IND vs PAK: ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಪಿಚ್ ರಿಪೋರ್ಟ್, ಪ್ಲೇಯಿಂಗ್ 11 ಪಟ್ಟಿ ಹೀಗಿದೆ

ಕಳೆದ ವಿಶ್ವಕಪ್‌ನಲ್ಲಿ ಅನುಭವಿಸಿದ ಕೆಟ್ಟ ಸೋಲಿಗೆ ಸೇಡು ತೀರಿಸಿಕೊಳ್ಳಲು ಇದೀಗ ಟೀಂ ಇಂಡಿಯಾ ರೆಡಿಯಾಗಿದೆ. ಇನ್ನೊಂದೆಡೆ ಕಳೆದ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ನೀಡಿದ ಉತ್ತಮ ಪ್ರದರ್ಶನವನ್ನೇ ಮುಂದುವರಿಸಲು ಪಾಕ್ ಪಡೆ ಪ್ಲ್ಯಾನ್ ನಡೆಸಿದೆ,

Written by - Bhavishya Shetty | Last Updated : Oct 22, 2022, 05:28 PM IST
    • ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ
    • ಐತಿಹಾಸಿಕ ಪಂದ್ಯಕ್ಕೆ ಮೆಲ್ಬರ್ನ್‌ನ ಎಂಸಿಜಿ ಮೈದಾನ ಸಾಕ್ಷಿ
    • 2021ರ ಟಿ20 ವಿಶ್ವಕಪ್ ಬಳಿಕ ಭಾರತ-ಪಾಕ್ ಮುಖಾಮುಖಿ
IND vs PAK: ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ: ಪಿಚ್ ರಿಪೋರ್ಟ್, ಪ್ಲೇಯಿಂಗ್ 11 ಪಟ್ಟಿ ಹೀಗಿದೆ  title=
cricket

ಕ್ರಿಕೆಟ್ ನಲ್ಲಿ ಭಾರತ ಅದೆಷ್ಟೋ ದೇಶಗಳ ಜೊತೆ ಪಂದ್ಯಗಳನ್ನು ಆಡಿದೆ. ಆದರೆ ಪಾಕಿಸ್ತಾನ ತಂಡದ ಜೊತೆ ನಡೆಯುವ ಪಂದ್ಯ ಮಾತ್ರ ಅತ್ಯಂತ ಕುತೂಹಲಕಾರಿ ಹಾಗೂ ಹೈವೋಲ್ಟೇಜ್ ಪಂದ್ಯ ಎಂದರೆ ತಪ್ಪಾಗಲಾರದು. ಈ ಐತಿಹಾಸಿಕ ಪಂದ್ಯಕ್ಕೆ ಮೆಲ್ಬರ್ನ್‌ನ ಎಂಸಿಜಿ ಮೈದಾನ ಸಾಕ್ಷಿಯಾಗಲಿದೆ. ಇನ್ನು 2021ರ ಟಿ20 ವಿಶ್ವಕಪ್ ಬಳಿಕ ಐಸಿಸಿ ಟ್ರೋಫಿಗಾಗಿ ಭಾರತ-ಪಾಕ್ ತಂಡಗಳು ಮುಖಾಮುಖಿಯಾಗುತ್ತಿವೆ.

ಇದನ್ನೂ ಓದಿ: IND vs PAK: ಐತಿಹಾಸಿಕ ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಗುಡ್ ನ್ಯೂಸ್!

ಕಳೆದ ವಿಶ್ವಕಪ್‌ನಲ್ಲಿ ಅನುಭವಿಸಿದ ಕೆಟ್ಟ ಸೋಲಿಗೆ ಸೇಡು ತೀರಿಸಿಕೊಳ್ಳಲು ಇದೀಗ ಟೀಂ ಇಂಡಿಯಾ ರೆಡಿಯಾಗಿದೆ. ಇನ್ನೊಂದೆಡೆ ಕಳೆದ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧ ನೀಡಿದ ಉತ್ತಮ ಪ್ರದರ್ಶನವನ್ನೇ ಮುಂದುವರಿಸಲು ಪಾಕ್ ಪಡೆ ಪ್ಲ್ಯಾನ್ ನಡೆಸಿದೆ,

