ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ನವರು ಮತಾಂತರ ನಿಷೇಧ ಕಾಯ್ದೆ ಕಾಂಗ್ರೆಸ್ ಸರ್ಕಾರದ ಕೂಸು ಎಂದು ಹೇಳಿ ತಮ್ಮ ಪಾಪವನ್ನು ನಮ್ಮ ತಲೆಗೆ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಯತೀಂದ್ರ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

"ಈ ಕಾನೂನು ತರಬೇಕೆಂದು 2009ರಲ್ಲಿಯೇ ಚಿದಾನಂದ ಮೂರ್ತಿಯವರೂ ಸೇರಿದಂತೆ ಆರ್ ಎಸ್ ಎಸ್ ನ ಕೆಲವರು ಕಾನೂನು ಆಯೋಗಕ್ಕೆ ಹಾಗು ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದರು.ಅಲ್ಲದೆ ಮಧ್ಯಪ್ರದೇಶದ ಮತಾಂತರ ನಿಷೇಧ ಕಾಯ್ದೆಯನ್ನು ಯಥಾವತ್ತಾಗಿ ಇಲ್ಲಿಯೂ ತರುವಂತೆ ಸಲಹೆ ಕೊಟ್ಟಿದ್ದರು ಎಂದು ಅವರು ಹೇಳಿದರು.


ಇದನ್ನೂ ಓದಿ: Job and Career: ಈ ಜಿಲ್ಲೆಗಳ ರೈತರಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಸುವರ್ಣಾವಕಾಶ...!


"ಅದರಂತೆ ಕಾನೂನು ಆಯೋಗವು ಈ ಕಾಯ್ದೆಯ ಕರಡು ರಚಿಸಿ 2015 ನವೆಂಬರಿನಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ನಂತರ ಆಗಿನ ಕಾನೂನು ಮಂತ್ರಿಗಳಾದ ಜಯಚಂದ್ರರವರ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯಿಂದ ಅದನ್ನು ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಅವಗಾಹನೆಗೆ ಕಳುಹಿಸಲಾಗಿತ್ತು.ಇತರ ಕರಡು ಪ್ರತಿಗಳಂತೆ ಇದನ್ನೂ ಸಂಪುಟ ಸಭೆಗೆ ತರುವಂತೆ ಅವರು ಸೂಚಿಸಿದ್ದರು ಎಂದು ತಿಳಿಸಿದರು.


 Viral Photo: ಸಾರ್ವಜನಿಕವಾಗಿ ಕಪಿಲ್ ದೇವ್‌ಗೆ ಮುತ್ತಿಟ್ಟ ರಣವೀರ್ ಸಿಂಗ್, 'Awkward kiss' ಫೋಟೋ ವೈರಲ್.!


"ಅಲ್ಲದೆ ಆಗಿನ ಕಾಯ್ದೆಗೂ, ಇಂದು ಬಿಜೆಪಿಯವರು ತರುತ್ತಿರುವ ಕಾಯ್ದೆಗೂ ಬಹಳವಾದ ವ್ಯತ್ಯಾಸಗಳಿವೆ. ಈ ಕಾಯ್ದೆಯನ್ನು ತರುವ ಮನಸ್ಸು ಇದ್ದಿದ್ದರೆ ಮತ್ತೆ ಸಂಪುಟ ಸಭೆಯ ಮುಂದಿಡುವ ಪ್ರಯತ್ನ ಕಾಂಗ್ರೆಸ್ ಸರ್ಕಾರ ಮಾಡಬಹುದಿತ್ತು, ಆದರೆ ನಂತರದ ಎರಡು ವರ್ಷಗಳ ನಮ್ಮ ಸರ್ಕಾರದ ಅವಧಿಯಲ್ಲೆಂದೂ ನಾವು ಆ ಪ್ರಯತ್ನ ಮಾಡಲಿಲ್ಲ.ಇದರಿಂದ ಸ್ಪಷ್ಟವಾಗಿ ಕಾಂಗ್ರೆಸ್ ಪಕ್ಷವು ಮತಾಂತರ ನಿಷೇಧ ಕಾಯ್ದೆಯನ್ನು ಎಂದಿಗೂ ವಿರೋಧಿಸಿದೆ ಎಂದು ತಿಳಿಯುತ್ತದೆ" ಎಂದು ಅವರು ಹೇಳಿದರು.


ಆದರೂ ಬಿಜೆಪಿ ಮತ್ತು ಜೆಡಿಎಸ್ ನವರು ಅಸಂವಿಧಾನಿಕವಾದ, ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡುವ ಈ ಕಾಯ್ದೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಚಾಲನೆ ನೀಡಿತ್ತು ಎಂದು ಸುಳ್ಳಿನ ಪ್ರಚಾರ ನಡೆಸುತ್ತಿದ್ದಾರೆ. ದೇಶದ ಜನರಿಗೆ ಕಾಂಗ್ರೆಸ್ ಎಂದೂ ಸಂವಿಧಾನದ ಆಶಯಗಳ ವಿರುದ್ಧ ನಡೆಯುವುದಿಲ್ಲ ಎಂಬ ವಿಶ್ವಾಸವಿದೆ ಹಾಗು ಅದರಂತೆಯೇ ನಾವು ಎಂದಿಗೂ ನಡೆಯತ್ತೇವೆ" ಎಂದು ಯತೀಂದ್ರ ಅವರು ಸ್ಪಷ್ಟಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.