ಗ್ಯಾರಂಟಿ ಹಣೆಬರಹ ನೋಡೋಕೆ ನಾವೇ ಇದ್ದೇವಲ್ಲಾ?- ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ
ರೈತರ ಆಸ್ತಿಗಳು, ದೇವಾಲಯಗಳು ವಕ್ಫ್ ಆಸ್ತಿ ಎಂದು ಬರುತ್ತಿರುವ ಬಗ್ಗೆ ಸರಕಾರವೇ ಕಾರಣ. ಈ ವಿವಾದಕ್ಕೆ ಸರಕಾರವೇ ತೆರೆ ಎಳೆಯಬೇಕು. ಸ್ವತಃ ಮುಖ್ಯಮಂತ್ರಿ ಅವರೇ ಸೂಚನೆ ಕೊಟ್ಟ ಕಾರಣ ಇಷ್ಟೆಲ್ಲಾ ಮಾಡುತ್ತಿದ್ದೇವೆ ಎಂದು ವಕ್ಫ್ ಸಚಿವರೇ ಹೇಳಿದ್ದಾರೆ
ಬೆಂಗಳೂರು: ಕರ್ನಾಟಕದ ಗ್ಯಾರಂಟಿಗಳ ಪ್ರಧಾನಿ ಮೋದಿ ಅವರನ್ನು ರಾಜ್ಯಕ್ಕೆ ಬರುವಂತೆ ಕರೆದಿರುವ ಸಿಎಂ ಸಿದ್ದರಾಮಯ್ಯ ಅವರು; ಗ್ಯಾರಂಟಿ ಸ್ಕೀಮ್ ಪರಿಶೀಲನೆ ಮಾಡಲು ಪ್ರಧಾನಿಗೆ ಫ್ಲೈಟ್ ಮಾಡಿಕೊಡುತ್ತೇವೆ ಎಂದಿರುವ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿಗಳನ್ನು ಕರೆದು ಇವರು ಏನು ಮಾಡುತ್ತಾರೆ? ಇಲ್ಲಿ ಏನೇನು ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಧಾನಿಗಳು ಇರಲಿ, ಇಲ್ಲಿನ ದುಸ್ಥಿತಿಯನ್ನು ನಾವೇ ನೋಡುತ್ತಿದ್ದೇವೆ. ಸಿಎಂ ಹೇಳಿದಂತೆ ಬಿಜೆಪಿಯವರ ಮೇಲೆ ಕೇಸ್ ಹಾಕಲಿ ನೋಡೋಣ. ಅದಕ್ಕೂ ಮೊದಲು ಅವರು ರಾಜ್ಯದ ಸ್ಥಿತಿಯನ್ನು ಸರಿ ಮಾಡಲಿ ಎಂದು ಟಾಂಗ್ ಕೊಟ್ಟರು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ
ವಕ್ಫ್ ವಿವಾದಕ್ಕೆ ಸರ್ಕಾರವೇ ತೆರೆ ಎಳೆಯಲಿ
ರೈತರ ಆಸ್ತಿಗಳು, ದೇವಾಲಯಗಳು ವಕ್ಫ್ ಆಸ್ತಿ ಎಂದು ಬರುತ್ತಿರುವ ಬಗ್ಗೆ ಸರಕಾರವೇ ಕಾರಣ. ಈ ವಿವಾದಕ್ಕೆ ಸರಕಾರವೇ ತೆರೆ ಎಳೆಯಬೇಕು. ಸ್ವತಃ ಮುಖ್ಯಮಂತ್ರಿ ಅವರೇ ಸೂಚನೆ ಕೊಟ್ಟ ಕಾರಣ ಇಷ್ಟೆಲ್ಲಾ ಮಾಡುತ್ತಿದ್ದೇವೆ ಎಂದು ವಕ್ಫ್ ಸಚಿವರೇ ಹೇಳಿದ್ದಾರೆ.ಅವರ ಹೇಳಿಕೆಯ ವಿಡಿಯೋ ಎಲ್ಲಾ ಕಡೆ ಹರಿದಾಡುತ್ತಿದೆ. ಹೀಗಿದ್ದ ಮೇಲೆ ಸ್ವತಃ ಮುಖ್ಯಮಂತ್ರಿ ಅವರೇ ಈ ಗೊಂದಲವನ್ನು ಸರಿ ಮಾಡಬೇಕು ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.
ಇದನ್ನೂ ಓದಿ: ಮಠಗಳಿಗೆ ಜಾಗವಿಲ್ಲ.. ಮೂಲಭೂತ ಸೌಕರ್ಯವಿಲ್ಲ-ಸೋಮನಾಥ ಸ್ವಾಮೀಜಿ ಹೇಳಿಕೆ
ಸರಕಾರದಿಂದಲೇ ಇಷ್ಟೆಲ್ಲಾ ಗೊಂದಲ ಸೃಷ್ಟಿ ಆಗಿದೆ. ರೈತರ ಜಮೀನನ್ನು ಮಾತ್ರ ವಕ್ಫ್ ಆಸ್ತಿ ಮಾಡಲಾಗುತ್ತಿದೆ. ಜನರಲ್ಲಿ ಆತಂಕ ಎದುರಾಗಿದೆ. ಉಳ್ಳವರು ವಕ್ಫ್ ಆಸ್ತಿ ವಶಕ್ಕೆ ಪಡೆದಿರುವ ಬಗ್ಗೆ ಏನೂ ಕ್ರಮ ಆಗಿಲ್ಲ. ಹೀಗಾಗಿ ಸರಕಾರವೇ ಇದಕ್ಕೆ ತೆರೆ ಎಳೆಯಬೇಕು. ಅಶಾಂತಿ ಉಂಟು ಮಾಡಲು ಸರಕಾರ ಮಾಡಿರುವ ಮಹಾ ಅಪರಾಧವೇ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು, ಶಾಸಕರಾದ ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ವಿಧಾನ ಪರಿಷತ್ ಮಾಜಿ ಸದಸ್ಯ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಮುಖಂಡರಾದ ಸಿ.ಎಂ.ಆರ್.ಶ್ರೀನಾಥ್, ವಕ್ಕಲೇರಿ ರಾಮು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್