'ನೆರೆ ಸಂತ್ರಸ್ತರ ಪರಿಹಾರದಲ್ಲೂ ಸರ್ಕಾರದಿಂದ ತಾರತಮ್ಯ ಅಮಾನವೀಯ'

 ನೆರೆ ಸಂತ್ರಸ್ತರ ಪರಿಹಾರದಲ್ಲೂ ಸರ್ಕಾರದಿಂದ ತಾರತಮ್ಯ ಅಮಾನವೀಯ ನಡೆಯಾಗಿದೆ, ಸರ್ಕಾರ ಈಗ ನಿರಾಶ್ರಿತರ ನೆರವಿಗೆ ಧಾವಿಸಬೇಕೆಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

Written by - Zee Kannada News Desk | Last Updated : Jul 20, 2022, 03:20 PM IST
  • ಮುಖ್ಯಮಂತ್ರಿಗಳು,ಸಚಿವರುಗಳು "ಬಂದ ಪುಟ್ಟ ಹೋದ ಪುಟ್ಟ" ಎಂಬಂತೆ ನೆರೆ ಪೀಡಿತ ಪ್ರದೇಶಗಳಿಗೆ ಫ್ಯಾಶನ್ ಶೋ ಗೆ ಭೇಟಿ ಕೊಟ್ಟಿದ್ದು ಮಾತ್ರ.
'ನೆರೆ ಸಂತ್ರಸ್ತರ ಪರಿಹಾರದಲ್ಲೂ ಸರ್ಕಾರದಿಂದ ತಾರತಮ್ಯ ಅಮಾನವೀಯ' title=

ಬೆಂಗಳೂರು: ನೆರೆ ಸಂತ್ರಸ್ತರ ಪರಿಹಾರದಲ್ಲೂ ಸರ್ಕಾರದಿಂದ ತಾರತಮ್ಯ ಅಮಾನವೀಯ ನಡೆಯಾಗಿದೆ, ಸರ್ಕಾರ ಈಗ ನಿರಾಶ್ರಿತರ ನೆರವಿಗೆ ಧಾವಿಸಬೇಕೆಂದು ವಿಧಾನಪರಿಷತ್ ವಿಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳು ಅತಿವೃಷ್ಠಿಯಿಂದ ತತ್ತರಿಸುತ್ತಿವೆ.ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರಿನ ಪ್ರವಾಹ ಅವಾಂತರವನ್ನೇ ಸೃಷ್ಟಿಮಾಡಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸುರತ್ಕಲ್, ಮಂಗಳೂರು ನಗರ ಉತ್ತರದ ನೇರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ. 

ಮುಖ್ಯಮಂತ್ರಿಗಳು,ಸಚಿವರುಗಳು "ಬಂದ ಪುಟ್ಟ ಹೋದ ಪುಟ್ಟ" ಎಂಬಂತೆ ನೆರೆ ಪೀಡಿತ ಪ್ರದೇಶಗಳಿಗೆ ಫ್ಯಾಶನ್ ಶೋ ಗೆ ಭೇಟಿ ಕೊಟ್ಟಿದ್ದು ಮಾತ್ರ. ಆದರೆ ಇಲ್ಲಿವರೆಗೂ ನಯಾ ಪೈಸೆ ಬಿಡುಗಡೆ ಮಾಡಲಿಲ್ಲ. ನೊಂದವರಿಗೆ ನೆರವು ನೀಡಲಿಲ್ಲ. ನಿರಾಶ್ರಿತರಿಗೆ ನೀಡಿರುವ ಭರವಸೆಗಳು ನಿರಾಸೆಗೊಳಿಸಿವೆ. 

ಪಚ್ಚನಾಡಿ, ಗುರುಪುರ, ಮಿನಕಳಿ, ಉಳ್ಳಾಲ, ಸುರತ್ಕಲ್, ಸೋಮೇಶ್ವರ ಗ್ರಾಮ, ಬೆಟ್ಟಂಪಾಡಿ, ಬೈಕಂಪಾಡಿ, ಅದ್ಯಪಾಡಿ ಸೇರಿದಂತೆ ಇನ್ನಿತರೆ ಮಳೆಯಿಂದ ಹಾನಿಗೊಳಿಗಾಗಿರುವ ಹಾಗೂ ಕಡಲ್ಕೊರೆತದಿಂದ ಅಪಾಯದಲ್ಲಿರುವ ಪ್ರದೇಶಗಳಿಗೆ ಭೇಟಿ ಮಾಡಿದೆ. ಬಹುತೇಕ ಕಡೆ ಇಲ್ಲಿವರೆಗೂ ನಿರಾಶ್ರಿತರಿಗೆ ಪ್ರಾಥಮಿಕ ಸೌಲಭ್ಯವೂ ಕಲ್ಪಿಸದೆ ಅಮಾನವೀಯವಾಗಿ ನಡೆದುಕೊಂಡಿರುವುದು ದುರಂತ. 

