ಬೆಳಗಾವಿ: ಬ್ರಿಟಿಷರ ಕಾಲದಲ್ಲಿ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 9 ಕಂಪನಿಗಳಿಗೆ ಬ್ರಿಟಿಷರ ಕಾಲದಲ್ಲಿ ಗುತ್ತಿಗೆ ನೀಡಲಾಗಿರುವ ಸುಮಾರು 5150 ಎಕರೆ ಅರಣ್ಯ ಭೂಮಿಯ ಮರು ವಶಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಎರಡು ಕಾಯಿಲೆ ಇದ್ದವರು ಯಾವತ್ತೂ ಹಸಿರು ಬಟಾಣಿ ಸೇವಿಸಬೇಡಿ...!


ವಿಧಾನಪರಿಷತ್ತಿನಲ್ಲಿಂದು ಕುಶಾಲಪ್ಪ ಎಂ.ಪಿ. (ಸುಜಾ) ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೊಡಗು ಜಿಲ್ಲೆಯಲ್ಲಿ ಮರ್ಕೆರಾ ರಬ್ಬರ್ ಕಂಪನಿ (1074 ಎಕರೆ), ನೀಲಾಂಬುರ್ ರಬ್ಬರ್ ಕಂಪನಿಗೆ (713.03 ಎಕರೆ), ಥಾಮ್ಸನ್ ರಬ್ಬರ್ ಕಂಪನಿ (625 ಎಕರೆ), ಪೋರ್ಟ್ ಲ್ಯಾಂಡ್ ರಬ್ಬರ್ ಕಂಪನಿ (1289.29 ಎಕರೆ), ಟಾಟಾ ಕಾಫಿ ಲಿ. (923.378 ಎಕರೆ), ಗೈನ್ ಲೋರೆನ್ ಪ್ಲಾಂಟೇಷನ್ (279.748 ಎಕರೆ), ಚಾಮರಾಜನಗರ ಜಿಲ್ಲೆಯ ಎಮರಾಲ್ಡ್ ಹೆವೆನ್ ಎಸ್ಟೇಟ್, ಬೇಡಗುಳಿ (37.25 ಎಕರೆ), ಬಿಳಿಗಿರಿ ರಂಗನ ಎಸ್ಟೇಟ್, ಬೇಡಗುಳಿ (25 ಎಕರೆ), ನೀಲಗಿರಿ ಪ್ಲಾಂಟೇಷನ್ ಲಿ. ಹೊನ್ನಮೇಟಿ  184 ಎಕರೆ ಸೇರಿ ಒಟ್ಟು 5150 ಎಕರೆ ಜಮೀನನ್ನು ಗುತ್ತಿಗೆ ನೀಡಲಾಗಿದೆ ಎಂದು ವಿವರಿಸಿದರು.


1492 ಕೋಟಿ ರೂ. ಬಾಕಿ:
ಸದರಿ ಕಂಪನಿಗಳು ಹಲವು ದಶಕಗಳಿಂದ ಗುತ್ತಿಗೆ ಹಣವನ್ನೂ ಪಾವತಿಸಿರುವುದಿಲ್ಲ. ಈ 9 ಕಂಪನಿಗಳಿಂದ ಇಲಾಖೆಗೆ ಬಡ್ಡಿ ಮತ್ತು ದಂಡ ಸೇರಿ ಒಟ್ಟು 1492.18 ಕೋಟಿ ರೂಪಾಯಿ ಬರಬೇಕಿದೆ ಎಂದೂ ತಿಳಿಸಿದರು. ಕಂಪನಿಗಳು ತಮಗೆ 999 ವರ್ಷಗಳಿಗೆ ಲೀಸ್ ನೀಡಲಾಗಿತ್ತು ಎಂದು ಕಂಪನಿಗಳು ವಾದಿಸುತ್ತಿದ್ದವು. 2012ರಲ್ಲಿ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿ ಈ ಗುತ್ತಿಗೆ ಅವಧಿಯನ್ನು 99 ವರ್ಷಕ್ಕೆ ತಗ್ಗಿಸಿದ್ದು, ಅವಧಿ ಮುಗಿದ ಗುತ್ತಿಗೆ ಅರಣ್ಯ ಭೂಮಿಯ ಮರು ವಶಕ್ಕೆ ನೋಟಿಸ್ ನೀಡಿತ್ತು. ಆ ಕಂಪನಿಗಳು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದು, ಪ್ರಸ್ತುತ ಪ್ರಕರಣ ಉಚ್ಚ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. 12.12.2024ರಂದು ವಿಚಾರಣೆಗೆ ಬರಲಿದೆ ಎಂದೂ ಮಾಹಿತಿ ನೀಡಿದರು.


ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋದು ವಿರಾಟ್‌ ಅಂದ್ಕೊಂಡ್ರಾ? ಅಲ್ಲ... ರೋಹಿತ್‌, ಕೊಹ್ಲಿ ಇಬ್ಬರನ್ನೂ ಹಿಂದಿಕ್ಕಿ 30 ಕೋಟಿ ಸಂಬಳ ಪಡೀತಾನೆ ಈ ಕ್ರಿಕೆಟಿಗ


ಕಾರ್ಯಪಡೆ ರಚನೆ :
ತಾವು ಸಚಿವರಾದ ಬಳಿಕ ಗುತ್ತಿಗೆ ಅರಣ್ಯಭೂಮಿಯ ಮರು ವಶಕ್ಕೆ ಪಡೆಯಲು 5 ಜನ ಸದಸ್ಯರ ಕಾರ್ಯಪಡೆಯನ್ನು ರಚಿಸಲಾಗಿದ್ದು, ಈ ಪಡೆಯು ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚಿಸಿ, ದಾಖಲೆಗಳನ್ನು ಒಗ್ಗೂಡಿಸಿ ಭೂಮಿ ಮರಳಿ ಪಡೆಯಲು ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ವಿವಿಧ ಉದ್ದೇಶಗಳಿಗೆ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಿರುವ ಪ್ರಕರಣಗಳ ಪರಿಶೀಲನೆ, ಗೇಣಿ ವಸೂಲಾತಿ, ಅರಣ್ಯ ಪ್ರದೇಶವನ್ನು ಇಲಾಖೆಗೆ ಹಿಂಪಡೆಯುವ ಬಗ್ಗೆ ಕಾರ್ಯಪಡೆ ಅಧ್ಯಕ್ಷರು ಮತ್ತು ಸದಸ್ಯರು ಹಲವು ಸಭೆ ನಡೆಸಿ, ಆದ್ಯತೆಯ ಆಧಾರದಲ್ಲಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲು ಶ್ರಮಿಸುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