಂದೂ ವಿದ್ಯಾರ್ಥಿಗಳ ವಾದ.  

ಇದನ್ನೂ ಓದಿ : ಸಿಎಂ ಆಗಿದ್ದ ಸಿದ್ದರಾಮಯ್ಯಗೆ ಕೇವಲ ಅಲ್ಪಸಂಖ್ಯಾತರು ಕಾಣುತ್ತಿರುವುದು ದುರಂತ: ಬಿಜೆಪಿ

ಕರ್ನಾಟಕ ಸರ್ಕಾರದ ಹೊಸ ಆದೇಶದ ಪ್ರಕಾರ, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್ (dress code) ಕಡ್ಡಾಯವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಪ್ರಸ್ತುತ, ಈ ನಿರ್ಧಾರವು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಖಾಸಗಿ ಶಾಲೆಗಳು ತಮ್ಮ ಉಡುಗೆಯನ್ನು ನಿರ್ಧರಿಸಬಹುದು. ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. 

'ಹಿಜಾಬ್ ವಿವಾದ' ಶುರುವಾಗಿದ್ದು ಹೇಗೆ?
ಉಡುಪಿಯ ಕಾಲೇಜೊಂದರಿಂದ ಹಿಜಾಬ್ ಬಗ್ಗೆ ವಿವಾದ ಶುರುವಾಗಿದೆ. ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಕಾಲೇಜು ಗೇಟ್ ಬಳಿ ತಡೆಯಲಾಗಿತ್ತು. ಇದಾದ ನಂತರ, ಹಿಜಾಬ್ ಧರಿಸಲು ಅವಕಾಶ ನೀಡದಿರುವುದು ಅಸಾಂವಿಧಾನಿಕ ಎಂದು ವಿದ್ಯಾರ್ಥಿಯೊಬ್ಬರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ನಂತರ ಈ ವಿವಾದ ತಾರಕಕ್ಕೇರಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News