ಬೆಳಗಾವಿ: ಏನೇ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ ಎಂದು ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.ಅವರು ಗೋಕಾಕ್ ತಾಲೂಕಿನ ಕೊನ್ನುರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Taraka Ratna : ʼಅಣ್ಣನಿಗೆ ಅಸಂಖ್ಯಾತ ಅಭಿಮಾನಿಗಳ ಆರ್ಶೀವಾದ ಇದೆʼ ಗುಣಮುಖರಾಗ್ತಾರೆ


"ನಾನು 6 ಬಾರಿ ಶಾಸಕನಾಗಿ ಈಗ 7 ನೆ ಬಾರಿ ಶಾಸಕನಾಗಿದ್ದೇನೆ.8 ನೆ ಬಾರಿ ಶಾಸಕನಾಗುವ ನಿರ್ಧಾರ ನಿಮ್ಮ ಮೇಲೆ ಬಿಟ್ಟಿದ್ದೇನೆ.ಮುಂದಿನ ಬಾರಿ ಶಾಸಕನಾದ ಮೇಲೆ ರಾಜಕೀಯದಿಂದ ನಿವೃತ್ತಿ ಆಗಬೇಕೆಂದಿದ್ದೇನೆ.ಆದರೆ ಇದೆ ಬಾರಿ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಆದರೆ ಆ ಮಹಾನಾಯಕನಿಗೆ ಚಾಲೆಂಜ ಮಾಡಲಿಕ್ಕೆ ನಾನು ಚುನಾವಣೆ ನಿಲ್ಲುತಿದ್ದೇನೆ.ಅವನನ್ನು ಮೂಲೆಗೆ ಹಚ್ಚುವ ಸಲುವಾಗಿ ಚುನಾವಣೆ ನಿಲ್ಲುತಿದ್ದೇನೆ. ನನ್ನ ಮೇಲೆ ಷಡ್ಯಂತ್ರ ಮಾಡಿ ಒಂದು ಶಂಡನಂತೆ ರಾಜಕೀಯ ಮಾಡಿದ್ದಾನೆ.ಅವನನ್ನು ಪೂರ್ಣ ಪ್ರಮಾಣ ಮನೆಗೆ ಹಚ್ಚುವ ತನಕ ರಾಜಕೀಯದಿಂದ ನಿವೃತ್ತಿ ಆಗೊದಿಲ್ಲ.ಎನೆ ತ್ಯಾಗ ಮಾಡಿಯಾದರೂ 2023 ಕ್ಕೆ ಮತ್ತೆ ಬಿಜೆಪಿ ಮುಖ್ಯಮಂತ್ರಿ ಮಾಡ್ತೀನಿ ಎಂದು ಶಾಸಕ ರಮೇಶ ಜಾರಕಿಹೋಳಿ ಶಪಥಮಾಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.