ಸದ್ಗುರು ವಿರುದ್ಧ ಹೇಳಿಕೆ : ಕಾಂಗ್ರೆಸ್ ಮಾಜಿ ಎಂಎಲ್‌ಸಿ ವಿರುದ್ಧ ಲೀಗಲ್ ನೋಟಿಸ್
ಸದ್ಗುರುಗಳ ವಿರುದ್ಧ ರಾಜ್ಯ ಕಾಂಗ್ರೆಸ್‌ನ ಮಾಜಿ ಎಂಎಲ್‌ಸಿ ಶ್ರೀ ರಮೇಶ್ ಬಾಬು ಅವರ ವೈಯಕ್ತಿಕ ಅಪವಾದ ಮತ್ತು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಇಶಾ ಫೌಂಡೇಶನ್ ರಮೇಶ್ ಬಾಬು ವಿರುದ್ಧ ಲೀಗಲ್ ನೋಟಿಸ್ ನೀಡಿಲು ಸಿದ್ಧತೆ ನಡೆಸಿದೆ.
ಬೆಂಗಳೂರು : ಸದ್ಗುರುಗಳ ವಿರುದ್ಧ ರಾಜ್ಯ ಕಾಂಗ್ರೆಸ್‌ನ ಮಾಜಿ ಎಂಎಲ್‌ಸಿ ಶ್ರೀ ರಮೇಶ್ ಬಾಬು ಅವರ ವೈಯಕ್ತಿಕ ಅಪವಾದ ಮತ್ತು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿರುವ ಇಶಾ ಫೌಂಡೇಶನ್ ರಮೇಶ್ ಬಾಬು ವಿರುದ್ಧ ಲೀಗಲ್ ನೋಟಿಸ್ ನೀಡಿಲು ಸಿದ್ಧತೆ ನಡೆಸಿದೆ.
ಸದ್ಗುರುಗಳ ಕಾರ್ಯಕ್ರಮಗಳಾದ ರ‍್ಯಾಲಿ ಫಾರ್ ರಿವರ್ಸ್, ಕಾವೇರಿ ಕೂಗು ಮತ್ತು ಮಣ್ಣು ಉಳಿಸಿ ನಂತಹ ಪರಿಸರ ಉಪಕ್ರಮಗಳಿಗೆ ಬೆಂಬಲ ನೀಡಿದ ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷದ ಪ್ರತಿನಿಧಿಯಾಗಿ, ಹಾಗೂ ಅವರ ಶಿಕ್ಷಣ ಅಥವಾ ಸ್ಥಾನಮಾನಕ್ಕೆ ಅವರ ಇಂತಹ ವರ್ತನೆಯು ಸರಿಹೊಂದುವುದಿಲ್ಲ ಎಂದು ಆಕ್ರೋಶ ಹೊರ ಹಾಕಿರುವ ಈಶಾ ಪೌಂಡೇಶನ್ ರಮೇಶ್ ಬಾಬು ವಿರುದ್ಧ ಲೀಗಲ್ ನೋಟಿಸ್ ನೀಡಲು ಮುಂದಾಗಿದೆ. ಅಲ್ಲದೆ, ರಮೇಶ್ ಬಾಬು ಅವರು ಮಾಡಿರುವ ಆರೋಪಗಳಿಗೆ ಈಶಾ ಉತ್ತರ ನೀಡಿದೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಜೊತೆ ಹೆಜ್ಜೆ ಹಾಕಿದ ರಮ್ಯಾ
ಸರ್ಕಾರ ಹಣ ನೀಡಿಲ್ಲ : ರಮೇಶ್ ಬಾಬು ಅವರು ಹೇಳಿರುವಂತೆ ರಾಜ್ಯ ಸರ್ಕಾರವು ಸದ್ಗುರುಗಳಿಗೆ ಅಥವಾ ಈಶಾ ಸಂಸ್ಥೆಗೆ ಅಥವಾ ಮಣ್ಣು ಉಳಿಸಿ ಅಭಿಯಾನಕ್ಕೆ 100 ಕೋಟಿ ರೂ. ನೀಡಿಲ್ಲ. ಮಣ್ಣಿನ ಸಂರಕ್ಷಣೆಗೆ ಒತ್ತು ನೀಡುವ ಮೂಲಕ ರಾಜ್ಯದ ಪರಿಸರ ಚಟುವಟಿಕೆಗಳಿಗಾಗಿ ಬಜೆಟ್‌ನಲ್ಲಿ 100 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸ್ಪಷ್ಟಪಡಿಸಿದ್ದಾರೆ. ಆದರೂ ಈ ಹೇಳಿಕೆಯನ್ನು