ಬೆಂಗಳೂರು: ಬೆಂಗಳೂರು ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್  ವಿವಿಧ ವೃತ್ತಿಗಳಲ್ಲಿ ಡಿಸೆಂಬರ್-2020 ರಿಂದ ಪ್ರಾರಂಭವಾಗಲಿರುವ ಶಿಶಿಕ್ಷು ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಎಸ್.ಎಸ್.ಎಲ್.ಸಿ ಯಲ್ಲಿ ಸಾಮಾನ್ಯ ವರ್ಗ ಹಾಗೂ ಒಬಿಸಿ  ಅಭ್ಯರ್ಥಿಗಳು ಶೇ.60, ಎಸ್.ಸಿ ಹಾಗೂ ಎಸ್‍ಟಿ ಅಭ್ಯರ್ಥಿಗಳು ಶೇ.50  ಅಂಕಗಳೊಂದಿಗೆ ಉತ್ತೀರ್ಣರಾದವರು, ಬಿ.ಪಿ.ಎಲ್ ಅಂತ್ಯೋದಯ ಕಾರ್ಡ ಹೊಂದಿರುವವರು ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ.


ದೇಶದ ವೈಮಾನಿಕ ಕ್ಷೇತ್ರದಲ್ಲಿ ಎಚ್‌ಎಎಲ್ ಕೊಡುಗೆ ಅಪಾರ- ರಾಹುಲ್


ಆಸಕ್ತ ಅಭ್ಯರ್ಥಿಗಳು ನಿಗದಿತ ಎಲ್ಲ  ಮೂಲ ದಾಖಲಾತಿಗಳು ಹಾಗೂ ಉದ್ಯೋಗ ವಿನಿಮಯ ನೋಂದಣಿ ಗುರುತಿನ ಪತ್ರದೊಂದಿಗೆ ನವೆಂಬರ್ 04 ರೊಳಗಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಉದ್ಯೋಗ ವಿನಿಮಿಯ ಕೇಂದ್ರ ಹುಬ್ಬಳ್ಳಿಗೆ ಸಲ್ಲಿಸಬಹುದಾಗಿದೆ.


ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳದೆ ಇರುವ ಅಭ್ಯರ್ಥಿಗಳು, ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದು, ಹೆಚ್ಚಿನ  ಮಾಹಿತಿಗಾಗಿ ಹುಬ್ಬಳ್ಳಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ದೂರವಾಣಿ ಸಂಖ್ಯೆ 0836-2225288 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾಹಿತಿ: ವಾರ್ತಾ ಇಲಾಖೆ