ನೀರಿನ ದರ ಏರಿಸುವ ಮೂಲಕ ಬೆಂಗಳೂರು ಜನತೆಗೆ ಕಾಂಗ್ರೆಸ್ ಸರ್ಕಾರದಿಂದ ಮತ್ತೊಂದು ಶಾಕ್!!
Water Price Hike: ಟ್ಯಾಂಕರ್ ಮಾಫಿಯಾ ಮೂಲಕ ಜನರನ್ನು ಸುಲಿಗೆ ಮಾಡಿದ್ದಾಯ್ತು. ಈಗ ನೀರಿನ ದರ ಏರಿಸುವ ಮೂಲಕ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಕೊಡಲು ಹೊರಟಿದೆ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರʼವೆಂದು ಕಿಡಿಕಾರಿದ್ದಾರೆ.
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ವಿವಿಧ ಸೇವೆಗಳ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರವು ಕಾವೇರಿ ನೀರಿನ ದರ ಏರಿಕೆಗೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ದರ ಏರಿಕೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದ್ದು, ಶೀಘ್ರವೇ ಕಾವೇರಿ ನೀರಿನ ದರವೂ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಜಲಮಂಡಳಿ ಸಹ ನೀರಿನ ದರ ಪರಿಷ್ಕರಣೆಯ ಪ್ರಸ್ತಾವನೆಗೆ ಬೆಂಗಳೂರು ನಗರದ ಜನಪ್ರತಿಧಿಗಳ ಸಲಹೆ ಮತ್ತು ಬೆಂಬಲ ಕೋರಿದೆ. ಜಲಮಂಡಳಿಯು ಈಗಾಗಲೇ ಜನಪ್ರತಿನಿಧಿಗಳಿಗೆ ಪತ್ರವನ್ನೂ ಬರೆದಿದೆ ಎನ್ನಲಾಗಿದೆ. ಆದಾಯಕ್ಕಿಂತಲೂ ವೆಚ್ಚವೇ ಹೆಚ್ಚಾಗಿದ್ದು, ನಿರ್ವಹಣೆ ಕಷ್ಟವೆಂದು ಜಲಮಂಡಳಿ ಮನವರಿಕೆ ಮಾಡಿದೆಯಂತೆ. ಗ್ಯಾರಂಟಿ ಯೋಜನೆಗಳ ಪರಿಣಾಮ ಕಾಂಗ್ರೆಸ್ ಸರ್ಕಾರ ವಿವಿಧ ರೀತಿಯಲ್ಲಿ ದರ ಏರಿಕೆ ಮೂಲಕ ಜನಸಾಮಾನ್ಯರಿಂದ ಹಣ ಪೀಕುತ್ತಿದೆ ಅಂತಾ ಆರೋಪಿಸಲಾಗಿದೆ.
ಇದನ್ನೂ ಓದಿ: 35 ವರ್ಷ ಬೀದಿ ಗುಡಿಸುತ್ತಿದ್ದವರಿಗೆ ಉಪಮೇಯರ್ ಪಟ್ಟ !ಡೆಪ್ಯುಟಿ ಮೇಯರ್ ಆದ ಬಳಿಕವೂ ಬೀದಿ ಬದಿಯಲ್ಲಿ ತರಕಾರಿ ಮಾರಾಟ !
ನಾಡದ್ರೋಹಿ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಆಕ್ರೋಶ
ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸಹೋದರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದಕ್ಕೆ ಬೆಂಗಳೂರಿನ ಜನತೆ 'ಉಪಕಾರ ಸ್ಮರಣೆ' ಇಲ್ಲದವರು ಎಂದು ನಿಂದನೆ ಮಾಡುತ್ತೀರಿ. ಜಯನಗರದ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಯಾಕಿಲ್ಲ ಅಂದರೆ ಚುನಾಯಿತ ಶಾಸಕರು ತಗ್ಗಿ-ಬಗ್ಗಿ ನಡೆಯಲಿಲ್ಲ ಎನ್ನುತ್ತೀರಿ. ಬೆಂಗಳೂರಿನ ಜನತೆಯ ಮೇಲೆ ತಮಗೆ ಯಾಕಿಷ್ಟು ಕೋಪ? ಯಾಕಿಷ್ಟು ದ್ವೇಷ?ʼ ಎಂದು ಪ್ರಶ್ನಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.