ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಹಲವೆಡೆ ಪ್ರಚಾರ ಮಾಡಿರುವ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ನಾಳೆ(ಏ.12)ಯಿಂದ ಎರಡು ದಿನಗಳ ರಾಜ್ಯ ಪ್ರವಾಸ ಮಾಡಲಿದ್ದಾರೆ. 


COMMERCIAL BREAK
SCROLL TO CONTINUE READING

ಬಿಜೆಪಿ ಕರುನಾಡು ಜಾಗೃತಿ ಯಾತ್ರೆಯಲ್ಲಿ ಈ ಬರಿ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅಮೀರ್ ಷಾ ಪ್ರವಾಸ ಮಾಡಲಿದ್ದಾರೆ. ಇಂದು ರಾತ್ರಿಯೇ ಹುಬ್ಬಳ್ಳಿಗೆ ಅಮಿತ್ ಷಾ ಆಗಮಿಸಲಿದ್ದು, ನಾಳೆ ಧಾರವಾಡದಲ್ಲಿ ಕಾಂಗ್ರೆಸ್ ಸರ್ಕಾರದ ಒಡೆದು ಆಳುವ ನೀತಿಯನ್ನು ವಿರೋಧಿಸಿ ಧರಣಿ ಸತ್ಯಾಗ್ರಹ ಮಾಡಲಿದ್ದಾರೆ. 


ಏಪ್ರಿಲ್ 12ರ ಪ್ರವಾಸ 
* ಬೆಳಿಗ್ಗೆ ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಅಮಿತ್ ಷಾ ಭೇಟಿ ನೀಡಲಿದ್ದಾರೆ. 
* ನಂತರ ಸಾಧನಾಕೇರಿಗೆ ಭೇಟಿ ನೀಡಿ ಬೇಂದ್ರೆ ಸ್ಮಾರಕಕ್ಕೆ ಗೌರವ ಸಮರ್ಪಣೆ.
* ಬೆಳಗ್ಗೆ 11 ಗಂಟೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ‌ ಎದುರು ಕಾಂಗ್ರೆಸ್ ಸರ್ಕಾರದ ಒಡೆದು ಆಳುವ ನೀತಿಯನ್ನು ವಿರೋಧಿಸಿ ಅಮಿತ್ ಷಾ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದೆ. ಅಲ್ಲದೆ ಬಿಜೆಪಿ ಸಂಸದರಿರುವ ಎಲ್ಲಾ ಕ್ಷೇತ್ರಗಳಲ್ಲೂ ಅಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಯಲಿದೆ. 
* ನಂತರ ರೋಣ ತಾಲ್ಲೂಕಿನ ಅಬ್ಬಿಗೇರಿಯ ಅನ್ನದಾನೇಶ್ವರ ಪ್ರೌಢಶಾಲೆ ‌ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆ ಹಾಗೂ ಮುಷ್ಟಿಧಾನ್ಯ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗಿ.
*ಸಂಜೆ ಪುಟ್ಟರಾಜ ಗವಾಯಿ ಆಶ್ರಮಕ್ಕೆ ಭೇಟಿ


ಏಪ್ರಿಲ್ 13ರ ಪ್ರವಾಸ
* ಬೆಳಿಗ್ಗೆ ಬೆಳಗಾವಿಗೆ ಭೇಟಿ ನೀಡಲಿರುವ ಅಮಿತ್ ಷಾ, ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. 
* ನಂತರ ನಂದಗಡದ ಸಂಗೊಳ್ಳಿ ರಾಯಣ್ಣ ಸಮಾಧಿಗೆ ಗೌರವ ಅರ್ಪಿಸಿ, ಮುಧೋಳದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿ.
* ಮಧ್ಯಾಹ್ನ ಮಾಜಿ ಸಚಿವ ಗೋವಿಂದ ಕಾರಜೋಳ ಮನೆಗೆ ಭೇಟಿ.
* ನಂತರ ಗೋಕಾಕ್ ನಗರದಲ್ಲಿ ನಡೆಯಲಿರುವ ರೋಡ್ ಶೋನಲ್ಲಿ ಅಮಿತ್ ಷಾ ಭಾಗವಹಿಸಲಿದ್ದಾರೆ. 
* ಸಂಜೆ ನಿಪ್ಪಾಣಿಯ ಮಹಿಳಾ ಸಮಾವೇಶದಲ್ಲಿ ಹಾಗೂ ಕೆಎಲ್ಇ ವಿದ್ಯಾರ್ಥಿಗಳ ಜೊತೆಗಿನ ಅಮಿತ್ ಷಾ ಸಂವಾದ ನಡೆಸಲಿದ್ದಾರೆ.


ಈ ಬಾರಿ ಅಮಿತ್ ಷಾ ರಾಜ್ಯ ಪ್ರವಾಸದಲ್ಲಿ ಹುಬ್ಬಳ್ಳಿ ಸಿದ್ದಾರೂಢ ಮಠ, ಗದಗದ ಪುಟ್ಟರಾಜ ಗವಾಯಿ ಆಶ್ರಮ, ಗದುಗಿನ ವೀರನಾರಾಯಣ ಸ್ವಾಮಿ ದೇಗುಲ, ಮೂರು ಸಾವಿರ ಮಠಗಳಿಗೆ ಷಾ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ.