ಬೆಂಗಳೂರು: ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿ.ಎಂ.ಇಬ್ರಾಹಿಂ(CM Ibrahim) ಇದೀಗ ಸ್ಥಾನ ಕೈತಪ್ಪಿದ ಹಿನ್ನೆಲೆ ಬಂಡಾಯ ಸಾರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ನನಗೂ ಸಂಬಂಧ ಮುಗಿದಿದೆ ಅಂತಾ ಬಹಿರಂಗವಾಗಿಯೇ ಅವರು ಆಕ್ರೋಶ ಹೊರಹಾಕಿದ್ದರು. ಆಪ್ತ ಸ್ನೇಹಿತ ಇಬ್ರಾಹಿಂ ಬಂಡಾಯದಿಂದ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ದೊಡ್ಡ ತಲೆನೋವು ತಂದಿದೆ. ಹೀಗಾಗಿ ಇಬ್ರಾಹಿಂರನ್ನು ಸಮಾಧಾನಪಡಿಸಲು ಸಿದ್ದರಾಮಯ್ಯ(Siddaramaiah) ಪ್ರಯತ್ನಿಸುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ.   


COMMERCIAL BREAK
SCROLL TO CONTINUE READING

ಅಲ್ಪಸಂಖ್ಯಾತರ ಮತಗಳನ್ನು ಕಳೆದುಕೊಳ್ಳುವ ಭೀತಿಯಿಂದ ವಿಧಾನಸಭೆ ವಿಪಕ್ಷ ಉಪನಾಯಕನಾಗಿ ಯು.ಟಿ.ಖಾದರ್(UT Khader) ಅವರನ್ನು ಕಾಂಗ್ರೆಸ್ ವರಿಷ್ಠರು ಆಯ್ಕೆ ಮಾಡಿದ್ದಾರೆ. ಪರಿಷತ್ ವಿಪಕ್ಷ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಬಿಡಲು ಸಿ.ಎಂ.ಇಬ್ರಾಹಿಂ ನಿರ್ಧರಿಸಿದ್ದಾರೆ. ದಕ್ಷಿಣ ಕನ್ನಡ, ಕರಾವಳಿ ಕರ್ನಾಟಕ ಹಾಗೂ ಕರ್ನಾಟಕ-ಕೇರಳ ಗಡಿ ಅಲ್ಪಸಂಖ್ಯಾತರ ಮತಗಳ ಬೇಟೆಗೆ ಕಾಂಗ್ರೆಸ್(Congress HighCommand) ರಣತಂತ್ರ ರೂಪಿಸುತ್ತಿದೆ. ಖಾದರ್ ಆಯ್ಕೆ ಹಿನ್ನಲೆ ಇಬ್ರಾಹಿಂಗೆ ಕಠಿಣ ಸಂದೇಶ ನೀಡಿತಾ ಕಾಂಗ್ರೆಸ್? ಅನ್ನೋ ಪ್ರಶ್ನೆ ಉದ್ಭವಿಸಿದೆ. ಅಲ್ಪಸಂಖ್ಯಾತ ನಾಯಕರನ್ನು ಪಕ್ಷವು ಕಡೆಗಣನೆ ಮಾಡಿಲ್ಲ, ಹೊಸ ನಾಯಕರಿಗೆ ಕಾಂಗ್ರೆಸ್ ಮಣೆ ಹಾಕಿದೆ ಎನ್ನಲಾಗುತ್ತಿದೆ. ಇದರಿಂದ ಇಬ್ರಾಹಿಂ ಭವಿಷ್ಯವು ದ್ವಂದ್ವಕ್ಕೆ ಸಿಲುಕಿದಂತಾಗಿದೆ.


ಇದನ್ನೂ ಓದಿ: ವಿಧಾನಸಭೆಯ ವಿಪಕ್ಷ ಉಪನಾಯಕನಾಗಿ ಯು.ಟಿ ಖಾದರ್ ನೇಮಕ


ಕಾಂಗ್ರೆಸ್ ಗೆ ಸಿ.ಎಂ.ಇಬ್ರಾಹಿಂ ಅವಶ್ಯಕತೆ ಇಲ್ಲ!?


ಪರಿಷತ್ ವಿಪಕ್ಷ ಸ್ಥಾನ ಕೈತಪ್ಪಿದ ಹಿನ್ನೆಲೆ ಕಾಂಗ್ರೆಸ್ ನಾಯಕರ ವಿರುದ್ಧವೇ ಬಹಿರಂಗವಾಗಿ ಸಿ.ಎಂ.ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದರು. ಎಐಸಿಸಿ ನಾಯಕರ(Congress HighCommand)ವಿರುದ್ಧ ಇಬ್ರಾಹಿಂ ವ್ಯಂಗ್ಯದ ಮಾತುಗಳನ್ನು ಆಡಿದ್ದರಿಂದಲೇ ಯು.ಟಿ.ಖಾದರ್ ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಬೇಕಾದರೆ ಪಕ್ಷ ಬಿಡಿ ಎಂಬ ಸಂದೇಶವನ್ನು ಕಾಂಗ್ರೆಸ್ ಇಬ್ರಾಹಿಂಗೆ ನೀಡಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.  


ಎಐಸಿಸಿ ನಾಯಕರ ವಿರುದ್ಧ ವ್ಯಂಗ್ಯ ಮಾಡಿರುವ ಇಬ್ರಾಹಿಂ(CM Ibrahim)ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಹೀಗಾಗಿ ಹೆಸರಿಗಷ್ಟೇ ಅವರನ್ನು ಸಮಾಧಾನಪಡಿಸಲು ಇಸ್ಲಾಂ ಧರ್ಮ ಮುಖಂಡರು ಮನವೊಲೈಕೆ ಯತ್ನ ಮಾಡುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ಜೊತೆ ಇದ್ದರೆ ಮಾತ್ರ ನಮ್ಮ ಬೆಂಬಲ ನಿಮಗೆ ಇರುತ್ತದೆ, ಒಂದು ವೇಳೆ ಜೆಡಿಎಸ್ ಗೆ ಹೋದರೆ ಇರುವುದಿಲ್ಲವೆಂಬ ಸಂದೇಶವನ್ನು ಮೌಲ್ವಿಗಳು ನೀಡುತ್ತಾರಾ? ಯುಟಿ ಖಾದರ್ ಗೆ ಸ್ಥಾನ ದೊರಕಿದ ಹಿನ್ನಲೆ ಇಬ್ರಾಹಿಂರನ್ನು ಕಡೆಗಣಿಸುತ್ತಾತಾ ಮೌಲ್ವಿಗಳು? ಅನ್ನೋ ಪ್ರಶ್ನೆ ಎದ್ದಿದೆ. ಇದರಿಂದ ಖಾದರ್ ನಿಂದ ಅಲ್ಪಸಂಖ್ಯಾತ ಮತಗಳ ನಿರೀಕ್ಷೆ ಮಾಡಬಹುದು, ಆದರೆ ಇಬ್ರಾಹಿಂರಿಂದ ಮತ ನಿರೀಕ್ಷೆ ದೂರದ ಮಾತು ಎಂಬ ಅಭಿಪ್ರಾಯ ಹೈಕಮಾಂಡಿಗೆ ರವಾನಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ನೀಟ್: ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.