ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ: ನಮಗೇ ಮಗು ಕೊಡಿ ಎಂದು ದುಂಬಾಲು ಬಿದ್ದ ಜನ

ನವಜಾತ ಶಿಶು ಪತ್ತೆ: ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ವೊಂದರಲ್ಲಿ ತಮಗೆ ಬೇಡವಾದ ಮಗುವನ್ನು ಇಟ್ಟು ಹೋಗಿದ್ದಾರೆ. ಯಾರೂ ಇಲ್ಲದ ಜಾಗದಲ್ಲಿ ಮಗು ಅಳುತ್ತಿದ್ದ ಶಬ್ದ ಕೇಳಿ ಬ್ಯಾಗ್ ಬಳಿ ಬಂದು ನೋಡಿದ ಸಾರ್ವಜನಿಕರಿಗೆ ನವಜಾತ ಗಂಡು ಮಗು ಪತ್ತೆಯಾಗಿದೆ. 

Written by - Yashaswini V | Last Updated : Apr 25, 2022, 11:36 AM IST
  • ಬ್ಯಾಗ್ ನಲ್ಲಿ ಮಗು ಇಟ್ಟು ಪರಾರಿಯಾಗಿರುವ ಮಗುವಿನ ಪೋಷಕರು.
  • ಬ್ಯಾಗ್ ತೆಗೆದು ನೋಡಿದ ಸಾರ್ವಜನಿಕರಿಂದ ಹನೂರು ಪೊಲೀಸರಿಗೆ ದೂರು.
  • ನವಜಾತ ಶಿಶು ಪಡೆಯಲು ಅನೇಕ ಜನರು ಪೊಲೀಸರ ಬಳಿ ಮನವಿ.
ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ: ನಮಗೇ ಮಗು ಕೊಡಿ ಎಂದು ದುಂಬಾಲು ಬಿದ್ದ ಜನ  title=
Baby boy found at bus stop in Chamaraja nagar

ಚಾಮರಾಜನಗರ: ಖಾಸಗಿ ಬಸ್ ನಿಲ್ದಾಣದಲ್ಲಿ ನವಜಾತ ಗಂಡು ಮಗುವನ್ನು ಬ್ಯಾಗ್ ನಲ್ಲಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಚಾಮರಾಜನಗರ ಜಿಲ್ಲೆಯ ಹನೂರಿನ ಪ್ರೈವೇಟ್ ಬಸ್ ನಿಲ್ದಾಣದಲ್ಲಿ ಭಾನುವಾರ (ಏಪ್ರಿಲ್ 24) ರಾತ್ರಿ ಈ ಘಟನೆ ನಡೆದಿದೆ.

ಏಳು ದಿನದ ಹಿಂದೆ ಜನಿಸಿರುವ ಮಗು:
ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ವೊಂದರಲ್ಲಿ ತಮಗೆ ಬೇಡವಾದ ಮಗುವನ್ನು ಇಟ್ಟು ಹೋಗಿದ್ದಾರೆ. ಯಾರೂ ಇಲ್ಲದ ಜಾಗದಲ್ಲಿ ಮಗು ಅಳುತ್ತಿದ್ದ ಶಬ್ದ ಕೇಳಿ ಬ್ಯಾಗ್ ಬಳಿ ಬಂದು ನೋಡಿದ ಸಾರ್ವಜನಿಕರಿಗೆ ನವಜಾತ ಗಂಡು ಮಗು ಪತ್ತೆಯಾಗಿದೆ. ಬ್ಯಾಗ್ ನಲ್ಲಿದ್ದ ಮಗು ಕೇವಲ ಏಳು ದಿನಗಳ ಹಿಂದೆಯಷ್ಟೇ ಜನಿಸಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- ರೇಷನ್ ಕಾರ್ಡ್ ಹೊಸ ನಿಯಮ, ಇಂತಹವರು ಕೂಡಲೇ ನಿಮ್ಮ ಕಾರ್ಡ್ ಸರೆಂಡರ್ ಮಾಡಿ ಇಲ್ಲವೇ....

ಪೋಷಕರಿಗಾಗಿ ಹುಡುಕಾಟ:
ಬ್ಯಾಗ್ ನಲ್ಲಿ ಮಗು ಪತ್ತೆಯಾದ ಘಟನೆ ಬಗ್ಗೆ ಸಾರ್ವಜನಿಕರು ಹನೂರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗುವನ್ನು ವಶಕ್ಕೆ ಪಡೆದು ಮಗುವಿನ ಪೋಷಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಅಕ್ಕ ಪಕ್ಕದ ಸಿಸಿಟಿವಿ ಕ್ಯಾಮರಾಗಳ ಪುಟೇಜ್ ಗಳನ್ನು ಪರಿಶೀಲಿಸುತ್ತಿದ್ದು ನವಜಾತ ಶಿಶುವನ್ನು ಬಿಟ್ಟು ಹೋದವರಿಗಾಗಿ ಹುಡುಕುತ್ತಿದ್ದಾರೆ. 

ಇದನ್ನೂ ಓದಿ- ಕಾಂಗ್ರೆಸ್ ಇಬ್ಭಾಗವಾಗಲಿದೆ; ಬಿಜೆಪಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರದ ಯೋಗ- ನಳಿನ್‍ಕುಮಾರ್ ಕಟೀಲ್

ನಮಗೇ ಮಗು ಕೊಡಿ ಎಂದು ದುಂಬಾಲು ಬಿದ್ದ ಜನ :
ಬಸ್ ನಿಲ್ದಾಣದಲ್ಲಿ ಬ್ಯಾಗ್ ನಲ್ಲಿ ಸಿಕ್ಕ ಮುದ್ದಾದ ಮಗುವನ್ನು ಸಾಕುವುದಾಗಿ ಹಲವಾರು ಮಂದಿ ನಾ ಮುಂದು... ತಾ ಮುಂದು... ಎಂದು ಮುಂದೆ ಬರುತ್ತಿದ್ದು, ಆ ಮಗುವನ್ನು ನಮಗೇ ಕೊಡಿ ನಾವು ಸಾಕಿಕೊಳ್ಳುತ್ತೇವೆ ಎಂದು ದುಂಬಾಲು ಬಿದ್ದಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News