ಸಿಎಂ ಸ್ಥಾನದಿಂದ ಬಿಎಸ್‌ವೈ ಇಳಿಸಲು ಹೈಕಮಾಂಡ್ ಪ್ಲ್ಯಾನ್..!?
ಆಪರೇಷನ್ ಕಮಲದ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದರೂ ಪೂರ್ಣಾವಧಿ ಅಧಿಕಾರವನ್ನು ಅನುಭವಿಸುವ ಪರಿಸ್ಥಿತಿಯಲ್ಲಿ ಅವರಿಲ್ಲ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಸದ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರದ್ದು ಅತಂತ್ರ ಪರಿಸ್ಥಿತಿ. ಆಪರೇಷನ್ ಕಮಲದ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತರಾದರೂ ಪೂರ್ಣಾವಧಿ ಅಧಿಕಾರವನ್ನು ಅನುಭವಿಸುವ ಪರಿಸ್ಥಿತಿಯಲ್ಲಿ ಅವರಿಲ್ಲ. ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ದಿನದಿಂದ ಪ್ರಾಕೃತಿಕ ವಿಕೋಪ, ಕೋವಿಡ್, ಅತಿವೃಷ್ಟಿ, ಅನಾವೃಷ್ಟಿಯಂತಹ ಭೀಕರ ಪರಿಣಾಮಗಳನ್ನು ಎದುರಿಸಬೇಕಾಯಿತು. ಸರ್ಕಾರಕ್ಕೆ ಸವಾಲಾದ ಇವೆಲ್ಲದರ ಜೊತೆಗೆ ಸಂಪುಟ ವಿಸ್ತರಣೆ, ನಾಯಕತ್ವ ಬದಲಾವಣೆ ಬಿಎಸ್‌ವೈಯನ್ನು ಎಡೆಬಿಡದೆ ಕಾಡಲು ಶುರುಮಾಡಿದೆ.
ಶಿರಾ ಹಾಗೂ ರಾಜರಾಜೇಶ್ವರಿ ನಗರ ಬೈ ಎಲೆಕ್ಷನ್‌ನಲ್ಲಿ ಬಿಜೆಪಿ ಭರ್ಜರಿ ಜಯದ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ(B.S. Yediyurappa) ಕುರ್ಚಿ ಅಲುಗಾಡತೊಡಗಿದೆ. ಚುನಾವಣಾ ಫಲಿತಾಂಶ ಸಿಎಂ ಕುರ್ಚಿಯನ್ನು ಭದ್ರಗೊಳಿಸುತ್ತದೆ ಎಂಬ ‘ರಾಜಕೀಯ ಪಂಡಿತರ’ ಭವಿಷ್ಯ ಸುಳ್ಳಾಗುತ್ತಾ ಎಂಬ ಆತಂಕ ಬಿಎಸ್‌ವೈ ಆಪ್ತರಲ್ಲಿ ಕಾಡಲು ಶುರುವಾಗಿದೆ. ಹೇಗಾದರೂ ಮಾಡಿ ಈ ಬಾರಿ ಬಿಎಸ್‌ವೈಯನ್ನು ಕೆಳಗಿಳಿಸಬೇಕು ಎಂದು ಹೈಕಮಾಂಡ್ ಮಟ್ಟದಲ್ಲಿರುವ ಕೆಲವು ನಾಯಕರು ತಂತ್ರ ಹೂಡುತ್ತಿದ್ದಾರೆ.
ಡಿಕೆಶಿ ವಿರುದ್ಧ 'ಹೊಸ ಬಾಂಬ್' ಸಿಡಿಸಿದ ಹೆಚ್ ಡಿಕೆ!
ಬಿಎಸ್‌ವೈ ಬದಲಾಗಿ ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿ ಹೈಕಮಾಂಡ್ ನಿರತವಾಗಿದೆ. ಈ ಸಂದರ್ಭದಲ್ಲಿ ಖಾಲಿಯಾಗಲಿರುವ ಕುರ್ಚಿಯನ್ನು ಪಡೆದುಕೊಳ್ಳಲು ರಾಜ್ಯದ ಸಿಎಂ ಆಕಾಂಕ್ಷಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ, ಆರ್. ಅಶೋಕ್, ಬಸವರಾಜ್ ಬೊಮ್ಮಾಯಿ, ಡಾ. ಅಶ್ವತ್ಥ ನಾರಾಯಣ ಹೆಸರುಗಳು ಮುಂಚೂಣಿಯಲ್ಲಿವೆ. ಅಷ್ಟೇ ಅಲ್ಲದೆ ಗೋವಿಂದ ಕಾರಜೋಳ, ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಕೂಡಾ ಕೇಳಿ ಬರುತ್ತಿದೆ.
