ಬೆಂಗಳೂರು : ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರದ ಎನ್‌ಸಿಪಿ ಪಕ್ಷದ ಅಧ್ಯಕ್ಷ ಶರದ್ ಪವಾರ್ ಉದ್ದಟತನದ ಹೇಳಿಕೆಯನ್ನು ನಿಲ್ಲಿಸಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹ ಮಾಡುವ ಜೊತೆಗೆ, ಶರದ್ ಪವಾರ್ ಹಾಗೂ ಮಾಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದರೆ ಸರ್ಕಾರ ಬಂಧಿಸಿ ಜೈಲಿಗಟ್ಟಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.


COMMERCIAL BREAK
SCROLL TO CONTINUE READING

ಪವಾರ್ ರಾಜಕೀಯ ಲಾಭಕ್ಕೆ ಗಡಿಯಲ್ಲಿ ಚಿಂತಾಜನಕ ಪರಿಸ್ಥಿತಿ ಇದೆ. ಕೂಡಲೇ ನಿಲುವು ತೆಗೆದುಕೊಳ್ಳುವ ಸಮಯ ಬಂದಿದೆ. ಹಾಗೂ ಕರ್ನಾಟಕದ ಸಿಎಂ ಪರಿಸ್ಥಿತಿಯನ್ನು ಬೇರೆ ದಿಕ್ಕಿನಡೆಗೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದಾರೆ, ಎಂದು ಕರ್ನಾಟಕ-ಮಹಾರಾಷ್ಟ್ರ ನಡುವೆ ಗಡಿ ವಿವಾದ ಹೆಚ್ಚುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್  ನಾಲಿಗೆ ಹರಿಬಿಟ್ಟಿದ್ದರು.


ಇದನ್ನೂ ಓದಿ : Karnataka Congress : ಕಾಂಗ್ರೆಸ್‌ಗೆ ತಲೆನೋವು ತಂದ ಅರ್ಜಿಗೆ ₹5000 ಆಫರ್! ಡಿಕೆ ಆಕಾಂಕ್ಷಿಗಳ ವಿರುದ್ಧ ಗರಂ


ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚೆತ್ತುಕೊಳ್ಳಬೇಕು. ಇಲ್ಲಿ ಪಕ್ಷದ ಪ್ರಶ್ನೆ ಇಲ್ಲ. ಅಲ್ಲೂ, ಇಲ್ಲೂ ಎರಡೂ ಕಡೆ ಬಿಜೆಪಿ ಪಕ್ಷ ಇದೆ. ಬೆಳಗಾವಿ ನಮ್ಮಲ್ಲೇ ಉಳಿಯಬೇಕು. ಬೆಳಗಾವಿಯ ಕನ್ನಡಿಗರಿಗೆ ಶಕ್ತಿ ಕೊಡಬೇಕು. ಬೆಳಗಾವಿಯ ಒಂದು ಅಂಗುಲ ನೆಲವನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು. ಶಿವಸೇನೆ ಸಚಿವರು ರಾಜ್ಯಕ್ಕೆ ಬಂದ ತಕ್ಷಣ ಅವರನ್ನು ಬಂಧಿಸಿ ಜೈಲಿನಲ್ಲಿ ಇಡಬೇಕು ಎಂದು ಆಗ್ರಹಿಸಿದರು.ಅಲ್ಲದೆ ಎಂಇಎಸ್ ಹಾಗೂ ಶಿವ ಸೇನೆಯನ್ನು ವಜಾಗೊಳಿಸಬೇಕು. ನಾಡ ದ್ರೋಹಿ ಪುಂಡರನ್ನು ನಾಡ ವಿರೋಧಿ ಘೋಷಣೆ ಕೂಗಿದವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.


ಇದನ್ನೂ ಓದಿ : BBMP Election : ಬಿಜೆಪಿಗೆ ಸೋಲಿನ ಭಯವೇ ಬಿಬಿಎಂಪಿ ಚುನಾವಣೆ ಮುಂದೂಡುಕೆಗೆ ಕಾರಣ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.