ಯಾರದ್ದೋ ನಿರ್ಲಕ್ಷ್ಯ ಕಟ್ಟಡ ಕುಸಿತಕ್ಕೆ ಬಲಿಯಾಗಿದ್ದು 8 ಜೀವ..!
ಅವರೆಲ್ಲರೂ ಬೇರೆ ರಾಜ್ಯ ಊರುಗಳಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದವರು. ಅದ್ಯಾರದ್ದೋ ನಿರ್ಲಕ್ಷ್ಯಕ್ಕೆ ಬಲಿಯಾಗ್ತಿದ್ದಾರೆ.. ನಿನ್ನೆ ಬಾಬುಸಾಬ್ ಪಾಳ್ಯದಲ್ಲಿ ಸಂಭವಿಸಿದ್ದ ಕಟ್ಟಡ ದುರಂತದಲ್ಲಿ ಅವಶೇಷಗಳನ್ನ ತೆಗೆದಂತೆಲ್ಲಾ ಒಂದೊಂದೇ ಮೃತದೇಹಗಳು ಸಿಗ್ತಿವೆ. ನಿನ್ನೆ ನಡೆದಿರೋದು ದುರಂತ ಅಲ್ಲ.. ನರಹತ್ಯೆ ಅನ್ನೋ ರೀತಿ ಇದೆ ಅಲ್ಲಿನ ದೃಶ್ಯಗಳು.
ಬೆಂಗಳೂರು : ನಗರದ ಬಾಬುಸಾಬ್ ಪಾಳ್ಯದಲ್ಲಿ ನಿನ್ನೆ ಕಟ್ಟಡ ದುರಂತದಲ್ಲಿ ಒಬ್ಬಬ್ಬರೇ ಕಾರ್ಮಿಕರು ಶವವಾಗಿ ಸಿಗ್ತಿದ್ದಾರೆ.. ನಿನ್ನೆಯಿಂದ ಕಟ್ಟಡದಲ್ಲಿ ಸಿಲುಕಿರುವವರ ಕಾರ್ಯಾಚರಣೆಗೆ ಮುಂದಾಗಿದ್ದ NDRF, SDRF ತಂಡಗಳು ಬದುಕುಳಿದವರ ರಕ್ಷಣೆಗೆ ಮುಂದಾಗಿದ್ರು. ಬೆಳಗ್ಗೆ 8.30ರವರೆಗೂ ಬದುಕುಳಿದವರನ್ನ ಜೀವಂತವಾಗಿ ಹೊರ ತೆಗೆದ್ರು.. ಈವರೆಗೆ ಒಟ್ಟು ಹದಿಮೂರು ಜನರನ್ನ ರಕ್ಷಣೆ ಮಾಡಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.. ಇನ್ನು ಈ ದುರಂತದಲ್ಲಿ ಸಾವನ್ನಪ್ಪಿರೋರ ಎಂಟಕ್ಕೆ ಏರಿದ್ದು ಇನ್ನೂ ಇಬ್ಬರು ಮೂರು ಜನ ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಮಾಹಿತಿ ಇದೆ.
ಪೊಲೀಸರಿಗೆ ಸಿಕ್ಕಿರೋ ಲಿಸ್ಟ್ ಪ್ರಕಾರ ಬಿಹಾರ ಮೂಲದವ್ಅದ ಅರ್ಮನ್, ತ್ರಿಪಾಲ್, ಮೊಹಮದ್ ಸಾಹಿಲ್ ,ಸತ್ಯರಾಜು, ಶಂಕರ್ , ತ್ರಿಪಾಲ್, ತುಳಸಿ ರೆಡ್ಡಿ, ಪುಲ್ಚನ್ ಯಾದವ್ ಎಂಬ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನು ಜಗದೇವಿ, ರಶೀದ್, ನಾಗರಾಜು, ರಮೇಶ್ ಕುಮಾರ್ , ಹರ್ಮನ್, ಅಯಾಜ್ ಸೇರಿ ಹದಿಮೂರು ಜನರಿಗೆ ಘಟನೆಯಲ್ಲಿ ಗಾಯಗಳಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ನಾರ್ಥ್ ಹಾಸ್ಪಿಟಲ್ , ಹಾಸ್ಮ್ಯಾಟ್ ಹಾಗೂ ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಈ ಪೈಕಿ ಸದ್ಯ 5 ಜನಕ್ಕೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಗಾಯಳು ರಶೀದ್ ನನ್ನ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.. ಈ ಪೈಕಿ 55 ವರ್ಷದ ಜಗದೇವಿ ಪರಿಸ್ಥಿತಿ ಗಂಭೀರವಾಗಿದ್ದು, ಮಲ್ಟಿಪಲ್ ಇಂಜುರಿಯಿಂದ ಮಹಿಳೆ ಬಳಲುತ್ತಿದ್ದಾರೆ..
