ಗಣೇಶ ಕೂರಿಸಬೇಕಾದರೆ ಬೇಕು ಆರು ಇಲಾಖೆಯ ಅನುಮತಿ, ಆಯೋಜಕರ ಮುಂದಿದೆ ಸಾಲು ಸಾಲು ಸವಾಲುಗಳು

ಈ ಬಾರಿ ಗಣೇಶ ಕೂರಿಸಬೇಕಾದರೆ ಒಂದಲ್ಲಾ ಎರಡಲ್ಲ ಒಟ್ಟು ಆರು ಇಲಾಖೆಗಳ ಅನುಮತಿ ಬೇಕೆ ಬೇಕು. ಈ ಇಲಾಖೆಗಳು ಅನುಮತಿ ನೀಡುವುದರ ಜೊತೆಗೆ ಸಾಕಷ್ಟು ಷರತ್ತುಗಳನ್ನೂ ಕೂಡಾ  ವಿಧಿಸಿದೆ, ಈ ಎಲ್ಲಾ ಷರತ್ತುಗಳನ್ನು ಕೂಡಾ ಆಯೋಜಕರು ಪಾಲಿಸಬೇಕಾಗುತ್ತದೆ. 

Written by - Zee Kannada News Desk | Last Updated : Aug 26, 2022, 11:45 AM IST
  • ಇನ್ನೇನು ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ.
  • ಗಣೇಶನನ್ನು ಕೂರಿಸಲು ಎಲ್ಲೆಡೆ ಭರದ ಸಿದ್ದತೆ ನಡೆಯುತ್ತಿದೆ.
  • ಗಣೇಶ ಕೂರಿಸಬೇಕಾದರೆ ಆರು ಇಲಾಖೆಗಳ ಅನುಮತಿ ಬೇಕು.
ಗಣೇಶ ಕೂರಿಸಬೇಕಾದರೆ ಬೇಕು ಆರು ಇಲಾಖೆಯ ಅನುಮತಿ, ಆಯೋಜಕರ ಮುಂದಿದೆ ಸಾಲು ಸಾಲು ಸವಾಲುಗಳು title=
guidelines for ganesha utsav (file photo)

ಬೆಂಗಳೂರು : ಇನ್ನೇನು ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಗಣೇಶನನ್ನು ಕೂರಿಸಲು ಎಲ್ಲೆಡೆ ಭರದ ಸಿದ್ದತೆ ನಡೆಯುತ್ತಿದೆ. ಎರಡು ವರ್ಷ ಕರೋನಾ ಕಾರಣ ಹಬ್ಬಗಳು ಕಾರಣ ಸಪ್ಪೆಯಾಗಿದ್ದ ಈ ಬಾರಿ ಸಾರ್ವಜನಿಕರು ಕೂಡಾ ಭಾರೀ ಕುತೂಹಲದಿಂದ ಇದ್ದಾರೆ. ಆದರೆ ಬೆಂಗಳೂರಿನಲ್ಲಿ  ಗಣೇಶ ಕೂರಿಸಬೇಕಾದರೆ, ಈ ಬಾರಿ ಆರು ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. 

ಈ ಬಾರಿ ಗಣೇಶ ಕೂರಿಸಬೇಕಾದರೆ ಒಂದಲ್ಲಾ ಎರಡಲ್ಲ ಒಟ್ಟು ಆರು ಇಲಾಖೆಗಳ ಅನುಮತಿ ಬೇಕೆ ಬೇಕು. ಈ ಇಲಾಖೆಗಳು ಅನುಮತಿ ನೀಡುವುದರ ಜೊತೆಗೆ ಸಾಕಷ್ಟು ಷರತ್ತುಗಳನ್ನೂ ಕೂಡಾ ವಿಧಿಸಿದೆ. ಈ ಎಲ್ಲಾ ಷರತ್ತುಗಳನ್ನು ಕೂಡಾ ಆಯೋಜಕರು ಪಾಲಿಸಬೇಕಾಗುತ್ತದೆ. ಹಾಗಿದ್ದರೆ ಗಣೇಶ ಕೂರಿಸಬೇಕಾದರೆ ಆಯೋಜಕರು ಯಾವ ಇಲಾಖೆಗಳ ಅನುಮತಿ ಪಡೆಯಬೇಕು? ಆ ಇಲಾಖೆಗಳು ವಿಧಿಸಿರುವ ಷರತ್ತುಗಳು ಯಾವುವು ನೋಡೋಣ.

