ಬೆಂಗಳೂರು :  ಆಟೋ ಟ್ಯಾಕ್ಸಿ ನಂಬಿ ಮನೆಯಿಂದ ಹೊರಡುವ ಮುನ್ನ ಎಚ್ಚರ. ಇಂದು ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರತಿಭಟನೆಗೆ ಇಳಿದಿದ್ದಾರೆ. ರಾಪಿಡೋ ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಮತ್ತು ಟ್ಯಾಕ್ಸಿ ಚಾಲಕರು  ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇಂದು ಸಂಜೆಯವರೆಗೆ ತಮ್ಮ ವಾಹನವನ್ನು ರಸ್ತೆಗಿಳಿಸದಿರಲು ನಿರ್ಧಾರ ಮಾಡಿದ್ದಾರೆ. ಹಾಗಾಗಿ ಇಂದು ಪ್ರಯಾಣಕ್ಕೆ ಆಟೋ ಟ್ಯಾಕ್ಸಿ ಸಿಗುವುದು ಅನುಮಾನ . 


COMMERCIAL BREAK
SCROLL TO CONTINUE READING

ರಾಜಧಾನಿಯಲ್ಲಿ ಅನಧಿಕೃತ ರಾಪಿಡೋ ಬೈಕ್ ಟ್ಯಾಕ್ಸಿ ಸಂಚಾರ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಆಟೋ ಮತ್ತು ಟ್ಯಾಕ್ಸಿ ಚಾಲಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.  ಕೂಡಲೇ ರಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪೀಸ್ ಅಟೋ ಮತ್ತು ಟ್ಯಾಕ್ಸಿ ಡ್ರೈವರ್ ಅಸೋಸಿಯೇಶನ್  ವತಿಯಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ. 


ಇದನ್ನೂ ಓದಿ : ಕೂಲಿ ಕಾರ್ಮಿಕರು ತಂಗಿದ್ದ ಶೆಡ್ ಕುಸಿದು ನಾಲ್ವರ ದುರ್ಮರಣ


ಬೈಕ್ ಟ್ಯಾಕ್ಸಿಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಬದುಕು  ದುಸ್ತರವಾಗಿದೆ ಎನ್ನುವುದು  ಚಾಲಕರ ಆರೋಪ. ಈ ಬಗ್ಗೆ RTO ಗಮನಕ್ಕೆ ತಂದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತಿದ್ದಾರೆ ಎಂದು ಆಟೋ ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ. ತಕ್ಷಣ ರಾಪಿಡೋ ಬೈಕ್ ಟ್ಯಾಕ್ಸಿಯನ್ನ ಬ್ಯಾನ್ ಮಾಡುವಂತೆ ಮನವಿ ಮಾಡಿದ್ದಾರೆ. 


ಹತ್ತು ಸಾವಿರಕ್ಕೂ ಹೆಚ್ಚು ಆಟೋ ಮತ್ತು ಟ್ಯಾಕ್ಸಿ ಚಾಲಕರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆಯಿಂದ ಸಂಜೆವರೆಗೆ ಯಾವುದೇ ವಾಹನಗಳನ್ನು ರಸ್ತೆಗಿಳಿಸದೇ ಇರಲು ನಿರ್ಧರಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. 


ಇದನ್ನೂ ಓದಿ :  ಜನಪರ ಹೋರಾಟಗಾರ ಹಾಗೂ ಖ್ಯಾತ ಚಿಂತಕ ಜಿ.ರಾಜಶೇಖರ್ ಇನ್ನಿಲ್ಲ


ಪ್ರತಿಭಟನೆ ಗೆ ಸಾಥ್ ನೀಡಿರೋ ಆಟೋ ಸಂಘಟನೆಗಳು :
-ಸ್ನೇಹಜೀವಿ ಚಾಲಕರ ಟ್ರೇಡ್ ಯೂನಿಯನ್. 
- ಜೈ ಭರತ್ ಚಾಲಕರ ಸಂಘ.ಭಾರತ್ ಟ್ರಾನ್ಸ್ಪೋಟ್.
 -ಕರ್ನಾಟಕ ರಕ್ಷಣಾ ವೇದಿಕೆ (ಆಟೋ ಘಟಕ)
-ಬಸ್ ಮಾಲೀಕರ ಸಂಘ
-ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ. 
--ಜೈ ಹಿಂದ್ ಆಟೋ ಸಂಘ. ಅಖಿಲ ಕರ್ನಾಟಕ ಶ್ರಮಜೀವಿಗಳ ಸಂಘ.
-ಕರುನಾಡ ಚಾಲಕರ ಹಿತರಕ್ಷಣ ಸಂಘ.
-ಏರ್ಪೋರ್ಟ್ ಚಾಲಕರ ಸಂಘ.
-ಕರುನಾಡ ಚಾಲಕರ ಸಂಘ.
-ರಾಷ್ಟ್ರೀಯ ಚಾಲಕರ ಒಕ್ಕೂಟ
ಕರುನಾಡ ಸಾರಥಿಗಳ ಸೈನ್ಯ.
-ಸೇಫ್ಟಿ ಡ್ರೈವರ್ಸ್ ಅಸೂಸಿಯೇಷನ್(
-ತೆಲಂಗಾಣ ಟ್ಯಾಕ್ಸಿ ಜಾಯಿನ್ ಅಕ್ಷನ್ ಕಮಿಟಿ
-ಬೃಹತ್ ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಒಕ್ಕೂಟ
-ARDU ಆಟೋ ರಿಕ್ಷಾ ಡ್ರೈವರ್ ಯೂನಿಯನ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.