"ಸಿದ್ದರಾಮಯ್ಯ ಅವರೆ, ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ": ಸಿಎಂ ಬೊಮ್ಮಾಯಿ

CM Basavaraj Bommai: ಜನಹಿತಕ್ಕಾಗಿ ನಾವು ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಸಿಎಂ ಬೊಮ್ಮಾಯಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 

Edited by - Zee Kannada News Desk | Last Updated : Jan 30, 2022, 05:45 PM IST
  • ಸಿದ್ದರಾಮಯ್ಯ ಅವರೆ, ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ
  • ಜನಹಿತಕ್ಕಾಗಿ ನಾವು ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ
  • ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ
  • ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ
"ಸಿದ್ದರಾಮಯ್ಯ ಅವರೆ, ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ": ಸಿಎಂ ಬೊಮ್ಮಾಯಿ   title=
ಸಿಎಂ ಬೊಮ್ಮಾಯಿ

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಅವರೆ, ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಜನಹಿತಕ್ಕಾಗಿ ನಾವು ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ. ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಸಿಎಂ ಬೊಮ್ಮಾಯಿ (CM Basavaraj Bommai) ಅವರು ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. 

ಸಿದ್ದರಾಮಯ್ಯ ವಿರುದ್ಧ ಸಿಎಂ  ವಾಗ್ದಾಳಿ:
 
2018 ರಲ್ಲಿ  ಯಡಿಯೂರಪ್ಪ ಅವರು  ಬಿಜೆಪಿ (BJP) ಪ್ರಣಾಳಿಕೆಯಲ್ಲಿ ಹೇಳಲಾಗಿದ್ದ ಒಂದನ್ನೂ ಈಡೇರಿಸಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವರಿಂದ ಹೆಚ್ಚಿನದೇನನ್ನೂ ನಿರೀಕ್ಷೆ ಮಾಡಲಾಗುವುದಿಲ್ಲ. ಜನ ಹಿತ ಏನಾಗಿದೆ ಎನ್ನುವುದನ್ನು ನೋಡಬೇಕು ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ:  R Ashok : 'ರಾಜ್ಯದಲ್ಲಿ ಜನವರಿ 31ರಿಂದ ನೈಟ್ ಕರ್ಫ್ಯು ತೆರವು'

ಕ್ರಾರ್ಯಕ್ರಮದ ಘೋಷಣೆ ಮಾತ್ರವಲ್ಲ ಅನುಷ್ಠಾನವೂ ಆಗಬೇಕು. ಯಾವ ರೀತಿ ಅನುಷ್ಠಾನ ಮಾಡಿದರೆ ಯಾರಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ರೈತರು ದುಡಿಯುವ ವರ್ಗ, ಸಮುದಾಯಗಳಿಗೆ ಒಳ್ಳೆಯದು ಮಾಡಬೇಕೆನ್ನುವ ಅರಿವಿದೆ ಎಂದರು.

ಮೈಸೂರಿನಲ್ಲಿ ಸಂಸದರು ಹಾಗೂ ಶಾಸಕರ ನಡುವೆ ಜಗಳ ಇಲ್ಲ. ಅದು ಅಭಿವೃದ್ಧಿ ಆಗಬೇಕೆನ್ನುವ ವಿಭಿನ್ನ ದೃಷ್ಟಿಕೋನಗಳು. ಶಾಸಕರು ಮತ್ತು ಸಂಸದರನ್ನು ಕರೆದು ಮಾತನಾಡುತ್ತೇವೆ ಎಂದು ಸಿಎಂ ಹೇಳಿದರು.

ಕಾಂಗ್ರೆಸ್ ಜನಹಿತಕ್ಕಾಗಿ ಎಂದೂ ಕೆಲಸ ಮಾಡಿಲ್ಲ:

ಕಾಂಗ್ರೆಸ್ ನಲ್ಲಿನ (Congress) ಒಳಜಗಳ ಅವರ ಆಂತರಿಕ ವಿಚಾರವಾದರೂ, ಸಾರ್ವತ್ರಿಕವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಇದೊಂದೇ ಪ್ರಸಂಗವಲ್ಲ, ಹಲವಾರು ಆಗಿವೆ. ಈಗ ಅದು ಬಹಿರಂಗವಾಗಿದೆ ಎಂದರು.

ಕಾಂಗ್ರೆಸ್ ಜನಹಿತಕ್ಕಾಗಿ ಎಂದೂ ಕೆಲಸ ಮಾಡಿಲ್ಲ. ಆಡಳಿತ ಪಕ್ಷದಲ್ಲಿದ್ದಾಗಲೂ ಮಾಡಿಲ್ಲ, ವಿರೋಧ ಪಕ್ಷದಲ್ಲಿದ್ದಾಗಲೂ ಮಾಡಿಲ್ಲ. ಅಧಿಕಾರವನ್ನು ಹೇಗೆ ಹಿಡಿಯಬೇಕು, ಯಾವ ರೀತಿ ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಬೇಕು ಎನ್ನುವುದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಯಾರೇ ನಾಯಕರಾಗಲಿ, ತಮ್ಮ ನೀತಿ ನಿಲುವುಗಳು, ತಮ್ಮ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಅದು ಅವರ ಗುಣಧರ್ಮ ಎಂಡು ಜರಿದರು.

ಆದಷ್ಟು ಬೇಗ ದೆಹಲಿಯಲ್ಲಿ ಸಂಸದರ ಭೇಟಿ:

ಸಂಪುಟ ವಿಸ್ತರಣೆ (Cabinet Expansion) ಬಗ್ಗೆ ಬಹಿರಂಗವಾಗಿ ಚರ್ಚಿಸುವುದಿಲ್ಲ. ವರಿಷ್ಠರು ಕರೆದಾಗ ಹೋಗಲು ಸಿದ್ಧನಿದ್ದೇನೆ. ಬಜೆಟ್ ಇದ್ದ ಸಂದರ್ಭದಲ್ಲಿ ಎಂ.ಪಿಗಳನ್ನು ಭೇಟಿಯಾಗುವ ಸಂಪ್ರದಾಯವಿದೆ. ಆದಷ್ಟು ಬೇಗ ಸಂಸದರನ್ನು ದೆಹಲಿಯಲ್ಲಿ ಭೇಟಿಯಾಗುವುದಾಗಿ ತಿಳಿಸಿದರು.  

ಇದನ್ನೂ ಓದಿ:  ಹಸಿದವರ ಪಾಲಿನ ಅನ್ನದಾತ.. ನೂರಾರು ಜನರ ತುತ್ತಿನ ಚೀಲ ತುಂಬುವ ಮಹನೀಯನೀತ

ನಿಗಮ ಮಂಡಳಿಗಳ ನೇಮಕಾತಿಯ ಬಗ್ಗೆ ಪಕ್ಷದಲ್ಲಿ ಆಂತರಿಕವಾಗಿ ತೀರ್ಮಾನ ಮಾಡಲಾಗುತ್ತದೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News