ಬೆಂಗಳೂರು : ಹೆದ್ದಾರಿಯಲ್ಲೇ ಭೀಕರವಾಗಿ ಕೊಲೆಯಾದ ಅರ್ಚನಾ ರೆಡ್ಡಿ (Archana Reddy murder) ಪ್ರಕರಣದಲ್ಲಿ ಇಲ್ಲಿವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ಅರ್ಚನಾ ರೆಡ್ಡಿಯ 3ನೇ ಪತಿ ನವೀನ್ ಕುಮಾರ್ ಹಾಗೂ ಪುತ್ರಿ  ಕೂಡಾ ಕಂಬಿ ಹಿಂದೆ ಇದ್ದಾರೆ. ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಅರ್ಚನಾ ರೆಡ್ಡಿ ಕೊಲೆ ಪ್ರಕರಣದಲ್ಲಿ (Archana Reddy murder)  ಅವರ 3ನೇ ಪತಿ ನವೀನ್ ಕುಮಾರ್ ಎ-1, ನವೀನ್ ಸ್ನೇಹಿತರಾದ ಸಂತೋಷ್ ಎ-2, ಅನೂಪ್ ಎ-3, ಆನಂದ್ ಎ-4 ಆಗಿದ್ದು, ಅರ್ಚನಾ ರೆಡ್ಡಿ ಪುತ್ರಿ ಯುವಿಕಾ ರೆಡ್ಡಿ (Yuvika Reddy) ಎ-5 ಆಗಿದ್ದಾರೆ. ಅಲ್ಲದೆ ನವೀನ್ ಸ್ನೇಹಿತರಾದ ನರೇಂದ್ರ ಎ-6 ಮತ್ತು ದೀಪು ಎ-7 ಆಗಿದ್ದಾರೆ.


ಇದನ್ನೂ ಓದಿ : Fire in car: ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ನ್ಯಾನೋ ಕಾರು


ಘಟನೆ ಹಿನ್ನೆಲೆ ಏನು ? 
ಜಿಮ್ ಟ್ರೇನರ್ ಆಗಿದ್ದ ನವೀನ್ ಕುಮಾರ್ ಕೊಲೆಯಾದ ಅರ್ಚನಾಳ 3ನೇ ಪತಿಯಾಗಿದ್ದ. ಅಷ್ಟು ಮಾತ್ರವಲ್ಲದೆ, ಅರ್ಚನಾಳ ಮಗಳೊಂದಿಗೆ ಸಂಬಂಧ ಬೆಳೆಸಿ ಜೊತೆಯಾಗಿ ವಾಸವಾಸವಿದ್ದ. ಡಿಸೆಂಬರ್ 27ರ ಸೋಮವಾರ ಜಿಗಣಿ ಪುರಸಭೆ ಚುನಾವಣೆಯ ಮತದಾನ ಮುಗಿಸಿ, ಹಿಂದಿರುಗುತ್ತಿದ್ದ ವೇಳೆ, ಅರ್ಚನಾ ರೆಡ್ಡಿಯನ್ನು ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್​ ಬಳಿ ಅಡ್ಡಗಟ್ಟಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ನವೀನ್ ಕುಮಾರ್ ಮತ್ತು ಆತನ ಸಹಚರರೇ ಅರ್ಚನಾ ರೆಡ್ಡಿ ಹತ್ಯೆ (Archana Reddy murder)ಮಾಡಿದ್ದಾರೆ ಎಂದು ಕೂಡಾ ಆರೋಪಿಸಲಾಗಿತ್ತು.


