ಚಳಿಗಾಲದ ಅಧಿವೇಶನ: ಅಡಿಕೆ ಎಲೆಚುಕ್ಕಿ ರೋಗ ಸಂಬಂಧ ಸರ್ಕಾರದ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಬೆಳೆ ಬೆಳೆಯಲು ಸಾಧ್ಯವಿಲ್ಲ. ತೆಂಗು, ಅಡಿಕೆ, ಏಲಕ್ಕಿ, ಕಾಳು ಮೆಣಸು ಬೆಳೆಯುತ್ತಿದ್ದಾರೆ. ಸಬ್ಸಿಡಿ ಕೊಡುವ ಕೆಲಸ ಮಾಡಲಾಗಿದೆ. ಪ್ರಧಾನಮಂತ್ರಿ ಕೃಷಿ ಸಂಚಾ ಯೋಜನೆ ಅಡಿ ಪರಿಶಿಷ್ಟ ಜಾತಿ ಪಂಗಡಕ್ಕೆ 90%, ಸಾಮಾನ್ಯರಿಗೆ 75% ಕೊಡಲಾಗ್ತಿದೆ. ಎಲೆ ಚುಕ್ಕಿ ರೋಗದ ಬಗ್ಗೆ ಪ್ರಶ್ನೆ ಉದ್ಭವ ಆಗಿದೆ. ಗಾಳಿಯಲ್ಲಿ ಮಹಾಮಾರಿ ಹರಡುತ್ತಿದೆ. ಸಂಶೋಧನೆ ಮಾಡಲು ಸರ್ಕಾರ ಪ್ರಯತ್ನ ಮಾಡಿದೆ ಎಂದು ಉತ್ತರಿಸಿದ್ದಾರೆ.
ಬೆಳಗಾವಿ: ಅಡಿಕೆ ಬಿಟ್ಟು ಇತರೆ ಉಪಬೆಳೆ ಬೆಳೆಯಲು ತೋಟಗಾರಿಕಾ ಇಲಾಖೆ ತೆಗೆದುಕೊಂಡಿರೋ ಕ್ರಮ ಹಾಗೂ ಎಲೆಚುಕ್ಕಿ ರೋಗದ ಬಗ್ಗೆ ಸುಧೀರ್ಘ ಚರ್ಚೆ ಇಂದಿನ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಡೆಯಿತು.
ಎಲೆ ಚುಕ್ಕಿ ರೋಗಕ್ಕೆ ಸರ್ಕಾರದ ಕ್ರಮದ ಬಗ್ಗೆ ಪ್ರಶ್ನೆ ಮಾಡಿದ ಪುತ್ತೂರು ಶಾಸಕ ಸಂಜೀವ್ ಮಠಂದೂರ್, ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದರು.
ಇದನ್ನೂ ಓದಿ: ಬಿಎಸ್‌ವೈ ಪುನರ್ ಜನ್ಮ ಆಗಿದ್ದು ನಾನು ಮಂತ್ರಿ ಆದ್ಮೇಲೆ, ನಿರಾಣಿ ನನ್ನ ಮುಂದೆ ಬಚ್ಚಾ: ಯತ್ನಾಳ್
ಸಚಿವ ಆರಗ ಜ್ಞಾನೇಂದ್ರ ಉತ್ತರ ಹೀಗಿತ್ತು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಹಾರ ಬೆಳೆ ಬೆಳೆಯಲು ಸಾಧ್ಯವಿಲ್ಲ. ತೆಂಗು, ಅಡಿಕೆ, ಏಲಕ್ಕಿ, ಕಾಳು ಮೆಣಸು ಬೆಳೆಯುತ್ತಿದ್ದಾರೆ. ಸಬ್ಸಿಡಿ ಕೊಡುವ ಕೆಲಸ ಮಾಡಲಾಗಿದೆ. ಪ್ರಧಾನಮಂತ್ರಿ ಕೃಷಿ ಸಂಚಾ ಯೋಜನೆ ಅಡಿ ಪರಿಶಿಷ್ಟ ಜಾತಿ ಪಂಗಡಕ್ಕೆ 90%, ಸಾಮಾನ್ಯರಿಗೆ 75% ಕೊಡಲಾಗ್ತಿದೆ. ಎಲೆ ಚುಕ್ಕಿ ರೋಗದ ಬಗ್ಗೆ ಪ್ರಶ್ನೆ ಉದ್ಭವ ಆಗಿದೆ. ಗಾಳಿಯಲ್ಲಿ ಮಹಾಮಾರಿ ಹರಡುತ್ತಿದೆ. ಸಂಶೋಧನೆ ಮಾಡಲು ಸರ್ಕಾರ ಪ್ರಯತ್ನ ಮಾಡಿದೆ ಎಂದು ಉತ್ತರಿಸಿದ್ದಾರೆ.
