ಇತ್ತೀಚೆಗಷ್ಟೇ ಟೈಟಾನಿಕ್ ಚಿತ್ರದ ನಟ ಲಿಯೋನಾರ್ಡೋ ಡಿ ಕ್ಯಾಪ್ರಿಯೋ ಸಿದ್ದರಾಮಯ್ಯ ಸರ್ಕಾರದ ಸೋಲಾರ್ ಪಾರ್ಕ್ ನಿರ್ಮಾಣವನ್ನು ಹೋಗಳಿ ಟ್ವೀಟ್ ಮಾಡಿದ್ದರು. ಆದರೆ ಈಗ ಆಸ್ಟ್ರೇಲಿಯಾ ಸಿದ್ದರಾಮಯ್ಯ ಸರ್ಕಾರದ ಮಾದರಿ ನಿರ್ಮಿಸಿರುವಂತೆ ಸೋಲಾರ್ ಪಾರ್ಕ್ ಒಂದನ್ನು ನಿರ್ಮಿಸುತ್ತಿದೆ.


COMMERCIAL BREAK
SCROLL TO CONTINUE READING

ಹೌದು,ಇದು ಅಚ್ಚರಿಯಾದರು ಸತ್ಯ ಸಂಗತಿ. ಇಂಧನ ಸಚಿವ ಡಿ.ಕೆ. ಶಿವಕುಮಾರ್ ರವರ ಕನಸಿನ ಕೂಸಾದ ಕರ್ನಾಟಕದ ತುಮಕೂರಿನ ಪಾವಗಡದಲ್ಲಿ ನಿರ್ಮಿಸಲಾಗಿರುವ 2000 ಮೆಗಾವ್ಯಾಟ್ ಸೋಲಾರ್ ಪಾರ್ಕಿನ ಪ್ರಮುಖ ಅಂಶವೆಂದರೆ, ರೈತರ ಭೂಮಿಯನ್ನು ಖರೀದಿಸುವ ಬದಲಾಗಿ ಬಾಡಿಗೆಗೆ ಭೂಮಿಯನ್ನು ತೆಗೆದುಕೊಂಡು ಬರಡು ಜಮೀನಿನಲ್ಲಿ ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕನ್ನು ನಿರ್ಮಿಸಲಾಗಿದೆ.


ಆಸ್ಟ್ರೇಲಿಯಾ ಮೂಲದ ಪತ್ರಿಕೆ ಎಬಿಸಿಯು ತನ್ನ ಅಂಕಣದಲ್ಲಿ ಪ್ರಕಟಿಸಿರುವ ಸುದ್ದಿಯ ಪ್ರಕಾರ, ಇನ್ಸ್ಟಿಟ್ಯೂಟ್ ಫಾರ್ ಎನರ್ಜಿ, ಎಕನಾಮಿಕ್ಸ್ ಅಂಡ್ ಫೈನಾನ್ಷಿಯಲ್ ಅನಾಲಿಸಿಸ್ (ಐಇಇಎಫ್ಎ) ನಲ್ಲಿನ ಎನರ್ಜಿ ಫೈನಾನ್ಸ್ ಸ್ಟಡೀಸ್ ನಿರ್ದೇಶಕ ಟಿಮ್ ಬಕ್ಲಿ, ಸಹಕಾರಿ ಮಾದರಿಯು ಆಸ್ಟ್ರೇಲಿಯಾದ ರೈತರಿಗೆ ಸಹಾಯವಾಗಲಿದೆ ಎಂದು ಹೇಳಿದರು.


ಆಸ್ಟ್ರೇಲಿಯಾದ ಇನ್ಸ್ಟಿಟ್ಯೂಟ್ನಿಂದ ಟಾಮ್ ಸ್ವಾನ್ ನವೀಕರಿಸಬಹುದಾದ ಇಂಧನ ಉದ್ಯೋಗಗಳ ಮೇಲೆ ಒಂದು ಅಧ್ಯಯನವನ್ನು ಮಾಡಿದ್ದಾರೆ. ನವೀಕರಿಸಬಹುದಾದ ಶಕ್ತಿ ಈಗಾಗಲೇ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂಬ ಅಭಿಪ್ರಾಯವನ್ನು ಹೊಂದಿದೆ.


"ಇದು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡಬಹುದಾದ ಒಂದು ಮಾದರಿಯಾಗಿದೆ, ಆದರೆ ಆಸ್ಟ್ರೇಲಿಯಾದ ಸಾಕಣೆಗಳ ಗಾತ್ರದಿಂದಾಗಿ, ಭಾರತದಲ್ಲಿ 2,300 ರೈತರಿಗೆ ಬದಲಾಗಿ ಶಕ್ತಿ ಕಂಪನಿಗಳು ಒಂದಕ್ಕಿಂತ ಹೆಚ್ಚು ಅಥವಾ ಎರಡು ರೈತರೊಂದಿಗೆ ಮಾತುಕತೆ ನಡೆಸಬೇಕಾಗಿಲ್ಲ" ಎಂದು ಅವರು ಹೇಳಿದರು. "ದೊಡ್ಡ ಗ್ರಾಮೀಣ ಆಸ್ತಿಯ ಮೇಲೆ ಮಧ್ಯಮ ಗಾತ್ರದ ಸೌರ ಜಮೀನಿನ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಅವರು ಅಭಿಪ್ರಾಯ ಪಟ್ಟಿರುವುದಾಗಿ ಎಬಿಸಿ ಪತ್ರಿಕೆ ವರದಿ ಮಾಡಿದೆ.


ಆಸ್ಟ್ರೇಲಿಯಾದಾದ್ಯಂತ ನವೀಕರಿಸಬಹುದಾದ ಶಕ್ತಿ ಎಷ್ಟು ವೇಗವಾಗಿ ಬೆಳೆಯುತ್ತಿದೆ ಎಂಬುದರ ಕುರಿತು ಮುನ್ಸೂಚನೆಗಳು ಕೂಡಾ ಹುಟ್ಟಿಕೊಂಡಿದೆ.


ಮೆಲ್ಬೊರ್ನ್ ನಲ್ಲಿನ ಗ್ರೀನ್ ಎನರ್ಜಿ ಮಾರ್ಕೆಟ್ನ ಟ್ರಿಸ್ಟಾನ್ ಎಡಿಸ್ ಆಸ್ಟ್ರೇಲಿಯಾದ ಸೌರ ಅನುಸ್ಥಾಪನೆಗಳನ್ನು 2018 ರಲ್ಲಿ ಪ್ರಾಯಶಃ 3.5 ಜಿಡಬ್ಲ್ಯೂಗೆ ಇಳಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಎಸಿಬಿ ತನ್ನ ಅಂಕಣದಲ್ಲಿ ವರದಿ ಮಾಡಿದೆ.



Pic: ACB.NET.AU




ಈ ಕುರಿತಾದ ವರದಿಯನ್ನು ಆಸ್ಟ್ರೇಲಿಯಾ ಮೂಲದ ಪತ್ರಿಕೆ ಎಬಿಸಿಯು ತನ್ನ ಅಂಕಣದಲ್ಲಿ ಪ್ರಕಟಿಸಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯನವರ ಅಭಿವೃದ್ಧಿ ಮಾದರಿಯನ್ನು ಹೊರದೇಶವೊಂದು ಅಳವಡಿಸಿಕೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.