ತಿರುಚಿ ಜನರಿಗೆ ತಪ್ಪು ಮಾಹಿತಿ ನೀಡುವುದರ ಹಿಂದಿನ ಉದ್ದೇಶ ನಮಗೆ ಅರ್ಥವಾಗುತ್ತಿಲ್ಲ. ಈಶಾ ಫೌಂಡೇಶನ್ ಅಥವಾ ಸದ್ಗುರುಗಳು, ಕರ್ನಾಟಕದ ಈಗಿನ ಅಥವಾ ಹಿಂದಿನ ಸರ್ಕಾರಗಳಿಂದ ಯಾವುದೇ ಹಣವನ್ನು ಪಡೆದಿಲ್ಲ. ಸರ್ಕಾರದ ಜೊತೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಣಕಾಸಿನ ವಹಿವಾಟುಗಳಲ್ಲಿ ಈಶಾ ಫೌಂಡೇಶನ್ ಭಾಗಿಯಾಗಿಲ್ಲ ಎಂದು ಈಶಾ ಸ್ಪಷ್ಟಪಡಿಸಿದೆ.
ಸರ್ಕಾರ 250 ಎಕರೆ ಜಾಗ ನೀಡಿಲ್ಲ : ನೂತನ ಈಶಾ ಯೋಗ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಚಿಕ್ಕಬಳ್ಳಾಪುರದಲ್ಲಿ 250 ಎಕರೆ ಜಾಗ ನೀಡಿಲ್ಲ. ಈಶಾ ಯೋಗ ಕೇಂದ್ರಕ್ಕೆ ಭೂಮಿಯನ್ನು, ದಾನಿಗಳು ಮತ್ತು ಸ್ವಯಂಸೇವಕರಿಂದ ಸ್ವಯಂಪ್ರೇರಿತವಾಗಿ ಬಂದ ಕೊಡುಗೆಗಳ ಮೂಲಕ ಚಿಕ್ಕಬಳ್ಳಾಪುರದ ಜಮೀನಿನ ಮಾಲೀಕರಿಂದ ನೇರವಾಗಿ ಈಶಾ ಸಂಸ್ಥೆ ಖರೀದಿಸಿದೆ. ರಮೇಶ್ ಬಾಬು ಅವರು ಪರಿಶೀಲಿಸದೇ ಹೇಳಿಕೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: IND vs PAK: ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಪಿಚ್ ರಿಪೋರ್ಟ್, ಪ್ಲೇಯಿಂಗ್ 11 ಪಟ್ಟಿ ಹೀಗಿದೆ
ಶ್ರೀ ರಮೇಶ್ ಬಾಬು ಅವರು ಉಲ್ಲೇಖಿಸುತ್ತಿರುವ ಕಾವೇರಿ ಕೂಗು ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಳೆದ ವರ್ಷ ಗೌರವಾನ್ವಿತ ಉಚ್ಛ ನ್ಯಾಯಾಲಯವು, "ಕ್ಷುಲ್ಲಕ" ಎಂದು ಉಲ್ಲೇಖಿಸಿ ಅದನ್ನು “ವಜಾಗೊಳಿಸಿದೆ”. ನಶಿಸುತ್ತಿರುವ ನದಿಯನ್ನು ಪುನರುಜ್ಜೀವನಗೊಳಿಸಲು ‘ಮರ ಆಧಾರಿತ ಬೇಸಾಯ’ ಮತ್ತು ‘ಅರಣ್ಯೀಕರಣದ’ ಕಡೆಗೆ ಈಶಾ ಔಟ್ರೀಚ್ ಸಂಸ್ಥೆಯು ಮಾಡುತ್ತಿರುವ ಉದಾತ್ತ ಕಾರ್ಯವನ್ನು ನ್ಯಾಯಾಲಯವು ನಿಜವಾಗಿಯೂ ಪ್ರಶಂಸಿಸಿದೆ. ಕಾವೇರಿ ಕೂಗು ಯೋಜನೆಯು ಸರ್ಕಾರದ ಯೋಜನೆಯಲ್ಲ ಮತ್ತು ಸರ್ಕಾರಿ ಭೂಮಿಯಲ್ಲಾಗಲೀ ಅಥವಾ ಸಾರ್ವಜನಿಕ ಭೂಮಿಯಲ್ಲಾಗಲೀ ಸಸಿ ನೆಡುವ ಕಾರ್ಯ ನಡೆಯುತ್ತಿಲ್ಲ ಎಂದು ನ್ಯಾಯಾಲಯ ಗಮನಿಸಿತ್ತು.
ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ರೈತರು ತಮ್ಮ ಖಾಸಗಿ ಜಮೀನುಗಳಲ್ಲಿ ಮಾತ್ರ ಸಸಿಗಳನ್ನು ನೆಡಲು ಪ್ರೋತ್ಸಾಹಿಸುವ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಮತ್ತು ಕರ್ನಾಟಕ ಸರ್ಕಾರವು ಯೋಜನೆಗೆ ಹಣ ನೀಡುತ್ತಿಲ್ಲ ಎಂಬುದಾಗಿಯೂ ನ್ಯಾಯಾಲಯವು ಗಮನಿಸಿದೆ.
ಕಾವೇರಿ ಕೂಗು ಯೋಜನೆಯು ಅತಿದೊಡ್ಡ ರೈತ-ಚಾಲಿತ ಪರಿಸರ ಅಭಿಯಾನವಾಗಿದ್ದು, ಇದರ ಪ್ರಮುಖ ಫಲಾನುಭವಿಗಳು ರೈತರೇ ಆಗಿರುತ್ತಾರೆ. ಸರ್ಕಾರ ಬಿಡುಗಡೆ ಮಾಡಿದ ಯಾವುದೇ ನಿಧಿಯ ಫಲಾನುಭವಿ ಈಶಾ ಅಲ್ಲ. ಗಿಡ ನೆಡಲು ಪ್ರೋತ್ಸಾಹಧನ ನೇರವಾಗಿ ರೈತರಿಗೆ ಸಿಗುತ್ತದೆ. ಮರ ಆಧಾರಿತ ಕೃಷಿಯತ್ತ ರೈತರನ್ನು ಪ್ರೇರೇಪಿಸುವುದು, ತಾಂತ್ರಿಕ ತರಬೇತಿ ಮತ್ತು ಸಸಿ ವಿತರಣೆಯಲ್ಲಿ ಸಹಾಯ ಮಾಡುವುದರಲ್ಲಿ ಮಾತ್ರವೇ ಈಶಾದ ಪಾತ್ರವಿರುತ್ತದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ಇಂಥಾ ದೈನೇಸಿ ಸ್ಥಿತಿ ಬರಬಾರದಿತ್ತು: ಸಿದ್ದರಾಮಯ್ಯ
ಸಾರ್ವಜನಿಕವಾಗಿ ಕ್ಷಮೇ ಕೇಳಬೇಕು : ರಮೇಶ್ ಬಾಬು ಅವರು, ಸತ್ಯವನ್ನು ಪರಿಶೀಲಿಸದೆ ಅಥವಾ ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸದೆ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿರುವುದರಿಂದ, ಇದು ಅವರ ದುರುದ್ದೇಶವನ್ನು ಸ್ಪಷ್ಟವಾಗಿ ಹೇಳುತ್ತದೆ ಮತ್ತು ಸೂಕ್ತ ವೇದಿಕೆಯ ಮುಂದೆ ಈ ಮಾನಹಾನಿಕರ ಹೇಳಿಕೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಈಶಾಗೆ ಬೇರೆ ದಾರಿಯಿಲ್ಲ. ರಮೇಶ್ ಬಾಬು ಅವರ ಎಲ್ಲಾ ಮಾನಹಾನಿಕರ ಹೇಳಿಕೆಗಳನ್ನು ಈಶಾ ಬಲವಾಗಿ ಖಂಡಿಸುತ್ತದೆ ಮತ್ತು ಅವರು ನೀಡಿದ ಆಧಾರರಹಿತ ಹೇಳಿಕೆಗಳನ್ನು ಸಂಪೂರ್ಣ ಹಿಂಪಡೆಯಬೇಕು ಮತ್ತು ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಪಡಿಸುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