ಶಾಸಕ ಎಂ.ಪಿ ಕುಮಾರಸ್ವಾಮಿ ಮಧ್ಯಪ್ರವೇಶ ಮಾಡಿ ಹಲವು ವರ್ಷಗಳಿಂದ ಎಲೆಚುಕ್ಕೆ ರೋಗ ಇದೆ. ಒಂದು ಬಾರಿ ರೋಗ ಬಂದ್ರೆ ಇಡೀ ಮರವೇ ಹೋಗ್ತಿದೆ. ಒಂದು ತಲೆಮಾರು ಬೆಳೆಯೇ ಹೋಗ್ತಿದೆ. ಔಷಧೀಯೇ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಆರಗ ಜ್ಞಾನೇಂದ್ರ ಉತ್ತರ:
ಎಲೆ ಚುಕ್ಕೆ ರೋಗ ರೈತರನ್ನ ಹೈರಾಣ ಮಾಡಿದೆ. 1962ರಿಂದ ಈ ರೋಗ ಇದೆ. ವಿಜ್ಞಾನಿಗಳ ಪ್ರಕಾರ ಮಳೆ ಮತ್ತು ಮೋಡದಿಂದ ಬಂದಿದೆ. ಕಾಫಿ ಬೆಳೆಯಿಂದ ಮರಕ್ಕೆ ತಗುಲಿದೆ. ಒಂದು ಬಾರಿ ಬಂದ್ರೆ ಅಗಾಧ ಬೆಳೆ ನಷ್ಟವಾಗ್ತಿದೆ. ನಾನು ಅಡಿಕೆ ಬೆಳೆಗಾರರ ಟಾಸ್ಕ್ ಫೋರ್ಸ್ ಅಧ್ಯಕ್ಷ, ಕೇಂದ್ರಕ್ಕೆ ಭೇಟಿ ನೀಡಿ ಮನವಿ ಮಾಡಿದ್ದೆವು. ತಾತ್ಕಾಲಿಕವಾಗಿ ಔಷಧಿಯನ್ನ ತೋಟಗಾರಿಕಾ ಇಲಾಖೆಯಿಂದ ನೀಡಲಾಗ್ತಿದೆ. ದೋಟಿ ಬಳಸಿ 20-30 ಅಡಿ ಎತ್ತರಕ್ಕೆ ಔಷಧಿ ಬಳಸಲಾಗ್ತಿದೆ. 21 ಕೋಟಿ ಇದಕ್ಕಾಗಿ ಒದಗಿಸಿರೋದಾಗಿ ಸಭೆಗೆ ಮಾಹಿತಿ ನೀಡಿದರು.
ಕಾಂಗ್ರೆಸ್ ಪಕ್ಷದ ಉಪನಾಯಕ ಯು.ಟಿ ಖಾದರ್ ಪ್ರಶ್ನೆ ಮಾಡಿ, ಅಡಿಕೆ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಬೆಳೆ. ತಡ ಮಾಡದಂತೆ ಕೊಳೆ ರೋಗ ಬಂದಾಗ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಸಿ.ಟಿ ರವಿ ಉಪಪ್ರಶ್ನೆ:
ಅತಿಯಾದ ರಾಸಾಯನಿಕ ಬಳಕೆಯಿಂದ ರೋಗ ಉಲ್ಬಣ ಆಗುತ್ತದೆ ಅಂತ ಕೆಲವರ ಅಭಿಪ್ರಾಯ. ಹಲವು ವರ್ಷದಿಂದ ಇದರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಇದಕ್ಕೆ ಔಷಧಿ ಕಂಡು ಹಿಡಿಯಲು ನಮ್ಮ ವಿಜ್ಞಾನಿಗಳಿಗೆ ಆಗ್ತಿಲ್ವಾ?ತಾತ್ಕಾಲಿಕವಾಗಿ ತೇಪೆ ಹಾಕೋದು ಶಾಶ್ವತ ಪರಿಹಾರ ಆಗಲ್ಲ. ಬೇರು ಸಹಿತ ಕಿತ್ತು ಹಾಕಲು ಸರ್ಕಾರ ಮುಂದಾಗಬೇಕು. ಪರಿಹಾರ ಕೊಡೋದ್ರಿಂದ ಸಮಸ್ಯೆ ಬಗೆಹರಿಯಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ರೇವಣ್ಣ, ಬರೀ ಮೂರು ತಾಲೂಕು ಮಾತ್ರ ಅಡಿಕೆ ಬೆಳೆ ಮಾಡಲು ಸೇರಿಸಲಾಗಿದೆ. ನಮ್ಮ ತಾಲೂಕಿನಲ್ಲೂ ಅಡಿಕೆ ಬೆಳೀತಾರೆ. ನಮ್ಮ ತಾಲೂಕನ್ನೂ ನರೇಗಾಗೆ ಸೇರಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: ಮಗುವಿಗೆ ಕುಮಾರಸ್ವಾಮಿ ಎಂದು ನಾಮಕರಣ ಮಾಡಿದ ಹೆಚ್ಡಿಕೆ
ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿ, ಶಾಶ್ವತ ಪರಿಹಾರ ಅಂದ್ರೆ ಸಂಶೋಧನೆ ಆಗಬೇಕು. ಪರಿಹಾರ ಕೊಡಿ ಅಂತ ಎಲ್ಲರೂ ಹೇಳಿದ್ದಾರೆ. ಪರಿಹಾರ ಕೊಡುವ ಬಗ್ಗೆಯೂ ಸರ್ಕಾರದ ಹಂತದಲ್ಲಿ ಚರ್ಚೆಯಾಗ್ತಿದೆ. ಸಂಶೋಧನಾ ಕೇಂದ್ರ ಶಿವಮೊಗ್ಗ, ಶೃಂಗೇರಿ, ಆಗ್ರಿಕಲ್ಚರ್ ವಿವಿಗೆ ನಾಲ್ಕು ಕೋಟಿ ಹಣ ಸಂಶೋಧನೆ ಮಾಡಲು ಬಿಡುಗಡೆ ಮಾಡ್ತಿದೆ. ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಮೊದಲ ಬಾರಿ ಅಡಿಕೆ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