ಗಣಪತಿ ವಿಗ್ರಹ ದಾಸ್ತಾನು ಕೇಂದ್ರಗಳ ಮೇಲೆ ಅಧಿಕಾರಗಳ ದಿಢೀರ ದಾಳಿ,ಪಿಓಪಿ ಗಣಪತಿ ವಶಕ್ಕೆ

ಧಾರವಾಡ ಸಿ.ಬಿ.ನಗರದ ಲಿಂಗಾಯತ ಭವನ ಪಕ್ಕದ ನಿರ್ಮಾಣ ಕಟ್ಟಡದಲ್ಲಿ ಮಂಜುನಾಥ ಬೆಳಗಾಂವಕರ ಅವರು  ಮಾರಾಟಕ್ಕಾಗಿ ಸಂಗ್ರಹಿಸಿದ್ದ ಗಣಪತಿ ವಿಗ್ರಹಗಳ ದಾಸ್ತಾನು ಕೇಂದ್ರಕ್ಕೆ ಭೇಟ್ಟಿ ನೀಡಿ, ಪರಿಶೀಲಿಸಲಾಯಿತು. ಬಹುತೇಕ ವಿಗ್ರಹಗಳು ಪಿಓಪಿ, ಮಣ್ಣು ಮಿಶ್ರಿತ ಪಿಓಪಿ, ಕೃತಕ ಬಣ್ಣ ಲೇಪಿತ, ಉಸುಕು ಮಿಶ್ರಿತ ಪಿಓಪಿ ಗಣಪತಿ ವಿಗ್ರಹಗಳು ಕಂಡು ಬಂದಿದ್ದರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ವಿಗ್ರಹಗಳ ಮಾದರಿ ವಸ್ತುಗಳನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ಸಂಗ್ರಹಿಸಿದರು.

ಮಹಾನಗರ ಹಾಗೂ ಜಿಲ್ಲೆಯಲ್ಲಿ ನಿಷೇಧಿತ ಪಿಓಪಿ ಗಣಪತಿ ವಿಗ್ರಹಗಳ ದಾಸ್ತಾನು ಇರುವ ಕುರಿತು ಜಿಲ್ಲಾಡಳಿತಕ್ಕೆ ಸಾರ್ವಜನಿಕರಿಂದ ಮಾಹಿತಿ ಲಭಿಸಿದ್ದರಿಂದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ನಿರ್ದೇಶನದಂತೆ ಉಪವಿಭಾಗಾಧಿಕಾರಿ ಅಶೋಕ ತೆಲಿ ನೇತೃತ್ವದ ಅಧಿಕಾರಿಗಳ ತಂಡವು ಇಂದು (ಆ.25) ಸಂಜೆ ಧಾರವಾಡ ನಗರದ ವಿವಿಧ ವಿಗ್ರಹ ದಾಸ್ತಾನು ಕೇಂದ್ರಗಳ ಮೇಲೆ ದಿಢೀರ ದಾಳಿ ಮಾಡಿ, ಪಿಓಪಿ ವಿಗ್ರಹ ಕುರಿತು ಪರಿಶೀಲಿಸಿತು.

 

 

1 /2

2 /2

ವಿವಿಧ ಕಡೆಗಳಲ್ಲಿನ ಗಣಪತಿ ಮೂರ್ತಿ ಮಾರಾಟ ಮಳಿಗೆಗೆ ಭೇಟಿ ನೀಡಿ ಪಿಓಪಿ ಗಣಪತಿ ವಿಗ್ರಹಗಳನ್ನು ಅಧಿಕಾರಿಗಳು ಸಿಜ್ ಮಾಡಿದರು.ನಂತರ ಉಪ ವಿಭಾಗಾಧಿಕಾರಿ ಅಶೋಕ ತೆಲಿ ಮಾತನಾಡಿ, 2016ರ ಕಾಯಿದೆ ಪ್ರಕಾರ ಪಿಒಪಿ ಗಣಪತಿ ಬ್ಯಾನ್ ಆಗಿದೆ ಆದರೂ ಕೆಲವಡೆ ಪಿಒಪಿ ಬಂದಿವೆ ಅಂತಾ ಮಾಹಿತಿ ಇದೆ ಈಗಾಗಲೇ ಸಾಕಷ್ಟು ಜಾಗೃತಿ ಮಾಡಿದ್ದೇವೆ. ಆದರೂ ಕೆಲವೆಡೆ ವಿಗ್ರಹಗಳು ಇರುವ ಮಾಹಿತಿಗಳು ಬರುತ್ತಿವೆ. ಅಧಿಕಾರಿಗಳ ತಂಡ ಖುದ್ದು ಪರಿಶೀಲನೆ ಮಾಡುತ್ತಿದೆ. ಪೊಲೀಸ್, ಪಾಲಿಕೆ ಅಧಿಕಾರಿಗಳು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಸಹಯೋಗದಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಜನರು ಸಹ ಜಾಗೃತ ರಾಗಿ ಪಿಒಪಿ ಗಣಪತಿ ವಿಗ್ರಹ ತೆಗೆದುಕೊಳ್ಳಬಾರದು ಎಂದು ಅವರು ತಿಳಿಸಿದರು.