ಫೆ.24 ರಿಂದ ಫೆ.26ರವರೆಗೆ ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಅಮಿತ್ ಷಾ
ಈ ಬಾರಿ ಬೀದರ್, ಕಲಬುರ್ಗಿ ಪ್ರವಾಸ ಕೈಗೊಂಡಿರುವ ಅಮಿತ್ ಷಾ.
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊನ್ನೆ ಮೊನ್ನೆಯಷ್ಟೇ ದಕ್ಷಿಣ ಕರ್ನಾಟಕ ಜಿಲ್ಲೆಗಳ ಪ್ರವಾಸ ಮುಗಿಸಿ ದೆಹಲಿಗೆ ಹಿಂತಿರುಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಫೆ.24 ರಿಂದ ಫೆ.26ರವರೆಗೆ ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಮಯದಲ್ಲಿ ಬೀದರ್, ಕಲಬುರ್ಗಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಈ ಮೂರು ದಿನಗಳು ಅಮಿತ್ ಷಾ ಕಾರ್ಯ ಕಲಾಪಗಳೇನು ಎಂಬುದರ ವಿವರ ಇಲ್ಲಿದೆ...
ಫೆಬ್ರವರಿ 24
* ಫೆ. 24ರ ರಾತ್ರಿ 8.15ಕ್ಕೆ ಬೀದರ್ ಜಿಲ್ಲೆಗೆ ಆಗಮಿಸಲಿರುವ ಅಮಿತ್ ಷಾ ಹಬ್ಸಿಕೋಟೆ ಸರ್ಕಾರಿ ಶಾಲೆಯಲ್ಲಿ ತಂಗಲಿದ್ದಾರೆ.
ಫೆಬ್ರವರಿ 25
* ಮುಂಜಾನೆ ನರಸಿಂಹರಾಜ ದೇವಸ್ಥಾನಕ್ಕೆ ಅಮಿತ್ ಷಾ ಭೇಟಿ.
* ಬೆಳಗ್ಗೆ 10.15ಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಂಗಳಗಿ ಗ್ರಾಮದ ರೈತ ಶಿವರಾಜ್ ಬಸವಲಿಂಗಪ್ಪ ಅವರ ನಿವಾಸಕ್ಕೆ ಭೇಟಿ.
* ಬೆಳಗ್ಗೆ 11ಕ್ಕೆ ಕಬ್ಬು ಬೆಳೆಗಾರರ ಜೊತೆಗೆ ಸಂವಾದ.
* ಮಧ್ಯಾಹ್ನ 12.15ಕ್ಕೆ ಕಲಬುರ್ಗಿಯ ಎಸ್ಸಿ ಕನ್ವೆನ್ಷನ್ ಹಾಲ್ ನಲ್ಲಿ ಕಾರ್ಯಕ್ರಮ.
* ಮಧ್ಯಾಹ್ನ 2.55ಕ್ಕೆ ಸುರಪುರದಲ್ಲಿ ನವಶಕ್ತಿ ಸಮಾವೇಶದಲ್ಲಿ ಭಾಗಿ.
* ಸಂಜೆ 4.45ಕ್ಕೆ ಮಾತೆ ಮಾಣಿಕೇಶ್ವರಿ ದೇವಾಲಯಕ್ಕೆ ಭೇಟಿ.
* ಸಂಜೆ 6.10ಕ್ಕೆ ಶರಣ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ.
* ರಾತ್ರಿ 7 ಕ್ಕೆ ಎಚ್.ಕೆ.ಸಿಸಿಐ ಸದಸ್ಯರ ಜೊತೆ ಸಭೆ.
ಫೆಬ್ರವರಿ 26
* ಫೆ. 26ರ ಬೆಳಗ್ಗೆ ಕಲಬುರ್ಗಿಯಲ್ಲಿ ಕಾರ್ಯಕರ್ತರ ಜೊತೆಗೆ ಉಪಹಾರ ಸೇವನೆ.
* ಬೆಳಗ್ಗೆ 9.30ಕ್ಕೆ ಒಬಿಸಿ ನಾಯಕರ ಜೊತೆ ಸಭೆ.
* ಬೆಳಿಗ್ಗೆ 10.30ಕ್ಕೆ ಸುದ್ದಿಗೋಷ್ಠಿ.
* ಬೆಳಿಗ್ಗೆ 11.30ಕ್ಕೆ ಮಲಖೇಡ್ ಉತ್ತರಾದಿ ಮಠಕ್ಕೆ ಅಮಿತ್ ಷಾ ಭೇಟಿ.
* ಮಧ್ಯಾಹ್ನ 12.30ಕ್ಕೆ ಕಲಬುರ್ಗಿಯಲ್ಲಿ ನವಶಕ್ತಿ ಸಮಾವೇಶದಲ್ಲಿ ಭಾಗಿ.
* ಮಧ್ಯಾಹ್ನ 3.05ಕ್ಕೆ ಸೇಡಂನಲ್ಲಿ ನವ ಶಕ್ತಿ ಸಮಾವೇಶದಲ್ಲಿ ಭಾಗಿ.
* ಸಂಜೆ 5ಕ್ಕೆ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ.
* ಸಂಜೆ 6ಕ್ಕೆ ಮರಾಠಿ ನಾಯಕರ ಜೊತೆ ಸಭೆ.
* ಅಂದು ರಾತ್ರಿ 8ಕ್ಕೆ ಬೀದರ್ ವಿಮಾನ ನಿಲ್ದಾಣದಿಂದ ದೆಹಲಿಗೆ ಶಾ ಪ್ರಯಾಣ.