ಬೆಂಗಳೂರಿನಲ್ಲಿ ಸಿದ್ದವಾಗ್ತಿದೆ ಕೋಟಿ ಕೋಟಿ ನೋಟು- ಲಕ್ಷ ಲಕ್ಷ ನಾಣ್ಯಗಳ ಅಲಂಕಾರ ಗಣಪತಿ

ಗುರುಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾರನ್ನು  ತೆಂಗಿನ ಕಾಯಿ, ಬಾದಾಮಿ, ಖರ್ಜೂರ, ಹಣ್ಣುಗಳಿಂದ ಸಿಂಗರಿಸಿ ಗಮನ ಸೆಳೆದಿದ್ದ ಟ್ರಸ್ಟ್‌, ಈ ಬಾರಿ ಗಣೇಶೋತ್ಸಕ್ಕೆ ಲಕ್ಷ್ಮಿ ಕಟಾಕ್ಷದ ಸ್ಪರ್ಷ ನೀಡುತ್ತಿದೆ.

Written by - Manjunath Hosahalli | Last Updated : Sep 14, 2023, 04:53 PM IST
  • ಐವತ್ತು ಲಕ್ಷ ರೂಪಾಯಿ ಮೊತ್ತದ ನಾಣ್ಯಗಳು, ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳಿಂದ ಅಲಂಕರಿಸುವ ಪ್ರಕ್ರಿಯೆ ಒಂದು ವಾರದ ಹಿಂದೆಯೇ ಆರಂಭವಾಗಿದೆ.
  • 150 ಕ್ಕೂ ಜನರ ತಂಡ ಹಬ್ಬಕ್ಕೂ ಹದಿನೈದು ದಿನಗಳ ಹಿಂದಿನಿಂದಲೇ ನೋಟುಗಳ ಅಲಂಕಾರದಲ್ಲಿ ನಿರತವಾಗಿದೆ.
ಬೆಂಗಳೂರಿನಲ್ಲಿ ಸಿದ್ದವಾಗ್ತಿದೆ ಕೋಟಿ ಕೋಟಿ ನೋಟು- ಲಕ್ಷ ಲಕ್ಷ ನಾಣ್ಯಗಳ ಅಲಂಕಾರ ಗಣಪತಿ title=

ಬೆಂಗಳೂರು: ಪ್ರತಿ ವರ್ಷ ಗಣೇಶ ಹಬ್ಬದ ಪ್ರಯುಕ್ತ ಒಂದಿಲ್ಲೊಂದು ಹೊಸತನದ ಕಾರ್ಯಕ್ರಮ ಹಮ್ಮಿಕೊಳ್ಳುವ ಜೆ.ಪಿ. ನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಈ ಬಾರಿ ಗಣೇಶೋತ್ಸವವನ್ನು ನಾಣ್ಯ ಮತ್ತು ನೋಟುಗಳಿಂದ ಅಲಂಕರಿಸಿ ವೈಭವದಿಂದ ವಿಭಿನ್ನವಾಗಿ ಆಚರಿಸಲಾಗುತ್ತಿದೆ. 

ಗುರುಪೂರ್ಣಿಮೆಯಂದು ಶಿರಡಿ ಸಾಯಿ ಬಾಬಾರನ್ನು  ತೆಂಗಿನ ಕಾಯಿ, ಬಾದಾಮಿ, ಖರ್ಜೂರ, ಹಣ್ಣುಗಳಿಂದ ಸಿಂಗರಿಸಿ ಗಮನ ಸೆಳೆದಿದ್ದ ಟ್ರಸ್ಟ್‌, ಈ ಬಾರಿ ಗಣೇಶೋತ್ಸಕ್ಕೆ ಲಕ್ಷ್ಮಿ ಕಟಾಕ್ಷದ ಸ್ಪರ್ಷ ನೀಡುತ್ತಿದೆ.

