ನವದೆಹಲಿ: ಬೆಂಗಳೂರಿನ 2ನೇ ಹಂತದ ಮೆಟ್ರೋಗೆ ವಿದ್ಯುತ್ತಿನೀಕರಣ ಮತ್ತು ವಿದ್ಯುತ್ ಒದಗಿಸುವ ಗುತ್ತಿದೆ Alstom ಕಂಪನಿಗೆ ಸಿಕ್ಕಿದೆ. ನಮ್ಮ ಮೆಟ್ರೋದ 33 ಕಿಮೀ ಉದ್ದದ ವಿದ್ಯುನ್ಮಾನೀಕರಣಕ್ಕಾಗಿ ಬೆಂಗಳೂರು ಮೆಟ್ರೊ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಈ ಕಾಂಟ್ರಾಕ್ಟ್ ಅನ್ನು ನೀಡಿದೆ.


COMMERCIAL BREAK
SCROLL TO CONTINUE READING

580 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿರುವ ಈ ಕೆಲಸ ಭಾರತದಲ್ಲಿ Alstomನ ಮೂರನೇ ಅತಿ ದೊಡ್ಡ ಕೆಲಸವಾಗಿದೆ. ನಮ್ಮ ಮೆಟ್ರೋದ ಎರಡನೇ ಹಂತದಲ್ಲಿ ಮೆಟ್ರೋ ಸೇವೆಯು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್ಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಿಗೂ ಲಭ್ಯಬಾಗುತ್ತದೆ. ಇದರಿಂದ ಟ್ರಾಫಿಕ್ ಜಾಮ್ ನಿಂದ ಬೇಸತ್ತಿರುವ ಸಿಲಿಕಾನ್ ಸಿಟಿಯ ಜನರಿಗೂ ಅನುಕೂಲವಾಗುತ್ತದೆ.


ನೂತನ ವಿದ್ಯುತ್ ಪೂರೈಕೆಯ ತಂತ್ರಜ್ಞಾನವನ್ನು ನವೀಕರಿಸಲು ಹೊಸ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ Alstom ಕೆಲಸ ಮಾಡಲಿದೆ. ಇದು SCADA ವ್ಯವಸ್ಥೆಯನ್ನು ಸಹ ಒಳಗೊಂಡಿರುತ್ತದೆ. ಈ ಯೋಜನೆಯ ಕಾರ್ಯವು ಐದು ಹಂತಗಳಲ್ಲಿ ಪೂರ್ಣಗೊಳ್ಳುತ್ತದೆ. 2019 ರಲ್ಲಿ ಮೊದಲ ಹಂತ ಪೂರ್ಣಗೊಳ್ಳಲಿದ್ದು, ಇದು 6.5 ಕಿ.ಮೀ ಮೆಟ್ರೋ ಲೈನ್ ಒಳಗೊಂಡಿದೆ.


ಕಂಪನಿಯ ವ್ಯವಸ್ಥಾಪಕ ನಿರ್ದೇಶಕ(ಭಾರತ ಮತ್ತು ದಕ್ಷಿಣ ಏಷ್ಯಾ) ಅಲನ್ ಸ್ಪೋರ್ ಪ್ರಕಾರ, ಈ ಯೋಜನೆಯು ನಮ್ಮ ಗ್ರಾಹಕರಿಗೆ ಲಾಭದಾಯಕ ಸಾಮರ್ಥ್ಯಗಳನ್ನು ಮತ್ತು ಪರಿಹಾರಗಳನ್ನು ಒದಗಿಸಲು ಸಹಾಯ ಮಾಡುತ್ತದೆ. BMRCL ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಥ್ ಪ್ರಕಾರ, ಈ ಯೋಜನೆಯಡಿಯಲ್ಲಿ ಮೊದಲ ಲೈನ್ ಆರಂಭವಾದ ಬಳಿಕ ಸಂಚಾರ ದಟ್ಟನೆ ಕಡಿಮೆಯಾಗಿ, ಟ್ರಾಫಿಕ್ ಜಾಮ್ ತೊಂದರೆ ನಿವಾರಣೆಯಾಗುತ್ತದೆ. ಇದು ಪರಿಸರಕ್ಕೆ ಪ್ರಯೋಜನವನ್ನು ನೀಡುತ್ತದೆ.