ಮತ್ತೆ ನಾಯಕತ್ವ ಬದಲಾವಣೆಯ ಕೂಗು!? ದಿಲ್ಲಿಯಲ್ಲಿ ಬೀಡುಬಿಟ್ಟ ಬಿಜೆಪಿ ಅತೃಪ್ತರ ತಂಡ!
ತಮ್ಮ ಕುರ್ಚಿ ಅಲುಗಾಡುತ್ತಿರುವುದನ್ನು ನೋಡಿಕೊಂಡು ಸುಮ್ಮನಾಗುವ ಜಾಯಮಾನ ಬಿಎಸ್ ಯಡಿಯೂರಪ್ಪ ಅವರದ್ದಲ್ಲ, ಹೇಗಾದರೂ ಮಾಡಿ ಕಷ್ಟ ಪಟ್ಟು ಗಳಿಸಿಕೊಂಡ ಸ್ಥಾನವನ್ನು ಉಳಿಸಿಕೊಳ್ಳಲು ಬಿಎಸ್‌ವೈ ಕೂಡಾ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಜಾತಿ ಹಾಗೂ ಆಪ್ತ ವಲಯದ ಪ್ರಭಾವ ಬಳಸಿಕೊಂಡು ಹೈಕಮಾಂಡ್‌ಗೆ ಸಡ್ಡು ಹೊಡೆಯುವುದು ಅವರ ತಂತ್ರವಾಗಿದೆ.
CM ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ!
ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾಗಿ ಪಕ್ಷಕ್ಕೆ ವಲಸೆ ಬಂದ ವಲಸಿಗರು ಸದ್ಯ ಯಡಿಯೂರಪ್ಪ ಪಾಲಿಗೆ ಶಕ್ತಿಯಾಗಿದ್ದಾರೆ. ಅವರ ಜೊತೆಗೆ ಆಪ್ತ ವಲಯದಲ್ಲಿರುವ ಕೆಲವು ಶಾಸಕರನ್ನು ಒಟ್ಟು ಮಾಡಿಕೊಂಡು ಹೈಕಮಾಂಡ್ ನಾಯಕರಿಗೆ ಸಂದೇಶ ಕಲುಹಿಸಲು ಬಿಎಸ್‌ವೈ ಮುಂದಾಗಿದ್ದಾರೆ. ಆದರೆ ಸಂಘ ನಿಷ್ಠರ ಬೆಂಬಲ ಸಿಗುವುದು ಮಾತ್ರ ಅನುಮಾನ. ಒಂದು ವೇಳೆ ತಾನು ಅಂದುಕೊಂಡಿದ್ದು ನಡೆಯದೇ ಇದ್ದರೆ ತಮ್ಮ ಬೆಂಬಲಿಗರನ್ನು ಸಿಎಂ ಸ್ಥಾನದಲ್ಲಿ ಕೂರಿಸಿ ತಾವು ಸೂಪರ್ ಸಿಎಂ ಆಗುವಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ ಎನ್ನುತ್ತಿವೆ ಬಿಜೆಪಿ ಮೂಲಗಳು.
'ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ'
ಒಟ್ಟಿನಲ್ಲಿ ರಾಜ್ಯ ರಾಜಕೀಯ ಕುತೂಹಲದ ಘಟ್ಟವನ್ನು ತಲುಪುತ್ತಿದೆ. ಹೇಗಾದರೂ ಮಾಡಿ ಬಿಎಸ್ ಯಡಿಯೂರಪ್ಪ ಬಲವನ್ನು ಕುಂದಿಸುವ ಕೆಲಸ ಹೈಕಮಾಂಡ್ ನಡೆಸುತ್ತಿದೆ. ಆದರೆ ಕಟ್ಟಿ ಬೆಳೆಸಿದ ಪಕ್ಷದಲ್ಲಿ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಲಾರೆ ಎಂಬವುದು ಬಿಎಸ್ ಯಡಿಯೂರಪ್ಪ ವಾದವಾಗಿದೆ. ಅದೇನೇ ಇದ್ದರೂ ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ರಾಜಕೀಯದ ಮುಂದಿನ ಭವಿಷ್ಯದ ಕುರಿತಾಗಿ ಸ್ಪಷ್ಟತೆ ಸಿಗಲಿದೆ.
ನಿಮ್ಮ ಮನೆಗೆ ಹೊಸದಾಗಿ ನೀರಿನ ನಳ ಸಂಪರ್ಕಕ್ಕಾಗಿ ಆನ್‍ಲೈನ್ ಅರ್ಜಿ ...!