ಬೆಂಗಳೂರು : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಬೆಂಗಳೂರಿಗೆ ಬರ್ತಿದ್ದಾರೆ. 28, 29 ರಂದು ಎರಡು ದಿನ ಇಲ್ಲೇ ಇರ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸೆ.1 ರಂದು ದೆಹಲಿಯಿಂದ ಒಂದು ಟೀಂ ಬರುತ್ತೆ. 28 ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. 29 ರಂದು ಪದಾಧಿಕಾರಿಗಳ ಸಭೆ ನಡೆಯಲಿದೆ. ಭಾರತ್ ಜೊಡೋ ಯಾತ್ರೆ ಕುರಿತು ಚರ್ಚೆ ಮಾಡಿ, ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂದು‌ ತೀರ್ಮಾನ ಮಾಡಿ. ಎಲ್ಲರಿಗೆ ಜವಾಬ್ದಾರಿ ಹಂಚಿಕೆ ಮಾಡ್ತೇವೆ ಎಂದು ಹೇಳಿದರು.


ಇದನ್ನೂ ಓದಿ : ಗಣೇಶ ಕೂರಿಸಬೇಕಾದರೆ ಬೇಕು ಆರು ಇಲಾಖೆಯ ಅನುಮತಿ, ಆಯೋಜಕರ ಮುಂದಿದೆ ಸಾಲು ಸಾಲು ಸವಾಲುಗಳು


ಗಣೇಶ ಉತ್ಸವದಲ್ಲಿ ಸಾರ್ವಕರ್ ಫೋಟೋ ಹಾಕುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಅವರಿಗೆ ಅಭಿವೃದ್ಧಿ ಬೇಕಿಲ್ಲ. ಪೊಲರೈಸ್ ಮಾಡುವುದೇ ಅವರ ಗುರಿ. ಗಲಾಟೆ, ಗದ್ದಲ ಮಾಡಿಸುವುದೇ ಪ್ರಯತ್ನ. ಗಣೇಶನಿಗೂ ಸಾರ್ವಕರ್ ಗೂ ಏನು ಸಂಬಂಧ ರೀ? ಬಾಲಗಂಗಾಧರ್ ತಿಲಕರ ಫೋಟೋ ಹಾಕಿದರೆ ಅದಕ್ಕೊಂದು ನ್ಯಾಯವಿದೆ. ಸಾರ್ವಕರ್ ಫೋಟೋದಿಂದ ಏನು‌ ಮೆಸೇಜ್ ಹೋಗುತ್ತೆ. ಅವರ ಪಕ್ಷವನ್ನ ಅವರೇ ಡಿಗ್ರೇಡ್ ಮಾಡಿಕೊಳ್ತಾರೆ. ಅವರ ತತ್ವ, ಸಿದ್ಧಾಂತ ಅವರೇ ಕೆಡಿಸಿಕೊಳ್ತಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.


ಬಿಡಿಎಗೆ ಸುಪ್ರೀಂ ಛೀ‌ಮಾರಿ ಹಾಕಿದ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರಿಗಳು ಪೊಲಿಟಿಕಲ್ ಪ್ರೆಜರ್ ಇಲ್ಲದೆ ಏನು ಮಾಡಲಾಗಲ್ಲ. ಅದರ ಬೆನಿಫಿಷಿಯರ್ ಯಾರು? ಫಸ್ಟ್ ಬೆನಿಫಿಷಿಯರ್ ನೈತಿಕ ಹೊಣೆ ತಗೋಬೇಕು. ಯಾರು ಸರ್ಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅವರು‌ ಕೂಡಲೇ ರಾಜೀನಾಮೆ ಕೊಟ್ಟರೇ ಸೂಕ್ತ. ಬೊಮ್ಮಾಯಿ ಇದನ್ನ ದೊಡ್ಡದು ಮಾಡಿಕೊಳ್ಳುವುದು ಬೇಡ. ಯಾರಿದ್ದಾರೆ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.


ಇದನ್ನೂ ಓದಿ : ಸೆಪ್ಟೆಂಬರ್ 12 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲ ಅಧಿವೇಶನ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.