ಇದನ್ನೂ ಓದಿ : ಸೆಪ್ಟೆಂಬರ್ 12 ರಿಂದ 10 ದಿನಗಳ ಕಾಲ ರಾಜ್ಯ ವಿಧಾನಮಂಡಲ ಅಧಿವೇಶನ

ಈ ವರ್ಷ ಗಣೇಶ ಕೂರಿಸಬೇಕಾದರೆ ಪೊಲೀಸ್ ಇಲಾಖೆ, ಬಿಬಿಎಂಪಿ, ಕಂದಾಯ, ಬೆಸ್ಕಾಂ, ಅಗ್ನಿಶಾಮಕ ಜೊತೆಗೆ ಸಂಚಾರಿ ಪೊಲೀಸರ ಅನುಮತಿಯನ್ನು  ಕಡ್ಡಾಯವಾಗಿ ಪಡೆಯಲೇಬೇಕು. ಈ ಆರು ಇಲಾಖೆಯಲ್ಲಿ ಯಾವುದಾದರೂ ಒಂದು ಇಲಾಖೆ ಅನುಮತಿ ನಿರಾಕರಣೆ ಮಾಡಿದರೂ ಗಣೇಶ  ಕೂರಿಸುವುದು ಸಾಧ್ಯವಾಗುವುದಿಲ್ಲ. 

ಯಾವ ಇಲಾಖೆಗಳ ಅನುಮತಿ ಬೇಕು  ಮತ್ತು  ಹಾಕಿರುವ ಷರತ್ತುಗಳು ಯಾವುವು ? : 
ಪೊಲೀಸ್ ಇಲಾಖೆ : 
-ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಮುನ್ನ ಪೊಲೀಸ್ ಇಲಾಖೆ ಅನುಮತಿ ಕಡ್ಡಾಯ
- ಅನುಮತಿ ಕೋರಿ ಅರ್ಜಿ ಹಾಕಿದವರ ಪೂರ್ವಾಪರ ಪರಿಶೀಲನೆ
-ಈ ಹಿಂದೆ ಯಾವುದಾದರೂ ಕ್ರಿಮಿನಲ್ ಕೇಸ್ ಗಳು ಇದ್ದರೇ ಅನುಮತಿ ಇಲ್ಲ
-ಜೊತೆಗೆ ಏನೇ ಸಮಸ್ಯೆ ಆದರೂ ನಾನೇ ಜವಾಬ್ದಾರಿ ಎಂದು ಬಾಂಡ್ ಬರೆದುಕೊಡಬೇಕು
-ಮುಂದಿನ ಆರು ತಿಂಗಳವರೆಗೂ ಯಾವುದೇ ಕ್ರೈಂನಲ್ಲಿ ಭಾಗಿಯಾಗುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು
ಈ  ಎಲ್ಲಾ  ಷರತ್ತುಗಳಿಗೆ ಒಪ್ಪ್ಪಿದರೆ ಮಾತ್ರ ಪೊಲೀಸ್ ಇಲಾಖೆಯಿಂದ ಅನುಮತಿಸಿಗಲಿದೆ 