ಈ ಹೈವೋಲ್ಟೆಜ್ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30ಕ್ಕೆ ಪ್ರಾರಂಭಗೊಳ್ಳಲಿದೆ. ಐತಿಹಾಸಿಕ ಪಂದ್ಯಕ್ಕೆ ಮೆಲ್ಬರ್ನ್ ನ ಎಂಸಿಜಿ ಮೈದಾನ ಸಾಕ್ಷಿಯಾಗಲಿದ್ದು, ಅಲ್ಲಿನ ಹವಾಮಾನ ವರದಿ, ಪಿಚ್ ರಿಪೋರ್ಟ್ ಮತ್ತು ಸಂಭಾವ್ಯ ಆಟಗಾರರ ಪಟ್ಟಿ ಹೀಗಿದೆ.

ಹವಾಮಾನ ವರದಿ:

ಅಕ್ಟೋಬರ್ 23ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿವರೆಗೆ ವಾತಾವರಣ ಉತ್ತಮವಾಗಿದೆ. ಇನ್ನು ಇಲ್ಲಿನ ಹ್ಯುಮಿಡಿಟಿ ಶೇಕಡಾ 83ರಷ್ಟಿರಲಿದ್ದು, ಗಾಳಿಯು 19/km ವೇಗದಲ್ಲಿ ಬೀಸಲಿದೆ. ಒಂದು ವೇಳೆ ಮಳೆಯಾದರೆ ಪಿಚ್ ಔಟ್‌ಫೀಲ್ಡ್ ತೇವಾಂಶದಿಂದ ಕೂಡಿರಲಿದೆ. ಇನ್ನೊಂದೆಡೆ ಎಂಸಿಜಿಯಲ್ಲಿ ಅಕ್ಟೋಬರ್ 24 ಮತ್ತು 25ರಂದು ಸಹ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಎಷ್ಟು ಓವರ್‌ಗಳನ್ನ ವೀಕ್ಷಿಸಲು ಸಾಧ್ಯವಿದೆ ಎಂಬುದು ತಿಳಿದುಬರಲಿದೆ.

ಪಿಚ್ ರಿಪೋರ್ಟ್‌:

ಮೆಲ್ಬರ್ನ್ ಎಂಸಿಜಿ ಕ್ರಿಕೆಟ್ ಮೈದಾನವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಉತ್ತಮವಾಗಿದೆ. ಪೇಸರ್‌ಗಳು ಪಂದ್ಯದ ಆರಂಭದಲ್ಲಿ ಉತ್ತಮ ಬೌನ್ಸ್‌ ಸಹ ಕಾಣಬಹುದು. ಇನ್ನು ಈ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗುವುದು ತುಂಬಾ ಕಡಿಮೆ. ಮೊದಲ ಇನ್ನಿಂಗ್ಸ್‌ ಸ್ಕೋರ್ 150 ರನ್‌ಗಳಷ್ಟಿದ್ದು, ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡವು ಉತ್ತಮ ದಾಖಲೆಯನ್ನು ಮಾಡಿದೆ, ಇವಿಷ್ಟು ಈ ಹಿಂದಿನ ಪಂದ್ಯದ ಆಧಾರವಾಗಿದೆ.

ಭಾರತ-ಪಾಕ್ ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ) , ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ/ಹರ್ಷಲ್ ಪಟೇಲ್, ಯುಜವೇಂದ್ರ ಚಹಾಲ್

ಇದನ್ನೂ ಓದಿ: T20 World Cup: T20 ವಿಶ್ವಕಪ್ ನಲ್ಲಿ ಭಾರತದ ಸೂಪರ್ 12 ವೇಳಾಪಟ್ಟಿಯ ಸಂಪೂರ್ಣ ವಿವರ

ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖಾರ್ ಜಮಾನ್, ಮೊಹಮ್ಮದ್ ನವಾಜ್, ಇಫ್ತಿಕರ್ ಅಹಮದ್, ಶಾನ್ ಮಸೂದ್, ಆಸಿಫ್ ಅಲಿ, ಶದಾಬ್ ಖಾನ್, ಶಾಹಿನ್ ಅಫ್ರಿದಿ, ನಾಸಿರ್ ಷಾ, ಹ್ಯಾರಿಸ್ ರೌಫ್

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News