ಇದನ್ನೂ ಓದಿ:ಶನಿಮಠಕ್ಕೆ ಬೆಂಕಿ ಪ್ರಕರಣ ಪಾಟೀಲ್ ಬಿರಾದಾರ ಎಂಬ ವ್ಯಕ್ತಿ ವಿರುದ್ಧ ದೂರು
ಇನ್ನು ಕಟ್ಟಡ ಬೀಳೋಕೆ ಕಳಪೆ ಕಾಮಗಾರಿ ಕಾರಣ ಎನ್ನಲಾಗ್ತಿದೆ.. ಪಿಲ್ಲರ್ ಗೆ ಕಡಿಮೆ ಎಂಎಂನ ಕಬ್ಬಿಣ ಬಳಕೆ ಹಾಗೂ ಸಿಮೆಂಟ್ ಗಿಂತ ಹೆಚ್ಚಾಗಿ ಎಂ ಸ್ಯಾಂಡ್ ಬಳಸಿರೋದು ಗೊತ್ತಾಗಿದೆ. ಈ ಬಗ್ಗೆ ಬಿಎನ್ ಎಸ್ ಕಾಯ್ದೆ 105, 125(A) , 125(B) , 270, 3(5) ಹಾಗು ಬಿಬಿಎಂಪಿ ಆ್ಯಕ್ಟ್ 326, 327, 328, ರೇರಾ ಕಾಯ್ದೆಗಳ ಉಲ್ಲಂಘನೆ ಸೆಕ್ಷನ್ 3 ರಡಿ ಎಫ್ ಐ ಆರ್ ದಾಖಲಾಗಿದೆ. ಕಟ್ಟಡದ ಮಾಲೀಕ ಎ೧ ಆರೋಪಿ ಭುವನ್ ರೆಡ್ಡಿಯನ್ನ ಅರೆಸ್ಟ್ ಮಾಡಲಾಗಿದೆ. ಮೊದಲ ನಾಲ್ಕು ಫ್ಲೋರ್ ಕಟ್ಟಡ ನಿರ್ಮಾಣ ಮಾಡಿದ ಕಾಂಟ್ರ್ಯಾಕ್ಟರ್ ಮುನಿಯಪ್ಪನನ್ನ ವಶಕ್ಕೆ ಪಡೆದಿರುವ ಹೆಣ್ಣೂರು ಪೊಲೀಸ್ರು ವಿಚಾರಣೆ ನಡೆಸ್ತಿದ್ದಾರೆ..
ಏನೇ ಹೇಳಿ ತುತ್ತಿನ ಊಟಕ್ಕಾಗಿ ಕೂಲಿ ಕೆಲಸ ಅರಸಿ ಸಾವಿರಾರು ಕಿಮೀ ಗಳಿಂದ ಬೆಂಗಳೂರಿಗೆ ಬಂದ ಕಾರ್ಮಿಕರು ಯಾರದ್ದೋ ತಪ್ಪಿಗೆ ತಮ್ಮ ಪ್ರಾಣ ಕಳೆದುಕೊಂಡಿರೋದು ನಿಜಕ್ಕೂ ದುರಾದೃಷ್ಟ.. ಸತ್ತವರ ಹಾಗೂ ಗಾಯಾಳುಗಳ ಕುಟುಂಬಕ್ಕೆ ಪರಿಹಾರ ನೀಡುವ ಅವಶ್ಯಕತೆಯಿದೆ. ಈಗಾಗಲೇ ಕಾರ್ಮಿಕ ಇಲಾಖೆಯಿಂದ ತಲಾ ಎರಡು ಲಕ್ಷ ಪರಿಹಾರ ಕೊಡೋಕೆ ನಿರ್ಧಾರ ಮಾಡಿದ್ದಾರಂತೆ.. ಆದ್ರೆ ಜೀವ, ಜೀವನ ಕಳೆದುಕೊಂಡಿರೋ ಕಾರ್ಮಿಕರ ಕುಟುಂಬಸ್ಥರಿಗೆ ಇಷ್ಟು ಪರಿಹಾರ ಏನೂ ಆಗಲ್ಲ.. ಸಂಬಂಧಪಟ್ಟ ರಾಜಕಾರಣಿಗಳು ಆ ಕುಟುಂಬಗಳಿಗೆ ನ್ಯಾಯ ಒದಗಿಸಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