ಮಳೆಯಲ್ಲಿ ಒದ್ದೆಯಾದರೂ ಕೆಡುವುದಿಲ್ಲ ಸ್ಯಾಮ್‌ಸಂಗ್‌ನ ಪ್ರಬಲ 5G ಸ್ಮಾರ್ಟ್‌ಫೋನ್ !

Samsung Galaxy A73 5G: : ಸ್ಯಾಮ್‌ಸಂಗ್‌ನ ಜಲನಿರೋಧಕ 5G ಸ್ಮಾರ್ಟ್‌ಫೋನ್   ಬಗ್ಗೆ ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗಿದೆ.  ಈ ಸ್ಮಾರ್ಟ್‌ಫೋನ್‌ನಲ್ಲಿ  ಬಳಕೆದಾರರಿಗೆ ಪ್ರಚಂಡ ಕ್ಯಾಮೆರಾದೊಂದಿಗೆ ಇನ್ನೂ ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ. 

Written by - Yashaswini V | Last Updated : Jun 17, 2022, 02:57 PM IST
  • ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ73 5ಜಿ ಅನ್ನು ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ
  • ಇದರ ವಿಶೇಷವೆಂದರೆ, ಫೋನ್ ನೀರಿನಲ್ಲಿ ಮುಳುಗಿದರೂ ಅದು ಹಾಳಾಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.
  • ಮೂರು ಬಣ್ಣಗಳಲ್ಲಿ ಫೋನ್ ಅನ್ನು ಬಿಡುಗಡೆ ಮಾಡಿದೆ
ಮಳೆಯಲ್ಲಿ ಒದ್ದೆಯಾದರೂ ಕೆಡುವುದಿಲ್ಲ ಸ್ಯಾಮ್‌ಸಂಗ್‌ನ ಪ್ರಬಲ 5G ಸ್ಮಾರ್ಟ್‌ಫೋನ್ ! title=
Samsung Galaxy A73 5G

Samsung Galaxy A73 5G : ಸ್ಯಾಮ್‌ಸಂಗ್‌ ಕಂಪನಿಯು  ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ73 5ಜಿ ಎಂಬ ಹೊಸ  ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ IP67 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದರ ವಿಶೇಷವೆಂದರೆ,  ಫೋನ್ ನೀರಿನಲ್ಲಿ ಮುಳುಗಿದರೂ ಅದು ಹಾಳಾಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ. ಪ್ರಚಂಡ ಕ್ಯಾಮೆರಾದೊಂದಿಗೆ ಲಭ್ಯವಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಇನ್ನೂ ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ನೀಡಲಾಗುತ್ತಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ73 5ಜಿ  ಬೆಲೆ:
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ73 5ಜಿ ಅನ್ನು ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಮೊದಲ ರೂಪಾಂತರದ 8ಜಿಬಿ ರಾಮ್ ಮತ್ತು 128ಜಿಬಿ ಸಂಗ್ರಹಣಾ ಸಾಮರ್ಥ್ಯದ ಫೋನ್ ಬೆಲೆ ರೂ. 41,999 ಮತ್ತು 8ಜಿಬಿ ರಾಮ್  ಮತ್ತು 256ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ ರೂ. 44,999.  ಕಂಪನಿಯು Osm ಗ್ರೇ, Osm ಮಿಂಟ್ ಮತ್ತು Osm ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಫೋನ್ ಅನ್ನು ಬಿಡುಗಡೆ ಮಾಡಿದೆ. 

ಇದನ್ನೂ ಓದಿ- ಈ ಟ್ರಿಕ್ಸ್ ಬಳಸಿದರೆ ಹಳೆ ಕೂಲರ್‌ನಿಂದ ಎಸಿಯಂತೆ ಹವಾ ಪಡೆಯಬಹುದು

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ73 5ಜಿ ಡಿಸ್‌ಪ್ಲೇ ಮತ್ತು ಕ್ಯಾಮೆರಾ:
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ73 5ಜಿ  ಫೋನಿನಲ್ಲಿ ನೀವು 6.7-ಇಂಚಿನ FHD + Super AMOLED + Infinity-O ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ದರವನ್ನು ಪಡೆಯುತ್ತೀರಿ. Snapdragon 778G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ Samsung Galaxy A73 5G ಯಲ್ಲಿ ನಿಮಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗುತ್ತದೆ. ಈ ಕ್ಯಾಮೆರಾ ಸೆಟಪ್ 108MP ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 5MP ಡೆಪ್ತ್ ಸೆನ್ಸಾರ್ ಮತ್ತು 5MP ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಸೆಲ್ಫಿಗಳನ್ನು ತೆಗೆದುಕೊಳ್ಳಲು ಮತ್ತು ವೀಡಿಯೊ ಕರೆಗಳನ್ನು ಮಾಡಲು, ಈ ಫೋನ್‌ನಲ್ಲಿ ನಿಮಗೆ 32MP ಮುಂಭಾಗದ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಇದನ್ನೂ ಓದಿ- VPN, Google Drive ಮೇಲೆ ಕೇಂದ್ರ ಸರ್ಕಾರದ ನಿರ್ಬಂಧ, ಸರ್ಕಾರಿ ಕಛೇರಿಗಳಲ್ಲಿ ಬಳಕೆ ಇಲ್ಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎ73 5ಜಿ  ವೈಶಿಷ್ಟ್ಯಗಳು:
ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ, ನೀವು 5,000mAh ನ ಪ್ರಚಂಡ ಬ್ಯಾಟರಿಯನ್ನು ಒದಗಿಸಲಾಗಿದೆ. ಇದು 25W ಸೂಪರ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬಾಳಿಕೆ ಎರಡು ದಿನಗಳು ಎಂದು ಕಂಪನಿ ಹೇಳಿದೆ. Dolby Atmos ನಿಂದ ಬೆಂಬಲಿತವಾಗಿರುವ ಈ ಸ್ಮಾರ್ಟ್‌ಫೋನ್ ವಿಶೇಷ ಗೇಮ್ ಬೂಸ್ಟರ್ ವೈಶಿಷ್ಟ್ಯವನ್ನು ಹೊಂದಿದೆ, ಇದರಿಂದಾಗಿ ನಿಮ್ಮ ಸ್ಮಾರ್ಟ್‌ಫೋನ್ ಗೇಮಿಂಗ್ ಮಾಡುವಾಗ ಬಿಸಿಯಾಗುವುದಿಲ್ಲ ಮತ್ತು ಆಟದ ಮಧ್ಯದಲ್ಲಿ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News