ಗಡಿಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್: ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು
ಬಕ್ರೀದ್ ಪ್ರಯುಕ್ತ ಇಂದು ಚಾಮರಾಜನಗರ ಈದ್ಗಾ ಮೈದಾನ, ಸೋಮವಾರಪೇಟೆ, ಗುಂಡ್ಲುಪೇಟೆ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಚಾಮರಾಜನಗರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸೋಮವಾರ (ಜೂನ್ 17) ಮುಸ್ಲಿಮರು ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.
ಚಾಮರಾಜನಗರ ಈದ್ಗಾ ಮೈದಾನ, ಸೋಮವಾರಪೇಟೆ, ಗುಂಡ್ಲುಪೇಟೆ ಈದ್ಗಾ ಮೈದಾನಗಳಲ್ಲಿ ಹೊಸ ದಿರಿಸು ಧರಿಸಿ ತೊಟ್ಟ ಚಿಣ್ಣರು, ಹಿರಿಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಇಸ್ಲಾಂ ಘೋಷವಾಕ್ಯ ಪಠಿಸಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು.
ಇದನ್ನೂ ಓದಿ- 150 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಬಿಬಿಎಂಪಿ : ಆರಂಭಿಕ ವೇತನ ಎಷ್ಟು?
ಮುಸ್ಲಿಂ ಧರ್ಮ ಗುರುಗಳು ಪ್ರಚವನ ನೀಡಿ, ಹಬ್ಬದ ಶುಭ ಸಂದೇಶಗಳನ್ನು ನೀಡಿದರು. ಚಾಮರಾಜನಗರ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಶಾಸಕ ಹಾಗೂ ಎಂಎಸ್ಐಎಲ್ ಅಧ್ಯಕ್ಷ ಪುಟ್ಟರಂಗಶೆಟ್ಟಿ ಭಾಗಿಯಾಗಿ ಶುಭಾಶಯ ಕೋರಿದರು. ನಾನು ನಾಲ್ಕು ಬಾರಿ ಗೆಲ್ಲಲು ತಮ್ಮೆಲ್ಲರ ಸಹಕಾರ, ಪ್ರಾರ್ಥನೆ ಕಾರಣ. ನಿಮ್ಮೆಲ್ಲರ ಪ್ರಾರ್ಥನೆಯಂತೆ ಮಳೆ-ಬೆಳೆ ಚೆನ್ನಾಗಿ ಈ ಬಾರಿ ಆಗಲಿ ಎಂದು ಆಶಿಸಿದರು.
ಇದನ್ನೂ ಓದಿ- ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರೇ ದಂಗೆ ಏಳಬೇಕು: ಬೆಲೆ ಏರಿಕೆ ವಿರುದ್ಧ ಎಚ್‌ಡಿಕೆ ಕಿಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.