ಬೆಂಗಳೂರು: ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಬೆಳ್ಳಂದೂರಿನ ಅರ್ಚನಾ ರೆಡ್ಡಿ ಕೊಲೆ ಕೇಸ್(Archana Reddy Murder Case)ಗೆ ಕ್ಷಣಕ್ಕೊಂದು ತಿರುವು ಸಿಗುತ್ತಿದೆ. ಈ ಮೊದಲು ಕೊಲೆ ಆರೋಪಿ ನವೀನ್ ಅರ್ಚನಾಳಿಗೆ 2ನೇ ಸಂಬಂಧ ಎನ್ನಲಾಗಿತ್ತು, ಆದರೆ ನವೀನ್ ಅರ್ಚನಾಳಿಗೆ 2ನೇ ಸಂಬಂಧ ಅಲ್ಲ 3ನೇ ಸಂಬಂಧ ಎಂಬ ಮಾಹಿತಿ ಹೊರಬಿದ್ದಿದೆ. ಜೊತೆಗೆ ಅರ್ಚನಾ ರೆಡ್ಡಿ ಮಗಳ ಹೆಸರು ಕೂಡ ಕೇಸ್ ನಲ್ಲಿ ತಳುಕು ಹಾಕಿಕೊಂಡಿದೆ.
ಮಗಳನ್ನೇ ಪಟಾಯಿಸಿದ್ದ ಕಿರಾತಕ..!
ಅಂದಹಾಗೆ ಈ ಕೇಸ್ ಬಗೆದಷ್ಟೂ ಆಳಕ್ಕೆ ಹೋಗುತ್ತಿದ್ದು, ಜಿಮ್ ಟ್ರೇನರ್ ಆಗಿದ್ದ ನವೀನ್ ಅರ್ಚನಾ(Archana Reddy)ಳ ಮಗಳನ್ನೇ ಪಟಾಯಿಸಿ ಒಟ್ಟಿಗೆ ವಾಸವಿದ್ದನಂತೆ. ಡಿಸೆಂಬರ್ 27ರ ಸೋಮವಾರ ಜಿಗಣಿ ಪುರಸಭೆ ಚುನಾವಣೆಯ ಮತದಾನ ಮುಗಿಸಿ ತನ್ನ ಐಷಾರಾಮಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ಅರ್ಚನಾ ರೆಡ್ಡಿಯನ್ನು ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ಅಡ್ಡಗಟ್ಟಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ನವೀನ್ ಕುಮಾರ್ ಮತ್ತು ಆತನ ಸಹಚರರೇ ಅರ್ಚನಾ ರೆಡ್ಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: Basavaraj Bommai: ಡಿಸೆಂಬರ್ 31ರಂದು ‘ಕರ್ನಾಟಕ ಬಂದ್’ ಕೈಬಿಡಲು ಸಿಎಂ ಬೊಮ್ಮಾಯಿ ಮನವಿ
ಒಟ್ಟಿಗೆ ವಾಸವಿದ್ದರು..!
ತನಿಖೆ ಆರಂಭಿಸಿದ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿದ್ದು, ಅರ್ಚನಾ ರೆಡ್ಡಿ ಕೊಲೆ ಕೇಸ್(Archana Reddy Murder Case)ನಲ್ಲಿ ಆಕೆಯ ಮಗಳ ಪಾತ್ರವೂ ಇತ್ತಾ..? ಅನ್ನೋ ಅನುಮಾನ ಮೂಡಿದೆ. ಮೊದಲನೇ ಗಂಡನಿಂದ ವಿಚ್ಛೇದನ ಪಡೆದಿದ್ದ ಅರ್ಚನಾ ರೆಡ್ಡಿ, ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಜೀವನಾಂಶವಾಗಿ ಪಡೆದುಕೊಂಡಿದ್ದಳು. ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಸಿದ್ದಿಕ್ ಎಂಬಾತನ ಜೊತೆ ಅಕ್ರಮ ಸಂಬಂಧ ಬೆಳೆದು ಇವರಿಬ್ಬರ ನಡುವೆ ಗಲಾಟೆ ಆಗಿ ಎಚ್ಎಸ್ಆರ್ ಪೊಲೀಸ್ ಠಾಣೆ ಮೇಟ್ಟಿಲೇರಿದ್ದರಂತೆ. ಆಗ ಪರಿಚಯ ಆಗಿದ್ದೇ ನವೀನ್. ಈ ಪರಿಚಯ ಅಕ್ರಮ ಸಂಬಂಧಕ್ಕೆ ತಿರುಗಿ ಅರ್ಚನಾ ಮತ್ತು ನವೀನ್ ಲಿವಿಂಗ್ ಟುಗೇದರ್ನಲ್ಲಿ ಇದ್ದರಂತೆ.
ಆದರೆ ಮುಂದೆ ನವೀನ್ ಹಾಗೂ ಅರ್ಚನಾ ರೆಡ್ಡಿ(Archana Reddy) ನಡುವೆ ಕಿತ್ತಾಟ ಶುರುವಾಗಿತ್ತು. ಇದರಿಂದ ರೊಚ್ಚಿಗೆದ್ದು ನವೀನ್ ಅರ್ಚನಾಳ ಮಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಬಳಿಕ ಅರ್ಚನಾ ಮಗಳ ಜೊತೆಗೇ ವಾಸವಿದ್ದನಂತೆ. ಈ ಬಗ್ಗೆ ಅರ್ಚನಾ ರೆಡ್ಡಿ ಕೋಪಗೊಂಡು ಮಗಳನ್ನು ತನ್ನ ಬಳಿ ಕರೆಸಿಕೊಳ್ಳಲು ಯತ್ನಿಸಿದ್ದು ನವೀನ್ ಪಿತ್ತ ನೆತ್ತಿಗೇರಿಸಿತ್ತು. ಇದರ ಜೊತೆಗೆ ಅರ್ಚನಾ ಹೆಸರಲ್ಲಿದ್ದ 40 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ ಮೇಲೂ ಕಣ್ಣುಹಾಕಿ ನವೀನ್ ತನ್ನ ಸಹಚರರ ಜೊತೆ ಸೇರಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು(Electronic City Police Station) ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಪಕ್ಷ ಬಯಸಿದರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ: ಸಚಿವ ಕೆ.ಎಸ್.ಈಶ್ವರಪ್ಪ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.