ಒಟ್ಟಿಗೆ ವಾಸವಿದ್ದರು..!
ಅರ್ಚನಾ ಕೊಲೆ ಪ್ರಕರಣ ಜಾಡು ಹಿಡಿದ ಪೊಲೀಸರಿಗೆ ಸಿಕ್ಕಿದ್ದು ಆಘಾತಕಾರಿ ಮಾಹಿತಿ. ಕೊಲೆ ಪ್ರಕರಣದಲ್ಲಿ ಅರ್ಚನಾ ರೆಡ್ಡಿ ಮಗಳ ಪಾತ್ರವೂ ಇತ್ತಾ..? ಎಂಬ ಅನುಮಾನ ಪೊಲೀಸರಿಗೆ (Police) ಮೂಡಿತ್ತು. ಇದೀಗ ಅರ್ಚನಾ ರೆಡ್ಡಿ ಕೊಲೆ ಕೇಸ್ ನಲ್ಲಿ ಪುತ್ರಿ ಯುವಿಕಾ ರೆಡ್ಡಿ ಎ-5 ಆಗಿದ್ದಾಳೆ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಅರ್ಚನಾ ರೆಡ್ಡಿ, ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಜೀವನಾಂಶವಾಗಿ ಪಡೆದುಕೊಂಡಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ  ಸಿದ್ದಿಕ್ ಎಂಬಾತನ ಜತೆ ಸಂಬಂಧ ಬೆಳೆಸಿದ್ದರು. ಆದರೆ, ಇಬ್ಬರ ನಡುವೆ ಗಲಾಟೆ ನಡೆದು, ಪ್ರಕರಣ ಎಚ್ಎಸ್ಆರ್​ ಪೊಲೀಸ್​ ಠಾಣೆ ಮೇಟ್ಟಿಲೇರಿತ್ತು. ಆ ಸಂದರ್ಭದಲ್ಲಿ ಅರ್ಚನಾಗೆ ನವೀನ್ ಪರಿಚಯವಾಗಿತ್ತು. ಪರಿಚಯ ನಂತರ  ಸಂಬಂಧಕ್ಕೆ ತಿರುಗಿ ಅರ್ಚನಾ ಮತ್ತು ನವೀನ್​ ಲಿವಿಂಗ್ ಟುಗೇದರ್​​ನಲ್ಲಿ ಇದ್ದರು. ಕೆಲ ಸಮಯದ ನಂತರ ಮದುವೆ ಕೂಡ ಆಗಿದ್ದರು.


ಇದನ್ನೂ ಓದಿ : e-RUPI: ನಗದು ರಹಿತ ವಿದ್ಯಾರ್ಥಿವೇತನಕ್ಕಾಗಿ 'ಇ-ರೂಪಿ' ಜಾರಿಗೆ ತರಲು ಕರ್ನಾಟಕ ಸರ್ಕಾರ ಚಿಂತನೆ


ಆದರೆ, ದಿನಗಳು ಕಳೆದಂತೆ ನವೀನ್ ಹಾಗೂ ಅರ್ಚನಾ ರೆಡ್ಡಿ ನಡುವೆ ಕೂಡಾ ಕಿತ್ತಾಟ ಶುರುವಾಗಿತ್ತು. ಇದಾದ ಬಳಿಕ  ನವೀನ್ ಅರ್ಚನಾಳ ಮಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಅರ್ಚನಾ ಮಗಳ ಜೊತೆಗೇ ವಾಸವಿದ್ದ ಎಂದು ಹೇಳಲಾಗುತ್ತದೆ. ಇದರಿಂದ ಕೋಪಗೊಂಡ ಅರ್ಚನಾ ರೆಡ್ಡಿ (Archana Reddy), ಮಗಳನ್ನು ತನ್ನ ಬಳಿ ಕರೆಸಿಕೊಳ್ಳಲು ಯತ್ನಿಸಿದ್ದರು.  ಈ ಕಾರಣಕ್ಕಾಗಿ ನವೀನ್ಫ್ ಅರ್ಚನಾ ಮೇಲೆ ಸಿಟ್ಟುಗೊಂಡಿದ್ದ. ಜೊತೆಗೆ ಅರ್ಚನಾ ಹೆಸರಲ್ಲಿದ್ದ 40 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ ಮೇಲೂ ಕಣ್ಣುಹಾಕಿದ್ದ ನವೀನ್ ತನ್ನ ಸಹಚರರ ಜೊತೆ ಸೇರಿ ಅರ್ಚನಾ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.