ಬೆಂಗಳೂರು: ರಕ್ಷಣಾ ಪಡೆಯ ಮಹತ್ವಾಕಾಂಕ್ಷಿ ಯೋಜನೆ ಎಂದು ಹೇಳಲಾಗುತ್ತಿರುವ ಕೇಂದ್ರ ಸರ್ಕಾರದ ಕಳೆದ ಎರಡು ದಿನಗಳ ಹಿಂದೆ ಘೋಷಿಸಿದ್ದ ಅಗ್ನಿಪಥ್ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ.


COMMERCIAL BREAK
SCROLL TO CONTINUE READING

ಅಗ್ನಿಪಥ್ ಯೋಜನೆ ಖಂಡಿಸಿರುವ ಪ್ರತಿಭಟನಾಕಾರರು ದೇಶದೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆ ಉಗ್ರ ರೂಪ ಪಡೆಯುತ್ತಿದೆ. ಬಿಹಾರ, ಉತ್ತರಾಖಂಡ, ಉತ್ತರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಹೆಸರಲ್ಲಿ ರೈಲು ತಡೆ, ಕಲ್ಲು ತೂರಾಟಗಳು ನಡೆದಿವೆ.‌‌ ತೆಲಂಗಾಣದಲ್ಲಿ‌‌‌ ಓರ್ವ ಬಲಿಯಾಗಿದ್ದಾನೆ. ದಿಢೀರ್ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ರೈಲ್ವೇ‌ ಪೊಲೀಸರು ತುರ್ತು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ದೇಶನ ನೀಡಿದ್ದಾರೆ.


ಇದನ್ನೂ ಓದಿ: ದೇವರಕೋಣೆಯಲ್ಲಿ ಮಾಡೋ ಈ ತಪ್ಪು ನಿಮ್ಮ ನೆಮ್ಮದಿ ಹಾಳು ಮಾಡಬಹುದು!


ಅಗ್ನಿಪಥ್ ಯೋಜನೆ ವಿರೋಧಿಸಿ ವಿವಿಧ ರಾಜ್ಯಗಳಲ್ಲಿ‌ ನಡೆಯುತ್ತಿರುವ ಹಿಂಸಾಚಾರ ರಾಜ್ಯದಲ್ಲಿಯೂ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ನೈರುತ್ಯ ರೈಲ್ವೇ ಇಲಾಖೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ ಆರ್‌ಪಿಎಫ್‌ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಮತ್ತೊಂದೆಡೆ ಭದ್ರತಾ ವಿಭಾಗದ ರೈಲ್ವೇ ಅಧಿಕಾರಿಗಳು‌ ಆಯಾ ವಿಭಾಗದ‌ ರೈಲ್ವೇ ಪೊಲೀಸರಿಗೆ ಆಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ.


ಬೆಂಗಳೂರಿ‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೈಯ್ಯಪ್ಪನಹಳ್ಳಿಯ ವಿಶ್ವೇಶ್ವರಯ್ಯ ರೈಲು ನಿಲ್ದಾಣ, ಯಶವಂತಪುರ,‌ ಕಂಟೋನ್ಮೆಂಟ್ ರೈಲು ನಿಲ್ದಾಣ,  ಹುಬ್ಬಳಿ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ಮೈಸೂರು ಹಾಗೂ ಬಳ್ಳಾರಿ ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾವಹಿಸುವಂತೆ ತಾಕೀತು ಮಾಡಲಾಗಿದೆ. ರೈಲ್ವೇ‌ ನಿಲ್ದಾಣಗಳ ಜೊತೆಗೆ ರೈಲ್ವೇ ಹಳಿಗಳ‌ ಮೇಲೆಯೂ ಪ್ರತಿಭಟನಾಕಾರರು ಪ್ರತಿಭಟನೆ‌ ನಡೆಸಿ‌ ರೈಲು ತಡೆ ಸಾಧ್ಯತೆ ಹಿನ್ನೆಲೆ ಗಸ್ತು ಹೆಚ್ಚಿಸಲು ಸೂಚಿಸಲಾಗಿದೆ‌.


ಕಾನೂನು ಪ್ರಕಾರ ರೈಲ್ವೇ ನಿಲ್ದಾಣದಲ್ಲಿ ಅಥವಾ ರೈಲ್ವೇ ಹಳಿಗಳ ಮೇಲೆ ಪ್ರತಿಭಟನೆ, ಧರಣಿ ಅಥವಾ ರೈಲು ತಡೆಗೆ ಮುಂದಾಗುವುದು‌ ನಿಷಿದ್ಧ. ಹೀಗಾಗಿ ಕೆಲ‌ ಪ್ರತಿಭಟನಾಕಾರರು ಪ್ರಯಾಣಿಕರ ವೇಷಧರಿಸಿ ಒಳಬಂದು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಸಿಕಂದರಾಬಾದ್ ರೈಲಿಗೆ ಬೆಂಕಿ ಇಟ್ಟು ಕಲ್ಲು ತೂರಾಟ ನಡೆಸಲಾಗಿತ್ತು. ಹೀಗಾಗಿ ಅವಕಾಶ ಹೆಚ್ಚಿರುವುದರಿಂದ ರೈಲ್ವೇ ನಿಲ್ದಾಣಗಳಲ್ಲಿ ಭದ್ರತೆ, ತಪಾಸಣೆ ಹೆಚ್ಚಿಸಲಾಗಿದೆ. 


ಇದನ್ನೂ ಓದಿ: ಮಳೆಯಲ್ಲಿ ಒದ್ದೆಯಾದರೂ ಕೆಡುವುದಿಲ್ಲ ಸ್ಯಾಮ್‌ಸಂಗ್‌ನ ಪ್ರಬಲ 5G ಸ್ಮಾರ್ಟ್‌ಫೋನ್ !


ಅನುಮಾನಾಸ್ಪಾದ ವ್ಯಕ್ತಿಗಳು ಕಂಡುಬಂದರೆ ವಶಕ್ಕೆ‌ ಪಡೆಯುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಕಾನೂನು‌ ಸುವ್ಯವಸ್ಥೆ‌ಗೆ ಧಕ್ಕೆ ಸಾಧ್ಯತೆ ಹಿನ್ನೆಲೆ ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಅಲರ್ಟ್ ಆಗಿರುವಂತೆ ಸಂಬಂಧ ಪಟ್ಟ ಹಿರಿಯ‌ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ‌ ನೀಡಿರುವುದಾಗಿ ರೈಲ್ವೇ ಎಸ್ಪಿ ಸಿರಿಗೌರಿ ಮಾಹಿತಿ‌ ನೀಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.