ಬೆಂಗಳೂರು: 2020-21 ನೇ ಸಾಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹರಿಹರ ಇಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ತಂತ್ರಜ್ಞಾನ ತರಬೇತಿಗಳ ಸಂಸ್ಥೆಗಳಿಗೆ ನೆರವು ಯೋಜನೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ(ಎಸ್‍ಸಿಪಿ-ಟಿಎಸ್‍ಪಿ) ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ಉಚಿತ ತರಬೇತಿ ನೀಡಲಾಗುವುದು.


COMMERCIAL BREAK
SCROLL TO CONTINUE READING

ಸರ್ಕಾರದ ಈ ಅವಕಾಶ ಸದುಪಯೋಗ ಪಡೆದುಕೊಂಡು ಹಳ್ಳಿಯಲ್ಲೇ ಇದ್ದು ಗಳಿಸಿ ಉತ್ತಮ ಆದಾಯ


16 ರಿಂದ 45 ವರ್ಷದೊಳಗಿನ ಎಸ್‍ಎಸ್‍ಎಲ್‍ಸಿ/ಐಟಿಐ/ಡಿಪ್ಲೊಮಾ/ಬಿ.ಇ ಪಾಸ್ ಆಗಿರುವ ಪ.ಜಾತಿ ಮತ್ತು ಪ.ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು 4 ತಿಂಗಳು ಅವಧಿಯ ಸಿಎನ್‍ಸಿ ಪ್ರೊಗ್ರಾಮರ್, ಕನ್ವೆನ್ಶನಲ್ ಸರ್ಫೇಸ್ ಗ್ರೈಂಡಿಂಗ್ ಮಷಿನ್ ಆಪರೇಟರ್, ಡಿಸೈನರ್-ಮೆಕ್ಯಾನಿಕಲ್, ಪ್ರೊಡಕ್ಷನ್ ಇಂಜಿನಿಯರ್ ಹಾಗೂ ಯುನಿಗ್ರಾಫಿಕ್ಸ್(ಯುಜಿ) ಮತ್ತು 12 ತಿಂಗಳು ಅವಧಿಯ ಟೂಲ್ ರೂಮ್ ಮಷಿನಿಸ್ಟ್ ತರಬೇತಿ ಕಾರ್ಯಕ್ರಮಗಳನ್ನು ಉಚಿತವಾಗಿ ನಡೆಸಲಾಗುವುದು. ತರಬೇತಿ ಅವಧಿಗೆ ಶಿಷ್ಯವೇತನ ನೀಡಲಾಗುವುದು. ತರಬೇತಿಗಳನ್ನು ಪ್ರತಿ ತಿಂಗಳು ಬ್ಯಾಚ್‍ಗಳಲ್ಲಿ ನಡೆಸಲಾಗುವುದು.


ಕೌಶಲ್ಯಾಭಿವೃದ್ದಿ ಉದ್ಯಮಶೀಲತೆಗಾಗಿ ಉಚಿತ ತರಬೇತಿ..! ತಪ್ಪದೆ ಅರ್ಜಿ ಸಲ್ಲಿಸಿ


ಈ ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ.24 ಕಡೆಯ ದಿನವಾಗಿದ್ದು  ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರು, ಜಿಟಿಟಿಸಿ, 22 ಸಿ & ಡಿ, ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯಾ, ಹರ್ಲಾಪುರ, ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರ, ಹರಿಹರ, ದೂರವಾಗಿ ಸಂಖ್ಯೆ: 08192-243937, 9513010166, 8711913947, 88884488202, 974230685 ನ್ನು ಸಂಪರ್ಕಿಸಬಹುದು.