ಹಾವೇರಿ: ಪೋಕ್ಸೊ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಕೋರ್ಟ್ ಜಾಮೀನು ನೀಡಿರುವುದು ನ್ಯಾಯಸಮ್ಮತವಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Health Tips: ಸದಾ ಆರೋಗ್ಯವಾಗಿರಲು ಅಜ್ಜಿ ಹೇಳಿದ ಈ ಅದ್ಭುತ ಸಲಹೆಗಳನ್ನು ಪಾಲಿಸಿರಿ


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಆ ತರಹದ ವಿಚಾರದಲ್ಲಿ ಭಾಗಿಯಾಗಿಲ್ಲ. ಅವರ ವಿರುದ್ದ ಷಡ್ಯಂತ್ರ ಮಾಡಿದ್ದು ಅಧಿಕಾರಿಗಳು ಕರೆದಾಗ ಹೋಗಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಯಡಿಯೂರಪ್ಪನವರಿಗೆ ಸನ್ನಡತೆಯಿದೆ. ಕೋರ್ಟ್ ಇದನ್ನು ಒಪ್ಪಿಕೊಂಡು ಸದ್ಯ ರಿಲೀಪ್ ಕೊಟ್ಟಿದ್ದು ನ್ಯಾಯಸಮ್ಮತವಾಗಿದೆ ನಾವು ಸ್ವಾಗತ ಮಾಡುತ್ತೇವೆ. ಮುಂದೆಯು ಕಾನೂನು ಹೋರಾಟದಲ್ಲಿ ಯಡಿಯೂರಪ್ಪನವರು ವಿಜಯಶಾಲಿಯಾಗುವ ವಿಶ್ವಾಸವಿದೆ ಎಂದು ಹೇಳಿದರು.


ಇದನ್ನೂ ಓದಿ: ಚಿಟಿಕೆಯಷ್ಟು ಕಾಳುಮೆಣಸಿನ ಪುಡಿಯನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ನಿಮಿಷದಲ್ಲಿ ಕಪ್ಪುಬಣ್ಣಕ್ಕೆ ತಿರುಗುತ್ತೆ ಬಿಳಿಕೂದಲು


ಇದಕ್ಕೂ ಮೊದಲು ಮಾತನಾಡಿದ ಅವರು, “ಯಡಿಯೂರಪ್ಪ ಅವರ ವಿರುದ್ದದ ಪ್ರಕರಣ ನೋಡಿದರೆ ಇದೊಂದು ರಾಜಕೀಯ ಪಿತೂರಿ, ಖಂಡಿತವಾಗಿಯೂ ಷಂಡ್ಯಂತ್ರ. ಅದು ಸಂಪೂರ್ಣ ಕೇಸ್ ಪಾಲೋ ಮಾಡಿದರೆ, ಅದರ ಹಿನ್ನಲೆ ನೋಡಿದರೆ ಷಂಡ್ಯಂತ್ರ ಇದೆ. ಮೂರು ತಿಂಗಳ ಬಿಟ್ಟು, ಈಗ ಒಂದೇ ದಿನಕ್ಕೆ ಸಮಯ ಕೊಟ್ಟು, ವಾರೆಂಟ್ ನೀಡುವುದು ಬಹಳಷ್ಟು ಲ್ಯಾಪ್ಸ ಇದೆ. ಅವರ ವಿರುದ್ದ ಈ ಹಿಂದೆ ಹಲವಾರು ಕೇಸಗಳನ್ನು ಹಾಕಿದ್ದರು. ಆ ಎಲ್ಲಾ ಕೇಸ್ ಗಳಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗಿ ಗೆದ್ದುಕೊಂಡು ಬಂದಿದ್ದಾರೆ. ಅವೇಲ್ಲಾ ಸುಳ್ಳು ಕೇಸ ಗಳು ಅನ್ನುವುದು ಗೊತ್ತಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವವರೆಗೂ ಕೇಸ್ ಮಾಡಿದ್ದರು‌. ಬಹುತೇಕ ರಾಷ್ಟ್ರದಲ್ಲಿ ರಾಜಕಾರಣದಲ್ಲಿ ರಾಜಕಾರಣಿಗೆ ಕೇಸ್ ಹಾಕಿ ಕಟ್ಟಿ ಹಾಕುವ  ಪ್ರಯತ್ನ ಮಾಡಿದ್ದಾರೆ. ನಮಗೆ ವಿಶ್ವಾಸ ಇದೆ. ಈ ಪ್ರಕರಣದಲ್ಲಿ ಸಹ ಯಡಿಯೂರಪ್ಪವರಿಗೆ ನ್ಯಾಯ ಸಿಗುತ್ತದೆ” ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.