ಈದ್ಗಾ ಮೈದಾನದಲ್ಲಿಗಣೇಶ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ
ಈದ್ಗಾ ಮೈದಾನದಲ್ಲಿ ನಾಳೆ ನೆರವೇರಲಿರುವ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಕಲಸಿದ್ಧತೆಗಳನ್ನ ಕೈಗೊಂಡಿರೋ ಹಿಂದೂ ಸಂಘಟನೆಗಳು ಈಗಾಗಲೇ ಮೈದಾನದಲ್ಲಿ ವೇಳೆ ಶೇಷ ಪೂಜೆ ಸಲ್ಲಿಸುವ ಮೂಲಕ ಮಂಟಪ ನಿರ್ಮಾಣ ಕಾರ್ಯಗಳನ್ನ ಭರದಿಂದ ನಡೆಸಿವೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕೇವಲ ಒಂದೇ ದಿನ ಬಾಕಿ ಇದೆ. ಈವರೆಗೂ ಶತಾಯ ಗತಾಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡ್ಲೇಬೇಕು ಎಂಬ ಹಠ ಹಿಡಿದು ಕೊನೆಗೂ ಜಯ ಗಳಿಸಿದ ಹಿಂದೂ ಸಂಘಟನೆಗಳು ನಾಳೆ ಈ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಕಲ ತಯಾರಿ ನಡೆಸಿವೆ.
ಹೌದು.... ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿಗಣೇಶ ಪ್ರತಿಷ್ಠಾಪನೆಗೆ ಈಗಾಗಲೇ ಪರವಾನಗಿ ದೊರೆತಿದೆ. ಅಲ್ದೇ ಪ್ರತಿಷ್ಠಾಪನೆಗೆ ಒಂದೇ ದಿನ ಬಾಕಿಇದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಇಂದು ಪ್ರತಿಷ್ಠಾಪನೆಗೂ ಮುನ್ನ ಮೈದಾನದಲ್ಲಿ ಹಂದರಗಂಬ ಪೂಜೆ ಸಲ್ಲಿಸುವ ಮೂಲಕ ಪ್ರತಿಷ್ಠಾಪನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಈದ್ಗಾ ಮೈದಾನದಲ್ಲಿ ನಾಳೆ ನೆರವೇರಲಿರುವ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಕಲಸಿದ್ಧತೆಗಳನ್ನ ಕೈಗೊಂಡಿರೋ ಹಿಂದೂ ಸಂಘಟನೆಗಳು ಈಗಾಗಲೇ ಮೈದಾನದಲ್ಲಿ ವೇಳೆ ಶೇಷ ಪೂಜೆ ಸಲ್ಲಿಸುವ ಮೂಲಕ ಮಂಟಪ ನಿರ್ಮಾಣ ಕಾರ್ಯಗಳನ್ನ ಭರದಿಂದ ನಡೆಸಿವೆ. ಅಲ್ದೇ ನಾಳೆ ಬೆಳಿಗ್ಗೆಯಿಂದ ಅತ್ಯಂತ ವಿಜೃಂಭಣೆಯಿಂದ ಗಣೇಶ ಹಬ್ಬವನ್ನ ಆಚರಣೆ ಮಾಡಲಿದ್ದು, ನಾಳೆಯಿಂದ ಮೂರು ದಿನಗಳಕಾಲ ಈದ್ಗಾ ಮೈದಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ- ಗೌರಿ- ಗಣೇಶ ಹಬ್ಬದ ಸಂಭ್ರಮ: ನೋಟು - ನಾಣ್ಯದಿಂದ ಗಣೇಶನಿಗೆ ವಿಶೇಷ ಅಲಂಕಾರ
ಇನ್ನು ನಾಳೆ ಬೆಳಿಗ್ಗೆ 9.30 ಕ್ಕೆ ನಗರದ ಮೂರು ಸಾವಿರ ಮಠದಿಂದ ವಿಜೃಂಭಸೆಯ ಮೆರವಣಿಗೆ ಮೂಲಕ ಗಣೇಶನನ್ನು ಈದ್ಗಾ ಮೈದಾನಕ್ಕೆ ಕರೆತರಲಿರೋ ಹಿಂದೂ ಮುಖಂಡರು ಸರಿಯಾಗಿ 10.30 ಕ್ಕೆ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ. ಅಲ್ಲದೆ, ಪ್ರತಿಷ್ಠಾಪನೆ ನಂತರ ವಿಶೇಷ ಮಂಗಳಾರತಿ, ಪೂಜೆ ನೆರವೇರಿಸಲಿದ್ದು, ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಿದ್ದಾರೆ. ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು, ಎಲ್ಲ ಧರ್ಮದ ಮುಖಂಡರಿಗೆ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ- Ganesh Chaturthi 2023: ‘ಗಣಪತಿ ಬಪ್ಪ ಮೋರ್ಯ’ ಎನ್ನುವುದೇಕೆ? ಇದರ ಹಿಂದಿನ ಕಥೆ ತಿಳಿಯಿರಿ
ಒಟ್ಟಾರೆ ಮೂರು ದಿನಗಳ ಕಾಲ ಪಾಲಿಕೆಯಿಂದ ಅವಕಾಶ ಪಡೆದುಕೊಂಡಿರೋ ಈದ್ಗಾ ಮೈದಾನದ ಗಣೇಶ ಪ್ರತಿಷ್ಠಾಪನೆ ಶಾಂತಿ ಸೌಹಾರ್ದತೆಯಿಂದ ನೆರವೇರಲಿ ಅನ್ನೋದೇ ನಮ್ಮ ಆಶಯ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.