ಬೆಸ್ಕಾಂ : 
-ಗಣೇಶ ಇಡೋ ಜಾಗದಲ್ಲಿ ಯಾವುದೇ ಟ್ರಾನ್ಸ್ ಫಾರ್ಮರ್ ಇರಬಾರದು
-ಗಣೇಶ ಕೂರಿಸುವ ಜಾಗದಲ್ಲಿ ಮೇಲೆ ವಿದ್ಯುತ್ ವೈರ್ ಹೋಗಿರಬಾರದು
-ಮೆರವಣಿಗೆ ವೇಳೆ ಯಾವುದೇ ವಿದ್ಯುತ್ ವೈರ್ ತಾಕೋ ರೀತಿ ಪಲ್ಲಕ್ಕಿ ಇರಕೂಡದು
-ಮೆರವಣಿಗೆ ರೂಟ್ ಮ್ಯಾಪ್ ಮೊದಲೇ ಕೊಡಬೇಕು

ಇದನ್ನೂ ಓದಿ : Today Vegetable Price: ಇಷ್ಟೊಂದು ಏರಿಕೆಯಾಯ್ತಾ ತರಕಾರಿಗಳ ಬೆಲೆ? ಇಲ್ಲಿದೆ ನೋಡಿ ಬೆಲೆ ವಿವರ

ಕಂದಾಯ ಹಾಗೂ ಬಿಬಿಎಂಪಿ : 
-ಗಣೇಶ ಇಡುವ ಜಾಗ ಬಿಬಿಎಂಪಿಗೆ ಸೇರಿದದ್ದರೆ ಬಿಬಿಎಂಪಿ ಅನುಮತಿ ಕಡ್ಡಾಯ
-ಕಂದಾಯ ಇಲಾಖೆಗೆ ಸೇರಿದದ್ದರೆ ಕಂದಾಯ ಇಲಾಖೆಯ ಅನುಮತಿ ಕಡ್ಡಾಯ
-ರಾಸಾಯನಿಕ ಬಣ್ಣ, ಥರ್ಮಕೋಲ್, ಪಿಓಪಿ ಗಣೇಶನಿಗೆ ಅನುಮತಿ ಇಲ್ಲ
-ದೊಡ್ಡ ಗಾತ್ರದ ಗಣೇಶನ ಇಡುವುದಾದರೆ ಪಾಲಿಕೆ‌ ಗುರುತಿಸುವ ಜಾಗದಲ್ಲೇ  ವಿಸರ್ಜನೆ ಮಾಡಬೇಕು 

ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ : 
-ಗಣೇಶ ಪ್ರತಿಷ್ಠಾಪನೆ ಮಾಡುವುದರಿಂದ ಸಂಚಾರಕ್ಕೆ ತೊಂದರೆ ಆಗಬಾರದು
- ಗಣೇಶನ ಪೂಜೆಗೆ ಅಂತ ಬರುವವರಿಗೆ ಪಾರ್ಕಿಂಗ್ ಸ್ಥಳ ಇರಬೇಕು
-ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದರೆ ಆಯೋಜಕರ ಮೇಲೆ ಕೇಸ್
-ಜೊತೆಗೆ ಅಗ್ನಿಶಾಮಕ ಇಲಾಖೆಯಿಂದಲೂ ಅನುಮತಿ ಸಹ ಕಡ್ಡಾಯ
-ಯಾವುದೇ ಬೆಂಕಿ ಅವಘಡ ಸಂಭವಿಸಿದರೆ ನಂದಿಸುವ ಸೌಕರ್ಯಗಳಿರಬೇಕು 
-ಏನೆಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವುದನ್ನು ಮೊದಲೇ ಹೇಳಬೇಕು.
 
 ಇನ್ನು ಮೇಲೆ ತಿಳಿಸಲಾದ ಇಲಾಖೆಯ ಅನುಮತಿ ಪಡೆಯದೆ ಗಣೇಶ ಕೂರಿಸಿದರೆ  ಆಯೋಜಕರ ವಿರುದ್ದ ದೂರು ದಾಖಲಿಸಲಾಗುವುದು. ಹಾಗಂತ ಅನುಮತಿ ಪಡೆದು ನಿಯಮ ಉಲ್ಲಂಘನೆ ಮಾಡಿದದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News