INS Arnala: ಸಾಗರದಲ್ಲಿ ಸದ್ದಿಲ್ಲದೆ ಬೇಟೆಯಾಡೋ ‘ರಣಬೇಟೆಗಾರ’ ನೌಕಾಪಡೆಗೆ ಎಂಟ್ರಿ: ನಿಮಿಷದಲ್ಲಿ ಶತ್ರುನಾಶ ಖಂಡಿತ

INS Arnala Launch: ಈ ಹಡಗನ್ನು ‘ಸೈಲೆಂಟ್ ಶಿಪ್’ ಎಂದೂ ಕರೆಯುತ್ತಾರೆ. ಏಕೆಂದರೆ ಇದು ನೀರಿನಲ್ಲಿ ಶಬ್ದ ಮಾಡುವುದಿಲ್ಲ. ಕರಾವಳಿ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಹುಡುಕುವುದು, ಅಗತ್ಯವಿದ್ದರೆ ಅವುಗಳನ್ನು ನಾಶಪಡಿಸುವುದು ಐಎನ್‌ಎಸ್ ಅರ್ನಾಲಾದ ಪ್ರಮುಖ ಗುರಿ.

Written by - Bhavishya Shetty | Last Updated : Dec 21, 2022, 01:20 PM IST
    • ದೇಶದ ಮೊದಲ ಜಲಾಂತರ್ಗಾಮಿ ವಿರೋಧಿ ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್
    • ಶಾಲೋ ವಾಟರ್ ಕ್ರಾಫ್ಟ್ ಐಎನ್‌ಎಸ್ ಅರ್ನಾಲಾ ಉಡಾವಣೆಯಾಗಿದೆ
    • ರಕ್ಷಣಾ ಸಚಿವಾಲಯದ ಹಣಕಾಸು ಸಲಹೆಗಾರ್ತಿ ರಸಿಕಾ ಚೌಬೆ ಉದ್ಘಾಟನೆ
INS Arnala: ಸಾಗರದಲ್ಲಿ ಸದ್ದಿಲ್ಲದೆ ಬೇಟೆಯಾಡೋ ‘ರಣಬೇಟೆಗಾರ’ ನೌಕಾಪಡೆಗೆ ಎಂಟ್ರಿ: ನಿಮಿಷದಲ್ಲಿ ಶತ್ರುನಾಶ ಖಂಡಿತ title=
Indian Navy

Indian Navy: ಭಾರತೀಯ ನೌಕಾಪಡೆಯ ಬಲವು ಶೀಘ್ರದಲ್ಲೇ ಹೆಚ್ಚಾಗಲಿದೆ. ದೇಶದ ಮೊದಲ ಜಲಾಂತರ್ಗಾಮಿ ವಿರೋಧಿ ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್ ಐಎನ್‌ಎಸ್ ಅರ್ನಾಲಾ ಉಡಾವಣೆಯಾಗಿದೆ. ಮಂಗಳವಾರ ರಕ್ಷಣಾ ಸಚಿವಾಲಯದ ಹಣಕಾಸು ಸಲಹೆಗಾರ (ರಕ್ಷಣಾ ಸೇವೆಗಳು) ರಸಿಕಾ ಚೌಬೆ ಅವರು ಐಎನ್‌ಎಸ್ ಅರ್ನಾಲಾವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ GRSE ಮತ್ತು ಭಾರತೀಯ ಸಶಸ್ತ್ರ ಪಡೆಗಳು ಹಾಗೂ L&T ಯ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:  ಕೊರೊನಾ ಮತ್ತೆ ಮರಳುತ್ತಿದೆಯೇ? 5 ದೇಶಗಳಲ್ಲಿ ವೈರಸ್ ಹಾವಳಿಯಿಂದ ಭಾರತದಲ್ಲಿ ಹೈ ಅಲರ್ಟ್!

ಗಾರ್ಡನ್ರೀಚ್ ಶಿಪ್ ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ ಲಿಮಿಟೆಡ್ (GRSE) ನಿಂದ INS ಅರ್ನಾಲಾವನ್ನು ನಿರ್ಮಿಸಲಾಗಿದೆ.