ಇದನ್ನೂ ಓದಿ- Ganesh Chaturti 2023: ಭಾರತದಲ್ಲಿ ಭೇಟಿ ನೀಡಲೇಬೇಕಾದ 10 ಪ್ರಸಿದ್ದ ಗಣಪತಿ ಮಂದಿರಗಳು

ಐವತ್ತು ಲಕ್ಷ ರೂಪಾಯಿ ಮೊತ್ತದ ನಾಣ್ಯಗಳು, ಕೋಟ್ಯಂತರ ರೂಪಾಯಿ ಮೌಲ್ಯದ ನೋಟುಗಳಿಂದ ಅಲಂಕರಿಸುವ ಪ್ರಕ್ರಿಯೆ ಒಂದು ವಾರದ ಹಿಂದೆಯೇ ಆರಂಭವಾಗಿದೆ. 150 ಕ್ಕೂ ಜನರ ತಂಡ ಹಬ್ಬಕ್ಕೂ ಹದಿನೈದು ದಿನಗಳ ಹಿಂದಿನಿಂದಲೇ ನೋಟುಗಳ ಅಲಂಕಾರದಲ್ಲಿ ನಿರತವಾಗಿದೆ. ವಿಕ್ರಂ ಲ್ಯಾಂಡರ್‌, ಚಂದ್ರಯಾನ - 3, ಜೈ ಕರ್ನಾಟಕ, ಜೈ ಜವಾನ್‌ ಜೈ ಕಿಸಾನ್‌, ಮೇರಾ ಭಾರತ್‌ ಮಹಾನ್‌ ಥೀಮ್‌ ಅಳವಡಿಸಿಕೊಂಡಿದ್ದು  ಎಲ್ಲರ ಗಮನ ಸೆಳೆಯಲು ಸಿದ್ಧವಾಗುತ್ತಿವೆ.

ಇದನ್ನೂ ಓದಿ- ಮುಂದಿನ 12 ವರ್ಷ ಈ ರಾಶಿಗೆ ಸಿರಿವಂತ ಯೋಗ: ದುಡ್ಡಿನ ಮಳೆ ಖಚಿತ, ಹೆಜ್ಜೆಹೆಜ್ಜೆಗೂ ಯಶಸ್ಸು, ಭಾಗ್ಯ ಬೆಳಗಲಿದೆ ಬೆನಕನ ಅಮಾವಾಸ್ಯೆ

ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ರಾಮಮೋಹನ್‌ ರಾಜ್‌ ಮಾತನಾಡಿ, ಐದು, ಹತ್ತು, ಇಪ್ಪತ್ತು ರೂಪಾಯಿ ಮೊತ್ತದ ತಲಾ ಒಂದೂವರೆ ಲಕ್ಷ ನಾಣ್ಯಗಳು, ಐದು, ಹತ್ತು, ಇಪ್ಪತ್ತು, 100, 500 ರೂ ಮೊತ್ತದ ನೋಟುಗಳಿಂದ ಗಣೇಶ ಮೂರ್ತಿಯನ್ನು ಸಿಂಗರಿಸಲಾಗುತ್ತಿದೆ. ನೋಟುಗಳ ಮೌಲ್ಯ ಇನ್ನೂ ನಿಗದಿ ಮಾಡಿಲ್ಲ. ಭಕ್ತಾದಿಗಳು ಗಣೇಶನ ಅಲಂಕಾರಕ್ಕಾಗಿ ಲಕ್ಷಾಂತರ ರೂ ಮೊತ್ತದ ನೋಟುಗಳನ್ನು ಪ್ರತಿನಿತ್ಯ ಕಾಣಿಕೆಯಾಗಿ ನೀಡುತ್ತಿದ್ದಾರೆ. ಹಬ್ಬದ ವೇಳೆಗೆ ನೋಟುಗಳ ಮೌಲ್ಯ ತಿಳಿಯಲಿದೆ ಎಂದರು.

ಸೆಪ್ಟಂಬರ್ 18 ರಂದು ಬೆಳಿಗ್ಗೆಯಿಂದ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News