Aishwarya-Amartya Reception: ಇಂದು ಡಿಕೆಶಿ ಮಗಳ ಆರತಕ್ಷತೆ, ಪ್ರವೇಶಕ್ಕೆ BARCODE ವ್ಯವಸ್ಥೆ
ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಅಮರ್ಥ್ಯ ಆರತಕ್ಷತೆ ಸಂಜೆ ದೇವನಹಳ್ಳಿ ಸಮೀಪದ ಪ್ರೆಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟಿನಲ್ಲಿ ನಡೆಯಲಿದೆ.
ಬೆಂಗಳೂರು: ಡಿ ಕೆ ಶಿವಕುಮಾರ್ (DK Shivakumar) ಪುತ್ರಿ ಐಶ್ವರ್ಯಾ ಮತ್ತು ಅಮರ್ಥ್ಯ ಆರತಕ್ಷತೆ (Reception)ಸಂಜೆ ದೇವನಹಳ್ಳಿ ಸಮೀಪದ ಪ್ರೆಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟಿನಲ್ಲಿ ನಡೆಯಲಿದೆ. ಕುಟುಂಬ ಪರಿವಾರ, ಗಣ್ಯರು ಸೇರಿ ಕೇವಲ 1500 ಮಂದಿಗೆ ಪ್ರವೇಶಕ್ಕೆ ಅವಕಾಶ ಇದೆ.
ರಾಹುಲ್ ಗಾಂಧಿ ಆಗಮನ ಸಾಧ್ಯತೆ:
ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮಗಳ ಆರತಕ್ಷತೆಗೆ ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪುದುಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಇಂದು ಸಂಜೆ ರಾಹುಲ್ ಗಾಂಧಿ (Rahul Gandhi) ನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ : Siddaramaiah: ಶ್ರೀ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸಿದ್ದರಾಮಯ್ಯ ತಮ್ಮ ಸಿದ್ದೇಗೌಡ..!
ಪ್ರವೇಶಕ್ಕೆ Barcode ಸಿಸ್ಟಮ್..!
ವಿವಿವಿಐಪಿಗಳು ಮತ್ತು ಆಪ್ತರಿಗೆ ಮಾತ್ರ ಆರತಕ್ಷತೆಗೆ (Reception)ಆಹ್ವಾನವಿದೆ. ಪ್ರವೇಶಕ್ಕೆ Barcode ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ದ್ವಾರದ ಬಳಿ ಬಾರ್ ಕೋಡ್ ಸ್ಕ್ಯಾನ್ (Barcode scan) ಮಾಡಿಸಬೇಕು. ಒಟಿಪಿ (OTP) ಬಂದರೆ ಮಾತ್ರ ಒಳಗೆ ಪ್ರವೇಶ ಸಾಧ್ಯವಾಗುತ್ತದೆ. ಇಲ್ಲದೇ ಹೋದರೆ ಗೇಟ್ ಬಳಿಯೇ ಇರಬೇಕಾಗುತ್ತದೆ. ರೆಸಾರ್ಟ್ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಖಾಸಗೀ ಭದ್ರತೆಯನ್ನೂ ಮಾಡಲಾಗಿದೆ.
200 ಬಾಣಸಿಗರಿಂದ ಭೋಜನ ವ್ಯವಸ್ಥೆ:
ಆರತಕ್ಷತೆಗೆ ಅದ್ದೂರಿ ಸಿದ್ದತೆ ಮಾಡಲಾಗಿದೆ. ಊಟೋಪಚಾರಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಉತ್ತರ ಮತ್ತು ದಕ್ಷಿಣ ಭಾರತದ ವಿಶೇಷ ಬಗೆಯ ಭೋಜನವನ್ನು ತಯಾರಿಸಲಾಗುತ್ತಿದೆ. ಇದಕ್ಕಾಗಿ ಪಂಚತಾರಾ ಹೋಟೇಲಿನಲ್ಲಿ (Hotel) ನುರಿತ 200 ವಿಶೇಷ ಬಾಣಸಿಗರನ್ನೇ ಕರೆಯಿಸಲಾಗಿದೆ. ಅದ್ದೂರಿ ಭೋಜನವ್ಯವಸ್ಥೆ ಇರಲಿದೆ.
ಇದನ್ನೂ ಓದಿ : Ahinda Samavesha: ಸಿದ್ದರಾಮಯ್ಯ ಅಹಿಂದ ಸಮಾವೇಶಕ್ಕೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್
ಸಂಪೂರ್ಣ ರೆಸಾರ್ಟ್ ಬುಕ್..!
ಮಗಳ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಡಿಕೆಶಿವಕುಮಾರ್ ಸಂಪೂರ್ಣ ರೆಸಾರ್ಟ್ (Resort) ಬುಕ್ ಮಾಡಿದ್ದಾರೆ. ಬಣ್ಣ ಬಣ್ಣದ ಹೂ ಮತ್ತು ದೀಪಗಳಿಂದ ವೇದಿಕೆ ಅಲಂಕೃತವಾಗಿದೆ. ವಧುವರರನ್ನು ಆಶೀರ್ವದಿಸಲು ವಿಶೇಷ ವೇದಿಕೆ ಮಾಡಲಾಗಿದೆ. ಗಾರ್ಡನ್ ಏರಿಯಾದಲ್ಲಿ ಆರತಕ್ಷತೆ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.