ಇದನ್ನೂ ಓದಿ: Flipkart ನಲ್ಲಿ 1000 ರೂ.ಗಳಿಗೂ ಕಮ್ಮಿ ಬೆಲೆಗೆ ಖರೀದಿಸಿ ಅದ್ಭುತ ಡಿಸ್ಪ್ಲೇವುಳ್ಳ ಸ್ಮಾರ್ಟ್ ಟಿವಿ! ಇಲ್ಲಿವೆ ಅತ್ಯುತ್ತಮ ಕೊಡುಗೆಗಳು

ಇನ್ನೂ ಕಳೆದ ಎರಡು ವರ್ಷಗಳ ಹಿಂದೆ ನೆರೆ ಸಂದರ್ಭದಲ್ಲಿ ಗುರುಪುರದ ಗ್ರಾಮಪಂಚಾಯಿತಿ ವ್ಯಾಪ್ತಿಯ 70ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಿಸುವಾಗ ಮನೆ ಕಟ್ಟಿ ಕೊಡುವ ಭರವಸೆಯನ್ನ ನೀಡಿ, ಬಾಡಿಗೆ ಮನೆ ನಿವಾಸಿಗಳಿಗೆ ತಿಂಗಳಿಗೆ ಹತ್ತು ಸಾವಿರ ರೂಗಳ ಸಹಾಯ ನೀಡುವ ಭರವಸೆ ನೀಡಿತ್ತು. ಆದ್ರೆ ಇಲ್ಲಿವರೆಗೂ ಈ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಇತ್ತ ತಿರುಗಿಯೂ ನೋಡಿಲ್ಲ. ಪರಿಹಾರ ನೀಡುವುದರಲ್ಲಿಯೂ ಬೆರಳಣಿಕೆ ಕುಟುಂಬಗಳಿಗೆ ಪರಿಹಾರ ನೀಡಿ ತಾರತಮ್ಯ ಮಾಡುವ ಮೂಲಕ ಅಮಾನವೀಯವಾಗಿ ನಡೆದುಕೊಂಡಿದೆ. ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ನೀಡಿದ್ದ ಭರವಸೆಯನ್ನ ಈಡೇರಿಸಬೇಕೆಂದು ಒತ್ತಾಯಿಸುತ್ತೇನೆ ಎಂದು ಅವರು ಆಗ್ರಹಿಸಿದರು.

ಕಡಲ್ಕೊರೆತ ಪ್ರದೇಶಗಳ ಕುಟುಂಬಗಳು ಪ್ರತಿ ಕ್ಷಣವೂ ಜೀವ ಕೈಲಿ ಹಿಡಿದುಕೊಂಡಿವೆ. ಜಿಲ್ಲಾಡಳಿತ ಕೂಡಲೇ ಅಂತಹ ಪ್ರದೇಶಗಳನ್ನ ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು. ನಿರಾಶ್ರಿತರು ಹಾಗೂ ಅಪಾಯದಲ್ಲಿರುವವರಿಗೆ ಎನ್ಡಿಆರ್ ಎಫ್ ಹಾಗೂ ಎಸ್ಡಿಆರ್ ಎಫ್ ನಿಧಿ ಕೇವಲ ಎರಡೊತ್ತಿನ ಊಟಕ್ಕೆ ಮಾತ್ರ ಸೀಮಿತವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ವಿಶೇಷ ಪರಿಹಾರ ನಿಧಿಯನ್ನ ಘೋಷಿಸಿ, ಸಂಪೂರ್ಣವಾಗಿ ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಸಂಪೂರ್ಣ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಶ್ರೀಲಂಕಾದ ಹಂಗಾಮಿ ಅಧ್ಯಕ್ಷರಾಗಿ ರಾಣಿಲ್ ವಿಕ್ರಂಸಿಂಘೆ ನೇಮಕ

ಬಿಜೆಪಿ ಸರ್ಕಾರದ ಶಾಸಕರುಗಳೇ ತಮ್ಮ ಸರ್ಕಾರ ಹಾಗೂ ಮಂತ್ರಿಗಳ ಕಾರ್ಯವೈಖರಿಯನ್ನ ಬಹಿರಂಗವಾಗಿ ಖಂಡಿಸುತ್ತಿದ್ದಾರೆ. ಇಡೀ ಸರ್ಕಾರ ಹಾಗೂ ಮಂತ್ರಿ ಮಂಡಲ ಬರೀ ಕಮಿಷನ್ ವ್ಯವಹಾರಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಬಹುತೇಕ ಮಂತ್ರಿಗಳು ಬೆಂಗಳೂರು ಬಿಟ್ಟು ಅಲುಗಾಡುತ್ತಿಲ್ಲ. ಕೂಡಲೇ ಮೈ ಚಳಿ ಬಿಟ್ಟು ನೆರೆಯಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ನೆರವಾಗಬೇಕೆಂದು ಆಗ್ರಹಿಸುತ್ತೇನೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಮೊದಲ ದಿನದ ನೆರೆ ಪೀಡಿತ ಪ್ರದೇಶಗಳ ಪ್ರವಾಸದಲ್ಲಿ ಮಾಜಿ ಸಚಿವರು,‌ಶಾಸಕರಾದ ಯುಟಿ ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವಾ, ಮಾಜಿ ಕಾರ್ಪೋರೆಟರ್ ಗಳು, ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News