Mandya : ಅನ್ನದಾತರ ಆಕ್ರೋಶದ ಬೆನ್ನಲ್ಲೆ ಇವತ್ತು ಕನ್ನಡಪರ ಹೋರಾಟಗಾರರು ರಸ್ತೆಗೆ ಇಳಿದಿದ್ರು. ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಕೆ ಆರ್ ಎಸ್ ಜಲಾಶಯಕ್ಕೆ ನುಗ್ಗಲು ಮುಂದಾಗಿದ್ರು. ಮುಂದೆ ನಡೆದಿದ್ದು ದೊಡ್ಡ ಹೈಡ್ರಾಮ. 


COMMERCIAL BREAK
SCROLL TO CONTINUE READING

ಹೌದು ಸಕ್ಕರಿನಗರಿ ಮಂಡ್ಯದಲ್ಲಿ ಕಾವೇರಿ ಕಿಚ್ಚು ಆರುವ ಲಕ್ಷಣಗಳು ಕಾಣುತ್ತಿಲ್ಲ. ಕೆ ಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನ ಖಂಡಿಸಿ ಇವತ್ತು ಕನ್ನಡಪರ ಹೋರಾಟಗಾರರು ರಸ್ತೆಗೆ ಇಳಿದಿದ್ರು. ಅಂದಹಾಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯ ಮಂಡ್ಯ ಜಿಲ್ಲೆಯ ರೈತರ ಜೀವನಾಡಿ. 


ಈ ಬಾರಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಇಂತಹ ಸಂದರ್ಭದಲ್ಲಿ ಕಳೆದ ಹಲವು ದಿನಗಳಿಂದ ಕೆ ಆರ್ ಎಸ್ ಜಲಾಶಯದಿಂದ ಕಾವೇರಿ ನದಿಯ ಮೂಲಕ ತಮಿಳುನಾಡಿಗೆ ಪ್ರತಿನಿತ್ಯ 10ರಿಂದ 12 ಸಾವಿರ ಕ್ಯೂಸೆಸ್ ನೀರನ್ನ ಹರಿಬಿಡಲಾಗುತ್ತಿದೆ. 


ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿ ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಆಕ್ರೋಶ ಕಟ್ಟೆ ಹೊಡೆದಿದೆ. ರೈತರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅನ್ನದಾತರ ಆಕ್ರೋಶದ ಬೆನ್ನಲ್ಲೆ ಇವತ್ತು ಕನ್ನಡಪರ ಸಂಘಟನೆ ಕಾರ್ಯಕರ್ತರು ರಸ್ತೆಗೆ ಇಳಿದಿದ್ದರು. ಇವತ್ತು ವಿವಿಧ ಕನ್ನಡಪರ ಹೋರಾಟಗಾರರು ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿ ರಾಜ್ಯಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. 


ಇದನ್ನೂ ಓದಿ-ಗಣಪತಿ ವಿಗ್ರಹ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಗಳ ದಿಢೀರ ದಾಳಿ,ಪಿಓಪಿ ಗಣಪತಿ ವಶಕ್ಕೆ


ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ ನೇರವಾಗಿ ಕೆ ಆರ್ ಎಸ್ ಜಲಾಶಯಕ್ಕೆ ತಲುಪಿ, ಜಲಾಶಯ ಪ್ರಮುಖ ಗೇಟ್ ಬಳಿ ಪ್ರತಿಭಟನೆ ನಡೆಸಿ, ಸರ್ಕಾರ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿಸಚಿವ ಚಲುವರಾಯಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಅಲ್ಲದೆ ಸ್ಥಳಕ್ಕೆ ತಡವಾಗಿ ಬಂದ ಎಇಇ ವಿರುದ್ದ ಹರಿಹಾಯ್ದರು. ನಂತರ ಕೆ ಆರ್ ಎಸ್ ಜಲಾಶಯಕ್ಕೆ ನುಗ್ಗಲು ಪ್ರತಿಭಟನಾಕಾರರು ಮುಂದಾದರೂ. ಹೀಗಾಗಿ ಖಾಕಿಪಡೆ ಪ್ರತಿಭಟನಾಕರರನ್ನ ವಶಕ್ಕೆ ಪಡೆದರು.  


ಅಂದಹಾಗೆ ಮಂಡ್ಯದ ಕೆ ಆರ್ ಎಸ್ ಜಲಾಶಯ 124.80 ಅಡಿ ನೀರಿನ ಸಾಮರ್ಥ್ಯವೊಂದಿದ್ದು, ಇದೀಗ ಜಲಾಶಯದಲ್ಲಿ 102 ಅಡಿ ನೀರು ಸಂಗ್ರಹವಾಗಿದೆ. ಕಳೆದಹಲವು ದಿನಗಳಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಬಿಡುತ್ತಿರುವುದರಿಂದ ಜಲಾಶಯ 100 ಅಡಿ ಸನಿಹಕ್ಕೆ ಬಂದಿದೆ. 


ಇದನ್ನೂ ಓದಿ-ಮರಿಯಾನೆ ಸಾಕೋದರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಬೊಮ್ಮನ್‌ ಮತ್ತು ಬೆಳ್ಳಿ


ಇದೇ ರೀತಿ ನೀರು ಮುಂದುವರೆದರೇ ಜಲಾಶಯ ಸಂಪೂರ್ಣವಾಗಿ ಖಾಲಿಯಾಗಿರುವ ಆತಂಕದಲ್ಲಿ ಜಿಲ್ಲೆಯ ರೈತರು ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಲಾಶಯದಿಂದ ನೀರು ಹರಿಸುತ್ತಿರುವುದು ರೈತರು, ಹೋರಾಟಗಾರರ ಕಣ್ಣು ಕೆಂಪಾಗುವಂತೆ ಮಾಡಿದೆ. ಹೀಗಾಗಿಯೇ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವ ಎಚ್ಚರಿಕೆ ನೀಡಿದ್ರು.  


ಒಟ್ಟಾರೆ ಮಂಡ್ಯದಲ್ಲಿ ಕಾವೇರಿ ಕಿಚ್ಚು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.. ಪ್ರತಿದಿನ ವಿವಿಧ ಸಂಘಟನೆಗಳ ಪ್ರತಿಭಟನೆಗಳು ಮುಂದುವರೆದಿದ್ದು, ಸರ್ಕಾರದ ವಿರುದ್ದ ಅನ್ನದಾತರು, ಕನ್ನಡಪರ ಸಂಘಟನೆಗಳ ಕಾರ್ಯರ್ಕತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.