ಮೈಸೂರು: ರಾಜ್ಯದಲ್ಲಿ ರಾಮಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ನಾನು ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಾಮಮಂದಿರಕ್ಕೆ ದೇಣಿಗೆ ನೀಡುವುದಿಲ್ಲ ಎಂದು ದೆಹಲಿಯಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿವಾದಿತ ಸ್ಥಳದಲ್ಲಿ ಕಟ್ಟುತ್ತಿರುವ ರಾಮಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ ಎಂದು ಮಾಜಿ ಸಿಎಂ ಸ್ಪಷ್ಟಪಡಿಸಿದ್ದಾರೆ.
ಆದರೆ, ಇತ್ತ ಸಿದ್ದರಾಮಯ್ಯರ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ. ಅಲ್ಲದೇ, ಸಿದ್ದರಾಮಯ್ಯ(Siddaramaiah) ಅವರ ತಮ್ಮ ಸಿದ್ಧೇಗೌಡ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ದೇಶಾದ್ಯಂತ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸರ್ಮಪಣಾ ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಸಾಂಸ್ಕೃತಿಕ ನಗರದಲ್ಲಿ ಕೂಡ ಈ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಗ್ರಾಮ ಗ್ರಾಮಗಳಿಗೂ ತೆರಳಿ ನಿಧಿ ಸಂಗ್ರಹಣೆ ನಡೆಸಲಾಗುತ್ತಿದೆ. ಅದರಂತೆ ಸಿದ್ದರಾಮನಹುಂಡಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ.
Satish Jarkiholi: ಬೆಳಗಾವಿ ಬೈಎಲೆಕ್ಷನ್ ಗೆಲ್ಲಲು ಕೈ ರಣತಂತ್ರ; ಜೆಡಿಎಸ್, ಬಿಜೆಪಿ ನಾಯಕರಿಗೆ ಸತೀಶ್ ಗಾಳ!
ಸಿದ್ದರಾಮಯ್ಯ ಅವರ ಸ್ವಗ್ರಾಮವಾದ ಸಿದ್ದರಾಮನಹುಂಡಿಯಲ್ಲಿ ರಾಮಮಂದಿರಕ್ಕೆ ನಿಧಿ ಸಂಗ್ರಹಿಸಿದ ಬಿಜೆಪಿ(BJP) ಕಾರ್ಯಕರ್ತರು, ಅವರ ತಮ್ಮ ಸಿದ್ದೇಗೌಡರ ನಿವಾಸಕ್ಕೆ ತೆರಳಿ ನಿಧಿಗಾಗಿ ಮನವಿ ಮಾಡಿದ್ದಾರೆ. ಕನಿಷ್ಠ 10ರೂನಿಂದ ಎಷ್ಟಾದರೂ ದೇಣಿಗೆ ನೀಡಿ ಎಂದ ಮನವಿ ಮಾಡಿದರು. ಅಲ್ಲದೇ ಈ ವೇಳೆ ಬಿಜೆಪಿ ಕಾರ್ಯಕರ್ತರು ರಾಮಮಂದಿರದ ಇತಿಹಾಸವನ್ನು ಅವರಿಗೆ ವಿವರಿಸಿದ್ದಾರೆ. ಕೊನೆಗೆ ಬಿಜೆಪಿ ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಸಿದ್ದೇಗೌಡರು 10 ರೂ ದೇಣಿಗೆ ನೀಡಿದ್ದಾರೆ. 10 ರೂ ದೇಣಿಗೆ ಪಡೆದು ರಶೀದಿಯನ್ನ ನೀಡಿರುವ ಬಿಜೆಪಿ ಕಾರ್ಯಕರ್ತರು ಸಿದ್ದೇಗೌಡರ ಜೊತೆ ನಿಂತು ಪೋಟೋಗೆ ಪೋಸ್ ಕೊಟ್ಟಿದ್ದಾರೆ.
Siddaramaiah: 'ಅಯೋಧ್ಯೆಯ ಶ್ರೀರಾಮ ಮಂದಿರ ಕಟ್ಟೋದಕ್ಕೆ ದೇಣಿಗೆ ಕೊಡಲ್ಲ'
ಇದಾದ ಬಳಿಕ ಸಿದ್ದರಾಮಯ್ಯರ ಅಣ್ಣನ ಮಗನ ಬಳಿಯೂ ನಿಧಿಗೆ ಮನವಿ ಮಾಡಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರ ಮನವಿಗೆ ಸ್ಪಂದಿಸದ ಸಿದ್ದರಾಮಯ್ಯರ ಅಣ್ಣನ ಮಗ ನಾನು ರಾಮಮಂದಿರ(Ram Mandira) ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ. ನೀವು ಅಗತ್ಯವಿದ್ದರೆ ನಮ್ಮೂರಿನಲ್ಲಿ ಪಡೆದುಕೊಳ್ಳಿ ಎಂದ ತಿಳಿಸಿದ್ದಾರೆ.
BJP: ಸಿಎಂ ಯಡಿಯೂರಪ್ಪ ಸಾರಥ್ಯದಲ್ಲಿಯೇ 2023ರ ಚುನಾವಣೆ..!
ಕೊನೆಗೆ ಸಿದ್ದರಾಮಯ್ಯರ ಅಣ್ಣನ ಮಗನಿಗೆ ಕರಪತ್ರ ನೀಡಿ ವಾಪಸ್ಸಾದ ಬಿಜೆಪಿಗರು ಸಿದ್ದರಾಮನಹುಂಡಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ 40 ಸಾವಿರ ದೇಣಿಗೆ ಸಂಗ್ರಹಿಸಿದ್ದಾರೆ. ರಾಮಮಂದಿರಕ್ಕೆ ದೇಣಿಗೆ ನೀಡುವುದಿಲ್ಲ ಎಂದ ಸಿದ್ದರಾಮಯ್ಯರ ಸ್ವ ಗ್ರಾಮದಲ್ಲೇ ದೇಣಿಗೆ ಸಂಗ್ರಹಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರು ನಡೆಯೂ ಚರ್ಚೆಗೆ ಗ್ರಾಸವಾಗಿದೆ.
HD Kumaraswamy: 'ಶ್ರೀರಾಮನ ಮೇಲೆ ನಂಬಿಕೆ ಇದ್ರೆ ಕುಮಾರಸ್ವಾಮಿ ರಾಮಮಂದಿರ ದೇಣಿಗೆ ನೀಡಲಿ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.