ಬೆಂಗಳೂರು- ದೇಶದಲ್ಲಿ ಕರೋನಾ ಹೊಸ ತಳಿ ಲಗ್ಗೆ ಇಟ್ಟಿದೆ, ಈ ಹೊಸ ರೂಪಾಂತರವೂ ಕರೋನಾ ನಾಲ್ಕನೇ ಅಲೆಗೆ ಕಾರಣವಾಗಬಹುದು ಎಂಬ ವರದಿಗಳ ನಡುವೆ ಸಿಹಿ ಸುದ್ದಿಯೊಂದು ಲಭಿಸಿದೆ. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಶೀಘ್ರದಲ್ಲೇ ಕರೋನಾ ಲಸಿಕೆ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.  


COMMERCIAL BREAK
SCROLL TO CONTINUE READING

ಕೋವಿಡ್ ನಾಲ್ಕನೇ ಅಲೆಯ ಮುನ್ಸೂಚನೆ ಈಗಾಗಲೇ ಸಿಕ್ಕಿದ್ದು ದೆಹಲಿ ಮತ್ತಿತರ ರಾಜ್ಯಗಳಲ್ಲಿ ಏರಿಕೆ ಕಂಡುಬಂದಿದೆ. ರಾಜ್ಯಕ್ಕೂ ನಾಲ್ಕನೇ ಅಲೆ ಪ್ರವೇಶಿಸಿದರೆ, ಈ ಬಾರಿ ಆಸ್ಪತ್ರೆಯ ದಾಖಲೀಕರಣ ಹೆಚ್ಚಾಗಲಿದೆಯಾ, ಹೊಸ ಕೋವಿಡ್ ತಳಿ ಸಮಸ್ಯೆಯನ್ನು ಎಷ್ಟು ಉಲ್ಬಣಗೊಳಿಸಲಿದೆ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಇಂದು ಈ ಬಗ್ಗೆ ಸಿಎಂ ಜೊತೆ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ. 


ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ, 2-3 ವಾರ ಹಿಂದೆ ಇದ್ದೇವೆ.‌ 2-3 ತಿಂಗಳ ಬಳಿಕವಷ್ಟೇ ಇಲ್ಲಿನ ಕೋವಿಡ್ ಬೆಳವಣಿಗೆ ತಿಳಿಯಲಿದೆ. ರಾಜ್ಯದಲ್ಲಿ ಟೆಸ್ಟಿಂಗ್ ಪ್ರಮಾಣವನ್ನು ಪಾಸಿಟಿವಿಟಿ ದರದ ಆಧಾರದಲ್ಲಿ ಹೆಚ್ಚು ಮಾಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ನಾವು ಟೆಸ್ಟಿಂಗ್ ಮಾಡ್ತಿದ್ದೇವೆ. ಅನಗತ್ಯ ಟೆಸ್ಟ್ ಬೇಕಾಗಿಲ್ಲ ಎಂದರು. 


ಇದನ್ನೂ ಓದಿ- ಕೊರೊನಾ 4ನೇ ಅಲೆ ಆತಂಕ.. ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಕುರಿತು ವಿಶೇಷ ಸಭೆ


ಮಾಸ್ಕ್ ಬಗ್ಗೆ ನಿರ್ಲಕ್ಷ್ಯ ಬೇಡ:
ಇದೇ ವೇಳೆ ಕರೋನಾ ಹೊರಟೇ ಹೋಯಿತು ಎಂದು ಜನರು ಮಾಸ್ಕ್ ನಿರ್ಲಕ್ಷಿಸುತ್ತಿದ್ದಾರೆ. ಆದರೆ  ಕೋವಿಡ್-19 ಕಡಿಮೆ ಆಗಿದೆಯೇ ಹೊರತು, ಅದು ಸಂಪೂರ್ಣವಾಗಿ ಮುಗಿದಿಲ್ಲ. ಹಾಗಾಗಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.


ಕರೋನಾ ಲಸಿಕೆ ಅತ್ಯಗತ್ಯ:
ಕರೋನಾವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಹಾಗಾಗಿ ಎಲ್ಲರೂ ತಪ್ಪದೇ ಕರೋನಾ ಲಸಿಕೆಯನ್ನು ಪಡೆಯಿರಿ. ನಮ್ಮಲ್ಲಿ ಸಾಕಷ್ಟು ಮಂದಿ  ಕರೋನಾ ಲಸಿಕೆಯ ಸೆಕೆಂಡ್ ಡೋಸ್ ಕೂಡ ಪಡೆದಿಲ್ಲ. 2ನೇ ಡೋಸ್ ಪಡೆದಿಲ್ಲದವರು ಎರಡನೇ ಡೋಸ್ ಪಡೆಯಬೇಕು. ಬೂಸ್ಟರ್ ಡೋಸ್ ಪಡೆಯಲು ಅರ್ಹರಾದವರು ಬೂಸ್ಟರ್ ಡೋಸ್ ಅನ್ನು ಪಡೆಯಿರಿ.  12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಪೋಷಕರು ಲಸಿಕೆ ಕೊಡಿಸಬೇಕು. ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೂ ಶೀಘ್ರವೇ ಲಸಿಕೆ ಲಭ್ಯವಾಗಲಿದೆ ಎಂದರು.


ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ: ನಮಗೇ ಮಗು ಕೊಡಿ ಎಂದು ದುಂಬಾಲು ಬಿದ್ದ ಜನ


ಇನ್ನು ರಾಜ್ಯದಲ್ಲಿ ಔಷಧಿ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ರಾಜ್ಯದಲ್ಲಿ ಔಷಧಿ ಕೊರತೆ ಇಲ್ಲ. ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ  ಅಕೌಂಟ್ ಗೆ ಹಣ ಹಾಕಿದ್ದೇವೆ. ಸ್ಥಳೀಯವಾಗಿ ಅವಶ್ಯಕವಾದ ಔಷಧಿಗಳನ್ನು ಖರೀದಿ ಮಾಡಲು ಅನುಮತಿ ಕೊಟ್ಟಿದ್ದೇವೆ. ಅವರು ಔಷಧಿ ಖರೀದಿ ಮಾಡಬಹುದು ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.