ಈ ಹಡಗನ್ನು ‘ಸೈಲೆಂಟ್ ಶಿಪ್’ ಎಂದೂ ಕರೆಯುತ್ತಾರೆ. ಏಕೆಂದರೆ ಇದು ನೀರಿನಲ್ಲಿ ಶಬ್ದ ಮಾಡುವುದಿಲ್ಲ. ಕರಾವಳಿ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಹುಡುಕುವುದು, ಅಗತ್ಯವಿದ್ದರೆ ಅವುಗಳನ್ನು ನಾಶಪಡಿಸುವುದು ಐಎನ್‌ಎಸ್ ಅರ್ನಾಲಾದ ಪ್ರಮುಖ ಗುರಿ.

INS ಅರ್ನಾಲಾ ವಿಶೇಷ ಲಕ್ಷಣಗಳು:

  • INS ಅರ್ನಾಲಾ ಉದ್ದ 77.6 ಮೀಟರ್ ಮತ್ತು ಅಗಲ 10.5 ಮೀಟರ್
  • ವಿಚಕ್ಷಣ ಮತ್ತು ಆಕ್ರಮಣ ಕಾರ್ಯಾಚರಣೆಗಳಿಗೆ ಸಂಪೂರ್ಣವಾಗಿ ಸೂಕ್ತವಾಗಿದೆ
  • ನೌಕಾಪಡೆ ಮತ್ತು ವಾಯುಪಡೆಯ ವಿಮಾನಗಳ ಸಮನ್ವಯದಲ್ಲಿ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಮರ್ಥವಾಗಿದೆ.
  • ಯುದ್ಧ ನಿರ್ವಹಣಾ ವ್ಯವಸ್ಥೆ ಮತ್ತು ಲಘು ಟಾರ್ಪಿಡೊಗಳು, ಜಲಾಂತರ್ಗಾಮಿ ವಿರೋಧಿ ರಾಕೆಟ್‌ಗಳನ್ನು ಹೊಂದಿದೆ
  • 7 ಅಧಿಕಾರಿಗಳೊಂದಿಗೆ 57 ನೌಕಾಪಡೆಗಳನ್ನು ನಿಯೋಜಿಸಬಹುದು
  • ಗಂಟೆಗೆ ಗರಿಷ್ಠ 47 ಕಿಲೋಮೀಟರ್ ವೇಗದಲ್ಲಿ ಓಡಬಲ್ಲದು

ಇದಕ್ಕೆ ಮಹಾರಾಷ್ಟ್ರದ ವಸಾಯಿಯಿಂದ ಉತ್ತರಕ್ಕೆ 13 ಕಿಮೀ ದೂರದಲ್ಲಿರುವ ಅರ್ನಾಲಾ ದ್ವೀಪದ ಹೆಸರನ್ನು ಇಡಲಾಗಿದೆ. ಈ ದ್ವೀಪವನ್ನು ಛತ್ರಪತಿ ಶಿವಾಜಿಯ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು.

ಇದನ್ನೂ ಓದಿ: Wedding News : ವಧು - ವರರು ವೇದಿಕೆಯ ಮೇಲೆ ಮಾಡಿದ ಕೆಲಸ ನೋಡಿ ಬೆಚ್ಚಿಬಿದ್ದ ಅತಿಥಿಗಳು

ನೌಕಾಪಡೆಯು ಅಂತಹ 16 ಕಾರ್ವೆಟ್‌ಗಳನ್ನು ತಯಾರಿಸುತ್ತಿದೆ. ಇವೆಲ್ಲವನ್ನೂ 2026ರ ಅಂತ್ಯದ ವೇಳೆಗೆ ನೌಕಾಪಡೆಗೆ ಸೇರ್ಪಡೆಗೊಳಿಸುವ ಸಾಧ್ಯತೆ ಇದೆ. ಇವುಗಳ ತಯಾರಿಕೆಯ ಒಟ್ಟು ವೆಚ್ಚ 12,662 ಕೋಟಿ ರೂ. ಭಾರತವು ಕಮೋರ್ಟಾ ವರ್ಗ, ಕೋರಾ ವರ್ಗ, ಖುಕ್ರಿ ವರ್ಗ, ವೀರ್ ವರ್ಗ ಮತ್ತು ಅಭಯ್ ವರ್ಗದ ಒಟ್ಟು 22 ಕಾರ್ವೆಟ್‌ಗಳನ್ನು ಹೊಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News