ಬೆಂಗಳೂರು : ಹೊಸ ವರ್ಷದ ಸಂಭ್ರಮದ ಬೆನ್ನಲ್ಲೇ ಶಾಕ್ ನೀಡಲು ಸರ್ಕಾರ ಮುಂದಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ಮತ್ತೊಮ್ಮೆ  ಬಿಸಿ ತಟ್ಟಲಿದೆ. ಬಸ್ಸುದರ, ನೀರಿನ ಬಿಲ್  ಏರಿಕೆಗೆ  ಪ್ರಸ್ತಾವನೆ ಸಲ್ಲಿಸಲಾಗಿದೆ. 


COMMERCIAL BREAK
SCROLL TO CONTINUE READING

ಸಾರ್ವಜನಿಕರಿಗೆ ಬ್ಯಾಕ್ ಟೂ ಬ್ಯಾಕ್ ಶಾಕ್  :
ಹೊಸ ವರ್ಷದ ಸಂಭ್ರಮದಲ್ಲಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಹೀಗಾಗಿ ಸಂಕ್ರಾಂತಿ ನಂತರ ಟಿಕೆಟ್ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಮನವಿ ಮಾಡಲಾಗಿದೆ. ಬಿಎಂಟಿಸಿ ಟಿಕೆಟ್ ದರ ಏರಿಕೆ ಮಾಡಿ 10 ವರ್ಷಗಳಾಗಿವೆ. ಕೆಎಸ್ಆರ್ ಟಿಸಿ ಟಿಕೆಟ್ ಏರಿಕೆ ಮಾಡಿ ಐದು ವರ್ಷಗಳಾಗಿವೆ.  ಪೆಟ್ರೋಲ್-ಡೀಸೆಲ್ ದರ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಇಂಧನ‌ ದರ ನಾಲ್ಕೈದು ವರ್ಷದಲ್ಲಿ ಏರಿಕೆಯಾಗುತ್ತಲೇ ಬಂದಿದೆ. ಅದಕ್ಕೆ ಅನುಗುಣವಾಗಿ ಟಿಕೆಟ್ ದರ ಏರಿಕೆಯಾಗಬೇಕು. ಹಾಗಾಗಿ ನಿಗಮಗಳನ್ನು ನಡೆಸಲು ಕಷ್ಟ ಆಗುತ್ತಿದೆ. ಟಿಕೆಟ್ ದರ ಏರಿಕೆ ಮಾಡಿದರೆ ಮಾತ್ರ ಬಿಎಂಟಿಸಿ, ಕೆಎಸ್ಆರ್ ಟಿಸಿ ಉಳಿಸಲು ಸಾಧ್ಯ ಎಂದು ಸಿಎಂಗೆ ಅಧಿಕಾರಿಗಳು ಮನವರಿಕೆ ಮಾಡಿದ್ದಾರೆ.


ಇದನ್ನೂ ಓದಿ : ಕಟ್ಟಡದಿಂದ ಆಯತಪ್ಪಿ ಬಿದ್ದಿದ್ದ ಶಾಲಾ ವಿದ್ಯಾರ್ಥಿ ಸಾವು!


ಇನ್ನು  ಜನರ ಜೀವನಾಡಿ ನೀರು. ಸದ್ಯ ಜಲಮಂಡಳಿ  ಪ್ರತಿ ತಿಂಗಳಿಗೆ 41 ಕೋಟಿ‌ ರೂಪಾಯಿ ನಷ್ಟದಲ್ಲಿದೆ. ಜಲಮಂಡಳಿ 52 ರೂ ಖರ್ಚು ಮಾಡಿ 25 ರಿಂದ 49 ರೂ.ಗೆ ನೀರು ಮಾರಾಟ ಮಾಡುತ್ತಿದ್ದು, ಇದರಿಂದ ಭಾರೀ ನಷ್ಟವಾಗಿದೆ.  ಹೀಗಾಗಿ ಬೆಂಗಳೂರಿನ ಎಲ್ಲಾ ಶಾಸಕರಿಗೆ ಜಲಮಂಡಳಿ ಪತ್ರ ಬರೆದಿದ್ದು, ಜನವರಿ ಎರಡನೇ ವಾರ ಶಾಸಕರು ಡಿಸಿಎಂ ಜೊತೆ ಚರ್ಚೆ ನಡೆಸಿ ನೀರಿನ ದರ ಹೆಚ್ಚು ಮಾಡುವ ಯೋಜನೆ ಮಾಡಿದ್ದಾರೆ 


ಒಟ್ಟಿನಲ್ಲಿ, ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸರ್ಕಾರ, ಜನಸಾಮಾನ್ಯರಿಗೆ ದರ ಏರಿಕೆ ಬಿಸಿ ಮೂಲಕ ಯಾವ ರೀತಿ ಬರೆ ಹಾಕುತ್ತದೆ ಕಾದು ನೋಡಬೇಕಾಗಿದೆ.


ಇದನ್ನೂ ಓದಿ : ಮುಖ್ಯಮಂತ್ರಿಯವರಿಗೆ 40.53 ಕೋಟಿ ರೂ. ಲಾಭಾಂಶ ಅರ್ಪಿಸಿದ ಕ್ರೆಡಲ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