ಕೌಶಲ್ಯಾಭಿವೃದ್ದಿ ಉದ್ಯಮಶೀಲತೆಗಾಗಿ ಉಚಿತ ತರಬೇತಿ..! ತಪ್ಪದೆ ಅರ್ಜಿ ಸಲ್ಲಿಸಿ

2020-21ನೇ ಸಾಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹರಿಹರ ಇಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಮೂಲಕ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಉದ್ಯೋಗಾವಕಾಶ ಕಲಿಸಲು ಎಸ್.ಎಸ್.ಎಲ್.ಸಿ , ಐಟಿಐ, ಡಿಪ್ಲೋಮಾ ಹಾಗೂ ಬಿ.ಇ ಪಾಸ್ ಆಗಿರುವ ಅಭ್ಯರ್ಥಿಗಳಿಗೆ 2 ತಿಂಗಳ ಅವಧಿಯ ಈ ಕೆಳಕಂಡ ಕಾರ್ಯಕ್ರಮಗಳಿಗೆ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

Last Updated : Sep 1, 2020, 09:55 PM IST
ಕೌಶಲ್ಯಾಭಿವೃದ್ದಿ ಉದ್ಯಮಶೀಲತೆಗಾಗಿ ಉಚಿತ ತರಬೇತಿ..! ತಪ್ಪದೆ ಅರ್ಜಿ ಸಲ್ಲಿಸಿ  title=

ಬೆಂಗಳೂರು: 2020-21ನೇ ಸಾಲಿನಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಹರಿಹರ ಇಲ್ಲಿ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿಯಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ, ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಮೂಲಕ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಉದ್ಯೋಗಾವಕಾಶ ಕಲಿಸಲು ಎಸ್.ಎಸ್.ಎಲ್.ಸಿ , ಐಟಿಐ, ಡಿಪ್ಲೋಮಾ ಹಾಗೂ ಬಿ.ಇ ಪಾಸ್ ಆಗಿರುವ ಅಭ್ಯರ್ಥಿಗಳಿಗೆ 2 ತಿಂಗಳ ಅವಧಿಯ ಈ ಕೆಳಕಂಡ ಕಾರ್ಯಕ್ರಮಗಳಿಗೆ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಸಿಎನ್‍ಸಿ ಆಪರೇಟರ್ ಟರ್ನಿಂಗ್, ಸಿಎನ್‍ಸಿ ಪ್ರೊಗ್ರಾಮರ್, ಸಿಎನ್‍ಸಿ ಆಪರೇಟರ್-ವರ್ಟಿಕಲ್ ಮಷಿನಿಂಗ್ ಸೆಂಟರ್, ಆಪರೇಟರ್- ಕನ್‍ವೆನ್ಶನಲ್ ಮಿಲ್ಲಿಂಗ್, ಕನ್‍ವೆನ್ಶನಲ್ ಸರ್ಫೇಸ್ ಗ್ರಿಂಡಿಂಗ್ ಮಷೀನ್-ಆಪರೇಟರ್, ಕನ್ವೆನ್ಶನಲ್ ಟರ್ನಿಂಗ್ ಆಪರೇಟರ್, ಫಿಟ್ಟರ್ ಮೆಕ್ಯಾನಿಕಲ್ ಅಸೆಂಬ್ಲಿ, ಡಿಸೈನರ್-ಮೆಕ್ಯಾನಿಕಲ್, ಪ್ರೊಡಕ್ಷನ್ ಎಂಜಿನಿಯರ್ ಈ ಎಲ್ಲಾ ಕಾರ್ಯಕ್ರಮಗಳಿಗೆ ಉಚಿತ ತರಬೇತಿ ನೀಡಲಾಗುವುದು.ಹಾಗೂ ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುವುದು. 

ಅರ್ಜಿಗಳನ್ನು ಸಲ್ಲಿಸಲು ಸೆ.11 ಕೊನೆಯ ದಿನವಾಗಿದ್ದು, ಅರ್ಜಿಗಳಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಜಿ.ಟಿ.ಟಿ.ಸಿ 22 ಸಿ&ಡಿ ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯಾ ಹರ್ಲಾಪುರ ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರ ಹರಿಹರ, ದೂರವಾಣಿ ಸಂಖ್ಯೆ: 08192-243937, 7019600676, 8711913947 ,8884488202 ಸಂರ್ಪಕಿಸಬಹುದೆಂದು ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Trending News