ಶುದ್ಧ ವಾಯುಗುಣದಲ್ಲಿ ಗದಗ ಮತ್ತೊಮ್ಮೆ ದೇಶಕ್ಕೆ ನಂಬರ್ 1..!
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರತಿದಿನ ಸಂಜೆ 4 ಗಂಟೆಗೆ ವಾಯು ಗುಣಮಟ್ಟದ ವರದಿಯನ್ನು ಪ್ರಕಟಿಸುತ್ತದೆ.ಈ ವರದಿಯಲ್ಲಿ ಗದಗ ಮತ್ತೊಮ್ಮೆ ದೇಶದಲ್ಲಿ ಶುದ್ದ ವಾಯುಗುಣವನ್ನು ಹೊಂದಿರುವ ನಂಬರ್ 1 ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರತಿದಿನ ಸಂಜೆ 4 ಗಂಟೆಗೆ ವಾಯು ಗುಣಮಟ್ಟದ ವರದಿಯನ್ನು ಪ್ರಕಟಿಸುತ್ತದೆ.ಈ ವರದಿಯಲ್ಲಿ ಗದಗ ಮತ್ತೊಮ್ಮೆ ದೇಶದಲ್ಲೇ ಶುದ್ದ ವಾಯುಗುಣವನ್ನು ಹೊಂದಿರುವ ನಂಬರ್ 1 ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶನಿವಾರದಂದು ಪ್ರಕಟವಾಗಿರುವ ವರದಿಯಲ್ಲಿ 34 ನಗರಗಳು 'ಉತ್ತಮ' ವರ್ಗದಲ್ಲಿದ್ದರೆ, 56 ನಗರಗಳು ತೃಪ್ತಿಕರ ವರ್ಗದಲ್ಲಿವೆ, ಇನ್ನೂ 36 ನಗರಗಳು ಮಧ್ಯಮ ವರ್ಗದಲ್ಲಿವೆ.
ಫತೇಬಾದ್ (245), ಕೈತಾಲ್ (215), ಪಾಣಿಪತ್ (227), ಸಿರ್ಸಾ (242) ಮತ್ತು ಸೋನಿಪತ್ (202) 5 ನಗರಗಳಲ್ಲಿ ಎಕ್ಯೂಐ ಕಳಪೆ ವಿಭಾಗದಲ್ಲಿದೆ ಎಂದು ವರದಿಯಾಗಿದೆ.ಈ ಎಲ್ಲಾ ಐದು ನಗರಗಳಲ್ಲಿ, Particulate Matter (PM) Pollution 10 ಪ್ರಮುಖ ಮಾಲಿನ್ಯಕಾರಕವಾಗಿದೆ.ಎಕ್ಯೂಐ (Air Quality Index) ಮೌಲ್ಯ 245 ರೊಂದಿಗೆ ಫತೇಹಾಬಾದ್ ಆ ದಿನದ ಕಳಪೆ ಮಾಲಿನ್ಯವನ್ನು ಹೊಂದಿದ ಕುಖ್ಯಾತಿಗೆ ಒಳಗಾಗಿದ್ದರೆ, ಕರ್ನಾಟಕದ ಗದಗ 15 ಕ್ಕೆ ಇಳಿಯುವ ಮೂಲಕ ಆ ದಿನದ ಸ್ವಚ್ಛ ನಗರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.